ದೇವೇಂದ್ರ ಫಡ್ನವೀಸ್ ಅವರ ಸಮರ್ಥ ನಾಯಕತ್ವದಲ್ಲಿ ಮಹಾರಾಷ್ಟ್ರವು ಭಯೋತ್ಪಾದನೆ, ಅಪರಾಧ ಮತ್ತು ನಿರುದ್ಯೋಗವನ್ನು ಎದುರಿಸಿ ನಿಲ್ಲುವಲ್ಲಿ ಯಶಸ್ವಿಯಾಗಿದೆ. ಆದರೆ ಇನ್ನೂ ಅದ್ಭುತವಾದ ಸಂಗತಿಯೆಂದರೆ ಮಹಾರಾಷ್ಟ್ರದ ಗ್ರಾಮೀಣ ಮತ್ತು ಅರೆ-ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಮೌನಕ್ರಾಂತಿ. ಮಹಿಳೆಯರ ಸಕ್ರಿಯ ಭಾಗವಹಿಸುವಿಕೆ ಇಲ್ಲದೆ ಯಾವುದೇ ಸುಧಾರಣೆಗಳೂ ಪೂರ್ಣಗೊಳ್ಳಲು ಸಾಧ್ಯವಿಲ್ಲ, ಆದರೆ ಮಹಾರಾಷ್ಟ್ರದಲ್ಲಿ ಮಹಿಳೆಯರನ್ನು ಸುಧಾರಣಾ ಪ್ರಕ್ರಿಯೆಯ ಭಾಗವನ್ನಾಗಿ ಮಾಡಲು ಸಿಎಂ ಫಡ್ನವೀಸ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅದಕ್ಕಾಗಿಯೇ ಅವರ ಮಹಾ ಜನಾದೇಶದ ಯಾತ್ರೆಯಲ್ಲಿ ಮಹಿಳೆಯರು ಅವರಿಗೆ ಮುಂಚೂಣಿಯಲ್ಲಿ ನಿಂತು ಸ್ವಾಗತವನ್ನು ಕೋರುತ್ತಿದ್ದಾರೆ.
ಇಂದಿನ ಜಗತ್ತಿನಲ್ಲಿ ಮಹಿಳೆಯರು ಹೆಚ್ಚು ಹೋರಾಡುವುದು ಯಾವುದಕ್ಕಾಗಿ? ಹಣಕಾಸಿನ ಸೇರ್ಪಡೆ, ಸುರಕ್ಷತೆ, ಆರೋಗ್ಯ, ಆಹಾರ ಮತ್ತು ನೀರು. ಈ ವಿಷಯಗಳು ಮಹಿಳೆಯರು ಹೆಚ್ಚು ಚಿಂತಿತರಾಗಿರುತ್ತಾರೆ, ಇದಕ್ಕಾಗಿ ದಿನನಿತ್ಯ ಹೋರಾಟ ಮಾಡುತ್ತಾರೆ. ಪ್ರಸ್ತುತ ದೇಶದ ಕಿರಿಯ ವಯಸ್ಸಿನ ಮುಖ್ಯಮಂತ್ರಿಯಲ್ಲೊಬ್ಬರಾಗಿ, ದೇವೇಂದ್ರ ಫಡ್ನವೀಸ್ ಬಹುಶಃ ಮಹಾರಾಷ್ಟ್ರದ ಮಹಿಳೆಯರ ಆಕಾಂಕ್ಷೆಗಳ ಬಗ್ಗೆ ಉತ್ತಮ ದೃಷ್ಟಿಕೋನವನ್ನು ಹೊಂದಿದ್ದಾರೆ ಮತ್ತು ಅವರ ಸಮಸ್ಯೆಗಳನ್ನು ದೀರ್ಘಕಾಲೀನ ಕಾರ್ಯತಂತ್ರಗಳಿಂದ ನಿವಾರಿಸಲು ಶ್ರಮಿಸುತ್ತಿದ್ದಾರೆ. ಪ್ಯಾಚ್-ವರ್ಕ್ ಪರಿಹಾರಗಳಿಂದ ದೂರವಿರುವುದು ಮುಂದಿನ ದಿನಗಳಲ್ಲಿ ನಮಗೆ ಹೆಚ್ಚಿನ ಲಾಭಾಂಶವನ್ನು ನೀಡುತ್ತದೆ ಎಂಬುದು ಅವರ ನಂಬಿಕೆ. ಸಮಸ್ಯೆಯ ವಲಯಗಳು ಮತ್ತು ಫಡ್ನವಿಸ್ ಸರ್ಕಾರವು ಅವುಗಳನ್ನು ಹೇಗೆ ನಿಭಾಯಿಸಿದೆ ಎಂಬುದರ ಬಗ್ಗೆ ಒಳನೋಟ ಇಲ್ಲಿದೆ.
ಹಣಕಾಸು ಸೇರ್ಪಡೆ
ಸ್ವ-ಸಹಾಯ ಗುಂಪುಗಳು ಮಹಿಳೆಯರನ್ನು ಉನ್ನತಿಗೇರಿಸುವ ಮತ್ತು ರಾಷ್ಟ್ರದ ಬೆಳವಣಿಗೆಯಲ್ಲಿ ಅವರನ್ನು ಸೇರಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಮಹಿಳೆಯರನ್ನು ಸಬಲೀಕರಣಗೊಳಿಸಲು ಮಹಾರಾಷ್ಟ್ರ ಸರ್ಕಾರ ರಾಜ್ಯದ 36 ಜಿಲ್ಲೆಗಳಲ್ಲಿ ಬಹುಮುಖ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯೋಜಿಸಿದೆ. ‘ಹಿರ್ಕಣಿ ಮಹಾರಾಷ್ಟ್ರ’ ಮಹಾರಾಷ್ಟ್ರ ಸ್ಟೇಟ್ ಇನ್ನೋವೇಶನ್ ಸೊಸೈಟಿ (ಎಂಎಸ್ಐಎನ್ಎಸ್) ನಡೆಸುವ ಯೋಜನೆಯಾಗಿದ್ದು, ಇದು ರಾಜ್ಯ ಕೌಶಲ್ಯ ಮತ್ತು ಉದ್ಯಮಶೀಲತೆ ಇಲಾಖೆಗಳ ವ್ಯಾಪ್ತಿಗೆ ಬರುತ್ತದೆ. ಪ್ರತಿ ತಾಲೂಕಿನಿಂದ 10 ಗುಂಪುಗಳ ಸ್ವಸಹಾಯ ಗುಂಪುಗಳಿಗೆ ತಮ್ಮ ಆಲೋಚನೆಯನ್ನು ಕಾರ್ಯಗತಗೊಳಿಸಲು 50,000 ರೂಪಾಯಿ ನೀಡಲಾಗುತ್ತದೆ ಮತ್ತು ಜಿಲ್ಲಾ ಮಟ್ಟದಲ್ಲಿ ಐದು ಸ್ವಸಹಾಯ ಗುಂಪುಗಳನ್ನು ಆಯ್ಕೆ ಮಾಡಲಾಗುತ್ತದೆ, ಈ ಸ್ವಸಹಾಯ ಗುಂಪಿಗೆ 2 ಲಕ್ಷ ರೂಪಾಯಿ ನೀಡಲಾಗುತ್ತದೆ. ಇದು ಗ್ರಾಮೀಣ ಮಟ್ಟದಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುತ್ತದೆ. ಜಿಲ್ಲಾ ವ್ಯಾಪಾರ ಯೋಜನೆ ಸ್ಪರ್ಧೆಯಡಿಯಲ್ಲಿ, ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಗಳು ವಿಚಾರಗಳನ್ನು ಆರಿಸಿಕೊಳ್ಳುತ್ತಾರೆ, ಅದರಲ್ಲಿ ಐದು ವಿಚಾರಗಳನ್ನು ಕೃಷಿ, ಸಾಮಾಜಿಕ ಸೇವೆ, ಶಿಕ್ಷಣ ಮತ್ತು ವಿವಿಧ ವಿಭಾಗಗಳಿಂದ ಆಯ್ಕೆ ಮಾಡಲಾಗುತ್ತದೆ ಮತ್ತು ಆಯ್ದ ಐದು ವಿಚಾರಗಳಿಗೆ 5 ಲಕ್ಷ ರೂ.ಗಳ ಮೌಲ್ಯದ ಕಾರ್ಯ ಕ್ರಮವನ್ನು ನೀಡಲಾಗುತ್ತದೆ ಮತ್ತು ಉತ್ತಮ ಆಲೋಚನೆಗಳನ್ನು ಕಿರುಪಟ್ಟಿ ಮಾಡಲಾಗುತ್ತದೆ ಮತ್ತು ಅಂತಹ ಉದ್ಯಮಿಗಳಿಗೆ ಸರ್ಕಾರವು ಕೆಲಸದ ಆರ್ಡರ್ ಅನ್ನು ನೀಡುತ್ತದೆ.
ಮುದ್ರಾ ಯೋಜನೆಯಡಿ ಮಹಾರಾಷ್ಟ್ರದಲ್ಲಿ ಲಕ್ಷಾಂತರ ಮಹಿಳೆಯರಿಗೆ ಸಾಲ ನೀಡಲಾಗಿದೆ. ಭಾರತದ ಉಳಿದ ಭಾಗಗಳಿಗೆ ಹೋಲಿಸಿದರೆ ಇದು ಗರಿಷ್ಠ 15% ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಿದೆ ಎಂಬುದು ಹೆಮ್ಮೆಯ ವಿಷಯ.
ಈ ವರ್ಷ, ಬಜೆಟ್ನಲ್ಲಿ ರಾಜ್ಯ ಸರ್ಕಾರವು ಇನ್ನೂ ಎರಡು ಮಹಿಳಾ ಸಬಲೀಕರಣ ಯೋಜನೆಗೆ 2500 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಪ್ರಜ್ವಲಾ ಯೋಜನೆ ಮತ್ತು ನವತೇಜಸ್ವಿನಿನ್ ಯೋಜನೆ ಮುಂತಾದುವುಗಳಿಗೆ ಹಣ ಪೂರೈಕೆಯಾಗುತ್ತದೆ. ಪ್ರಜ್ವಲಾ ಯೋಜನೆ ಶಿಬಿರಗಳನ್ನು ಆಯೋಜಿಸುತ್ತದೆ, ವಿವಿಧ ಸ್ಥಳಗಳಲ್ಲಿ ಜಾಗೃತಿ ಅಭಿಯಾನ ನಡೆಸುತ್ತದೆ. ನವತೇಜಸ್ವಿನಿನ್ ಯೋಜನೆಯಡಿ ಹಲವಾರು ಕೌಶಲ್ಯ ತರಬೇತಿ ಕಾರ್ಯಕ್ರಮಗಳು ಮತ್ತು ಸ್ಟಾರ್ಟ್ಅಪ್ಗಳನ್ನು ಸರ್ಕಾರ ಆಯೋಜಿಸುತ್ತದೆ.
ಮಹಿಳಾ ಸುರಕ್ಷತೆ
ಮುಂಬಯಿ, ಪುಣೆ, ನಾಗ್ಪುರ ಮುಂತಾದ ನಗರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ನಗರ ಪ್ರದೇಶಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸಲಾಗಿದೆ. ರೈಲುಗಳಲ್ಲಿನ ಮಹಿಳಾ ವಿಭಾಗಗಳಲ್ಲಿ ಮತ್ತು ರಸ್ತೆಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ, ವಿಶೇಷವಾಗಿ ರಾತ್ರಿಯಲ್ಲಿ. ಮೊದಲನೆಯದಾಗಿ, ಕೇಂದ್ರ ಮತ್ತು ರಾಜ್ಯದಿಂದ ಧನಸಹಾಯದೊಂದಿಗೆ ಮಹಿಳೆಯರಿಗಾಗಿ 252 ಕೋಟಿ ರೂ.ಗಳ ಭದ್ರತಾ ಯೋಜನೆಯನ್ನು ತರಲಾಗಿದೆ. ಇದರ ಭಾಗವಾಗಿ ಮುಂಬಯಿ ಪೊಲೀಸರು ಮುಂದಿನ ಮೂರು ವರ್ಷಗಳಲ್ಲಿ ನಗರದಾದ್ಯಂತ 125 ಮುಖ ಗುರುತಿಸುವಿಕೆ ಕ್ಯಾಮೆರಾಗಳನ್ನು ಸ್ಥಾಪಿಸಲು ಸಜ್ಜಾಗಿದ್ದಾರೆ. ಮುಂಬಯಿಗೆ ಹೆಚ್ಚುವರಿಯಾಗಿ 1,600 ಸಿಸಿಟಿವಿ ಕ್ಯಾಮೆರಾಗಳು, ಎರಡು ಡ್ರೋನ್ಗಳು, ಕ್ರಿಮಿನಲ್ ಹಾಟ್ಸ್ಪಾಟ್ಗಳ ಜಿಐಎಸ್ ಮ್ಯಾಪಿಂಗ್, ಪೊಲೀಸ್ ವಾಹನಗಳಲ್ಲಿ 100 ಮೌಂಟೆಡ್ ಪನೋರಮಿಕ್ ಕ್ಯಾಮೆರಾಗಳು ಮತ್ತು 100 ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ಕ್ಯಾಮೆರಾಗಳು ಸಿಗಲಿವೆ. ಕಾಣೆಯಾದವರ ಬಗ್ಗೆ ಆನ್ಲೈನ್ ಮಾಹಿತಿ, ಮುಂಬಯಿ, ಥಾಣೆ ಮತ್ತು ನವೀ ಮುಂಬೈ ಪೊಲೀಸ್ ಘಟಕಗಳಲ್ಲಿ ಸಹಾಯವಾಣಿ ಸಂಖ್ಯೆ 103 ಮತ್ತು ಉಳಿದ ಮಹಾರಾಷ್ಟ್ರಗಳಿಗೆ ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ 1091 ಇವೆಲ್ಲವೂ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡಿವೆ. ಮಹಿಳೆಯರ ಮೇಲಿನ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ನಿರ್ವಹಿಸಲು ಮಹಾರಾಷ್ಟ್ರ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಪ್ರತಿ ಪೊಲೀಸ್ ಠಾಣೆಯಲ್ಲಿ “ಮಹಿಳಾ ಪೊಲೀಸ್ ಕಕ್ಷ” ವನ್ನು ರಚಿಸಿದ್ದಾರೆ. ಅಂತಹ 975 ಕಕ್ಷಗಳನ್ನು ಇಲ್ಲಿಯವರೆಗೆ ಸ್ಥಾಪಿಸಲಾಗಿದೆ.
ಮನೋಧೈರ್ಯ ಯೋಜನೆಯಡಿ ಲೈಂಗಿಕ ಕಿರುಕುಳ, ಅತ್ಯಾಚಾರ ಮತ್ತು ಆಸಿಡ್ ದಾಳಿಗೆ ಬಲಿಯಾದ ಮತ್ತು ಅಂತಹ ದಾಳಿಗಳಿಂದ ಬದುಕುಳಿದಿರುವ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸೂಕ್ತ ಬೆಂಬಲ ಮತ್ತು ರೂ. 5 ಲಕ್ಷ ರೂವರೆಗೆ ಹಣಕಾಸಿನ ನೆರವು ನೀಡಲಾಗತ್ತಿದೆ. ಈ ಯೋಜನೆಗೆ ಸರ್ಕಾರದಿಂದ 15 ಕೋಟಿ ರೂಪಾಯಿ ಬಿಡುಗಡೆಯಾಗಿದೆ.
ಆರೋಗ್ಯ
ಶಿಶು ಮರಣವನ್ನು ನಿಗ್ರಹಿಸಲು ಮಹಾರಾಷ್ಟ್ರ ವಿಶೇಷ ಯೋಜನೆಯನ್ನು ಪ್ರಾರಂಭಿಸಿದೆ. ದೇವೇಂದ್ರ ಫಡ್ನವಿಸ್ ನೇತೃತ್ವದ ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆಯಡಿ ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವ ಪ್ರಯತ್ನದ ಭಾಗವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ಶಿಶುಪಾಲನಾ ಕಿಟ್ಗಳನ್ನು ವಿತರಿಸಲಾಗುತ್ತಿದೆ. ಜನವರಿ 24, 2017 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಮಹಾರಾಷ್ಟ್ರದ ಜಲ್ಗಾಂವ್ ಮತ್ತು ಉಸ್ಮಾನಾಬಾದ್ ಎರಡು ಜಿಲ್ಲೆಗಳಿಗೆ ವಿಶೇಷ ಪ್ರಶಸ್ತಿಯನ್ನು ಪ್ರದಾನಿಸಿದ್ದಾರೆ. ಈ ಪ್ರಶಸ್ತಿ ಪಡೆದ ದೇಶದ ಏಕೈಕ ರಾಜ್ಯ ಮಹಾರಾಷ್ಟ್ರವಾಗಿದೆ.
2017ರ ಆಗಸ್ಟ್ 1ರಂದು, ಮಹಾರಾಷ್ಟ್ರದ ಡಬ್ಲ್ಯೂಸಿಡಿ ಇಲಾಖೆಯು ‘ಮಜ್ಹಿ ಕನ್ಯ ಭಾಗ್ಯಶ್ರೀ” ಯೋಜನೆಯ ಅನುಷ್ಠಾನವನ್ನು ಪ್ರಾರಂಭಿಸಿತು. ಈ ಯೋಜನೆಯಡಿ ಸರ್ಕಾರ ಒಂದು ಹೆಣ್ಣು ಮಗುವಿನ ಕುಟುಂಬಕ್ಕೆ 18 ವರ್ಷಗಳ ಅವಧಿಗೆ ರೂ. 50,000 ಮೊತ್ತವನ್ನು ಹಣಕಾಸಿನ ನೆರವಾಗಿ ನೀಡುತ್ತಿದೆ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದರೆ ಎರಡೂ ಹುಡುಗಿಯರ ಹೆಸರಿನಲ್ಲಿ ತಲಾ 25,000 ರೂ ಅನ್ನು ನೀಡುತ್ತದೆ. ಈ ಯೋಜನೆಯಡಿಯಲ್ಲಿ 35 ಕೋಟಿಗಳನ್ನು ಈಗಾಗಲೇ ಹಂಚಿದೆ.
ರಾಜ್ಯದಲ್ಲಿ ಒಟ್ಟು 553 ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ ಯೋಜನೆ ಕಾರ್ಯಾಚರಣೆಯಲ್ಲಿವೆ, ಅದರಲ್ಲಿ 364 ಯೋಜನೆಗಳು ಗ್ರಾಮೀಣ ಪ್ರದೇಶಗಳಲ್ಲಿವೆ, 85 ಯೋಜನೆಗಳು ಬುಡಕಟ್ಟು ಪ್ರದೇಶಗಳಲ್ಲಿವೆ ಮತ್ತು 104 ಯೋಜನೆಗಳು ನಗರ ಕೊಳೆಗೇರಿ ಪ್ರದೇಶಗಳಲ್ಲಿವೆ. ಈ ಯೋಜನೆಯಡಿ ಫಲಾನುಭವಿಗಳಿಗೆ ನೀಡಲಾಗುತ್ತಿರುವ ಕೆಲವು ಪ್ರಮುಖ ಸೇವೆಗಳು ಪೂರಕ ಪೋಷಣೆ, ರೋಗನಿರೋಧಕ ಶಕ್ತಿ, ಆರೋಗ್ಯ ತಪಾಸಣೆ, ನಿರ್ದಿಷ್ಟ ಆರೋಗ್ಯ ಸೇವೆಗಳು, ಔಪಚಾರಿಕವಲ್ಲದ ಪೂರ್ವ ಶಾಲಾ ಶಿಕ್ಷಣ ಮತ್ತು ಪೋಷಣೆ ಮತ್ತು ಆರೋಗ್ಯ ಶಿಕ್ಷಣಕ್ಕೆ ಸಂಬಂಧಿಸಿದ್ದಾಗಿವೆ.
ತಂತ್ರಜ್ಞಾನದ ಪಕ್ಕದಲ್ಲಿ ಇರುವುದು
ಹಿಂದೆ ಮಹಿಳೆಯರ ಕಲ್ಯಾಣಕ್ಕೆ ಸಂಬಂಧಪಟ್ಟ ಯೋಜನೆಗಳು ಒಂದೇ ಸಚಿವಾಲಯಕ್ಕೆ ಸೀಮಿತವಾಗಿದ್ದವು, ಆದರೀಗ ಮಹಾರಾಷ್ಟ್ರ ರಾಜ್ಯ ಸರ್ಕಾರವು ಇದನ್ನು ಶಿಕ್ಷಣ ಸಚಿವಾಲಯ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವಾಲಯಗಳಿಗೂ ವಿಸ್ತರಿಸುವ ಮೂಲಕ ಮಹಿಳೆಯರ ಅಭಿವೃದ್ಧಿ ಮತ್ತು ಸಬಲೀಕರಣದ ಕಾರ್ಯವನ್ನು ಉನ್ನತ ಮಟ್ಟದಲ್ಲಿ ಇರಿಸಿದೆ. 40,000 ಹಳ್ಳಿಗಳನ್ನು ಹೊಂದಿರುವ ಮಹಾರಾಷ್ಟ್ರವು “ಕೌಶಲ್ಯ ಸಖಿ” ಎಂಬ ಯೋಜನೆಯಡಿ ಪ್ರಮುಖ ಸುಧಾರಣೆಗಳಿಗೆ ಸಜ್ಜಾಗಿದೆ, ಈ ಯೋಜನೆಯಡಿ ಗ್ರಾಮೀಣ ಮಹಿಳೆಯರು ಕೃಷಿಯ ಆಚೆಗೂ ಪರ್ಯಾಯ ಆದಾಯವನ್ನು ಹುಡುಕುತ್ತಿದ್ದಾರೆ. ಉತ್ಪಾದನಾ ಕ್ಷೇತ್ರಗಳು, ಸೇವಾ ಕ್ಷೇತ್ರಗಳು, ಕೃಷಿಯಿಂದ ಹಿಡಿದು ಕಾಟೇಜ್ ಕೈಗಾರಿಕೆಗಳನ್ನು ಉತ್ತೇಜಿಸುವವರೆಗೆ ಸರ್ಕಾರ ತನ್ನ ಯೋಜನೆಯನ್ನು ಹಲವು ಹಂತಗಳಲ್ಲಿ ರೂಪಿಸುತ್ತಿದೆ.
ಜಲ
ಜಲವೇ ಜೀವನ. ಮಹಾರಾಷ್ಟ್ರ ಜಲ ಸಂಪನ್ಮೂಲ ನಿಯಂತ್ರಣ ಪ್ರಾಧಿಕಾರವನ್ನು ರಾಜ್ಯ ಶಾಸನವೊಂದರ ಮೂಲಕ ಸ್ಥಾಪಿಸಲಾಗಿದೆ. ಇಂದು, ಕೇಂದ್ರ ಜಲಸಂಪನ್ಮೂಲ ಸಚಿವಾಲಯವು ಮಹಾರಾಷ್ಟ್ರದ ಜಲ ನಿಯಂತ್ರಣ ಮಾದರಿಯನ್ನು ಇತರ ರಾಜ್ಯಗಳಾದ್ಯಂತವೂ ಸ್ವಯಂಪ್ರೇರಿತವಾಗಿ ಪುನರಾವರ್ತಿಸಲು ಮುಂದಾಗಿದೆ. ಯಾಕೆಂದರೆ, ಮಹಾರಾಷ್ಟ್ರ ಜಲ ಸಂಪನ್ಮೂಲ ನಿಯಂತ್ರಣ ಪ್ರಾಧಿಕಾರ ಇದುವರೆಗಿನ ನಮ್ಮ ದೇಶದ ಅತ್ಯಂತ ಪರಿಣಾಮಕಾರಿ ನೀರಿನ ನಿಯಂತ್ರಣ ಕಾರ್ಯವಿಧಾನಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರದ 25 ಸಾವಿರ ಬರಪೀಡಿತ ಗ್ರಾಮಗಳಿಗೆ ನೀರಿನ ಸಬಲೀಕರಣವನ್ನು ತರುವ ಉದ್ದೇಶದಿಂದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಜಲಿಯುಕ್ತ ಶಿವರ್ ಅಭಿಯಾನ್ ಅನ್ನು ಪ್ರಾರಂಭಿಸಿದರು. ಕಳೆದ ವರ್ಷ, ರಾಜ್ಯದಲ್ಲಿ ಮಳೆಯ ಕೊರೆತಯಾಗಿದ್ದರೂ ಕೂಡ (ವಾರ್ಷಿಕ ಸರಾಸರಿ ಶೇಕಡಾ 77), ಅಂತರ್ಜಲ ಶೇಕಡಾ 27 ರಷ್ಟು ಹೆಚ್ಚಾಗಿದೆ. ಅಲ್ಲದೆ, ರಾಜ್ಯದ 179 ತಾಲ್ಲೂಕುಗಳಲ್ಲಿ 2014ರ ಮಳೆಗಾಲಕ್ಕೆ ಹೋಲಿಸಿದರೆ ಕಳಪೆ ಮಳೆಯಾಗಿದೆ. ಆದರೂ, ಅವುಗಳಲ್ಲಿ 143 ತಾಲೂಕುಗಳಲ್ಲಿ 2014ಕ್ಕೆ ಹೋಲಿಸಿದರೆ ಅಂತರ್ಜಲ ಮಟ್ಟ ಉತ್ತಮವಾಗಿದೆ. ಇದು ದೇವೇಂದ್ರ ಫಡ್ನವೀಸ್ ಅವರ ಸರ್ಕಾರ ರಾಜ್ಯದಲ್ಲಿನ ಮಹಿಳೆಯರಿಗಾಗಿ ಮತ್ತು ಅವರ ಕುಟುಂಬಗಳಿಗಾಗಿ ಮಾಡಿದ ಅತೀದೊಡ್ಡ ಸಹಾಯವಾಗಿದೆ.
ಈ ಎಲ್ಲಾ ಯೋಜನೆಗಳು ಕೇಂದ್ರದಲ್ಲಿ ಬಿಜೆಪಿ ಸರ್ಕಾರದಿಂದ ಸಕ್ರಿಯ ಸಹಾಯವನ್ನು ಪಡೆದಿವೆ ಎಂಬುದನ್ನು ಸಹ ನೆನಪಿನಲ್ಲಿಡಬೇಕು. ಮಹಿಳಾ ಕೇಂದ್ರಿತ ಮತ್ತಷ್ಟು ಯೋಜನೆಗಳೆಂದರೆ –
🔹 10 ಕೋಟಿ ಮಹಿಳೆಯರಿಗೆ ಮುದ್ರಾ ಸಾಲ ನೀಡಲಾಗಿದೆ
🔹 ಮಹಿಳೆಯರಿಗೆ 1 ಕೋಟಿ ಸ್ಟ್ಯಾಂಡಪ್ ಸಾಲ ನೀಡಲಾಗಿದೆ
🔹 ಸುಕನ್ಯಾ ಸಮೃದ್ಧಿ ಯೋಜನೆಯೊಂದಿಗೆ ಹೆಣ್ಣು ಮಗುವಿಗೆ ಆರ್ಥಿಕ ಭದ್ರತೆ ಒದಗಿಸಲಾಗುತ್ತಿದೆ
🔹 ಉಜ್ವಲಾ ಯೋಜನೆಯಿಂದಾಗಿ ಸುಮಾರು 8 ಕೋಟಿ ಮಹಿಳೆಯರಿಗೆ ಹೊಗೆ ಮುಕ್ತ ಜೀವನ ಸಿಕ್ಕಿದೆ
🔹 ತ್ರಿವಳಿ ತಲಾಖ್ ನಿಷೇಧಿಸಲಾಗಿದೆ
🔹 12 ವರ್ಷ ಕೆಳಗಿನ ಮಕ್ಕಳ ಅತ್ಯಾಚಾರಿಗಳಿಗೆ ಮರಣದಂಡನೆ
ನಮ್ಮ ದೇಶದ ಮಹಿಳೆಯರಿಗೆ ಈ ಎಲ್ಲಾ ಯೋಜನೆಗಳು ಸಾಕಷ್ಟು ಸಹಾಯ ಮಾಡಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರವು ಪರಿಪೂರ್ಣ ಸಾಮರಸ್ಯದಿಂದ ಕೆಲಸ ಮಾಡಿದಾಗ, ಫಲಿತಾಂಶಗಳು ಬೇಗನೆ ಗೋಚರಿಸುತ್ತವೆ ಎಂಬುದಕ್ಕೆ ಇದುವೇ ಸಾಕ್ಷಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.