ಮಿಜೋರಾಂ: ಈಶನ್ಯ ರಾಜ್ಯವಾದ ಮಿಜೋರಾಂನಲ್ಲಿ ಮಹತ್ವದ ಮೂಲಸೌಕರ್ಯ ಮತ್ತು ಸಂಪರ್ಕ ಯೋಜನೆಯನ್ನು ಹಮ್ಮಿಕೊಳ್ಳುವ ಬಗ್ಗೆ ಕೇಂದ್ರ ಗೃಹ ವ್ಯವಹಾರಗಳ ಸಚಿವ ಅಮಿತ್ ಶಾ ಅವರು ಶನಿವಾರ ಘೋಷಣೆಯನ್ನು ಮಾಡಿದ್ದಾರೆ. 2021 ರೊಳಗೆ ಮಿಜೋರಾಂನ ರಾಜ್ಯಧಾನಿ ಐಝ್ವಾಲ್ ಅನ್ನು ಬ್ರಾಡ್ ಗೇಜ್ ಲೈನ್ನೊಂದಿಗೆ ನ್ಯಾಷನಲ್ ರೈಲ್ವೇ ಗ್ರಿಡ್ಗೆ ಸಂಪರ್ಕಿಸುವುದಾಗಿ ಅವರು ಹೇಳಿದ್ದಾರೆ.
ಈಶಾನ್ಯ ಭಾರತದ ರಾಜ್ಯಗಳ ಅಭಿವೃದ್ಧಿಗೆ ನರೇಂದ್ರ ಮೋದಿ ಸರಕಾರ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಒತ್ತಿ ಹೇಳಿದ ಅವರು, ಹಿಂದಿನ ಯುಪಿಎ ಸರಕಾರವು 13ನೇ ಹಣಕಾಸು ಆಯೋಗದ ಅಡಿಯಲ್ಲಿ 19,974 ಕೋಟಿ ರೂಪಾಯಿಗಳನ್ನು ಮಿಜೋರಾಮ್ಗೆ ನೀಡಿತ್ತು, ಆದರೆ ಮೋದಿ ಸರಕಾರವು 14ನೇ ಹಣಕಾಸು ಆಯೋಗದಡಿ ಮಿಜೋರಾಮ್ಗೆ 42,972 ಕೋಟಿ ರೂಪಾಯಿ ಅನುದಾನವನ್ನು ಒದಗಿಸಿದೆ ಎಂದಿದ್ದಾರೆ.
ಐಜ್ವಾಲ್ನಲ್ಲಿ ನಾರ್ಥ್ ಈಸ್ಟ್ ಕೌನ್ಸಿಲ್ ಆಯೋಜನೆಗೊಳಿಸಿದ್ದ ಕೈಮಗ್ಗ ಮತ್ತು ಕರಕುಶಲ ಪ್ರದರ್ಶನದಲ್ಲಿ ಭಾಗಿಯಾಗಿ ಮಾತನಾಡಿದ ಶಾ ಅವರು, ಮಿಜೋರಾಮ್ ಅನ್ನು ದೇಶದ ಅತ್ಯಂತ ಸುಂದರರಾಜ್ಯ ಎಂದು ಬಣ್ಣಿಸಿದರು.
ಒಂದು ಕಾಲದಲ್ಲಿ ಹಿಂಸಾಚಾರ ಮತ್ತು ಬಂಡಾಯದ ಹೋರಾಟಗಳಿಂದಾಗಿ ಅಶಾಂತಿಯಿಂದ ಕೂಡಿದ್ದ ಮಿಜೋರಾಂ ಇಂದು ಶಾಂತಿ ಮತ್ತು ಸಮೃದ್ಧಿಯ ದ್ಯೋತಕವಾಗಿ ನಿಂತಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.