16 ವರ್ಷದ ಗ್ರೆಟಾ ಥನ್ಬರ್ಗ್ ನೇತೃತ್ವದ ಹೋರಾಟ ಮತ್ತು ರಚನಾತ್ಮಕವಲ್ಲದ ಹವಾಮಾನ ಬದಲಾವಣೆಯ ವಿರುದ್ಧದ ಚಳುವಳಿಯಿಂದ ಜಗತ್ತು ಬಸವಳಿದಿದೆ. ಹವಾಮಾನ ಬದಲಾವಣೆ ಹೆಸರಿನಲ್ಲಿ ಸರ್ಕಾರಗಳನ್ನು ಕೆಳಗಿಳಿಸುವ ಪ್ರಯತ್ನದಲ್ಲಿರುವ ಎಡ-ಉದಾರವಾದಿ ಲಾಬಿಯ ಕೈಗೊಂಬೆಯಾಗಿ ಗ್ರೆಟಾ ಕಾಣುತ್ತಿದ್ದಾಳೆ. CO2 ಮಾಲಿನ್ಯಕಾರಕಗಳ ತಲಾ ದತ್ತಾಂಶಗಳತ್ತ ನೋಟ ಬೀರಿದರೆ ಕೆಲವೊಂದು ಒಳನೋಟಗಳು ನಮ್ಮ ಅರಿವಿಗೆ ಬರುತ್ತವೆ. ಗ್ರೆಟಾ ಥನ್ಬರ್ಗ್ ಇತ್ತೀಚೆಗೆ ಪ್ರಧಾನಿ ಮೋದಿಯವರು ಪರಿಸರಕ್ಕಾಗಿ ಯಾವ ಕಾರ್ಯವನ್ನೂ ಮಾಡಿಲ್ಲ ಎಂದು ಹರಿಹಾಯ್ದಿದ್ದರು. ಆದರೆ ಮೋದಿ ಸರ್ಕಾರದ ಅಡಿಯಲ್ಲಿ ಭಾರತವು ಶುದ್ಧ ಇಂಧನದ ವಲಯದಲ್ಲಿ ಆಶ್ಚರ್ಯಕರವಾದ ದಾಪುಗಾಲುಗಳನ್ನು ಇಟ್ಟಿದೆ ಎಂಬುದನ್ನು ಅವರು ಮನಗಂಡಿಲ್ಲ.
CO2 ಹೊರಸೂಸುವಿಕೆಯ ವಿಷಯಕ್ಕೆ ಬಂದರೆ, ಯುಎಸ್ಎ ಮತ್ತು ಚೀನಾದ ನಂತರದ ಒಟ್ಟು CO2 ಹೊರಸೂಸುವಿಕೆಯಲ್ಲಿ ಭಾರತವು ಮೂರನೇ ಸ್ಥಾನದಲ್ಲಿದೆ ಆದರೆ ತಲಾ CO2 ಹೊರಸೂಸುವಿಕೆಯ ವಿಷಯದಲ್ಲಿ ಭಾರತವು ಹಿಂದುಳಿದಿದೆ, ಆದರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಯುಎಸ್ಎ, ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ ಮತ್ತು ಕೆನಡಾ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಶಾಶ್ವತ ಆರ್ಥಿಕ ಬೆಳವಣಿಗೆಯ ಕನಸುಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ದೇಶಗಳು ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಪರಿಹರಿಸಲು ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿಲ್ಲ ಎಂದು ಗ್ರೆಟಾ ಥನ್ಬರ್ಗ್ ಆರೋಪಿಸಿದ್ದಾಳೆ. ಇದಕ್ಕಾಗಿ ಆಕೆ ಅಭಿವೃದ್ಧಿಶೀಲ ರಾಷ್ಟ್ರಗಳು ಸೇರಿದಂತೆ ಸರ್ಕಾರಗಳನ್ನು ಖಂಡಿಸುತ್ತಿದ್ದಾಳೆ. ಒಂದು ರೀತಿಯ ಸೈದ್ಧಾಂತಿಕ ಅಂಧತೆಯು ಈ ಹವಾಮಾನ ಬದಲಾವಣೆಯ ಹೋರಾಟಗಾರರನ್ನು ವಿಶೇಷವಾಗಿ ಪಶ್ಚಿಮದ ಹೋರಾಟಗಾರರನ್ನು ನಿಯಂತ್ರಣದಲ್ಲಿ ಹಿಡಿದಿಟ್ಟುಕೊಂಡಿದೆ. ಭಾರತ ಮತ್ತು ಚೀನಾ ಹೆಚ್ಚಿನ CO2 ಹೊರಸೂಸುವಿಕೆಗಾಗಿ ಇಂತಹವರ ಹೆಚ್ಚಿನ ಆಕ್ರಮಣಕ್ಕೆ ಒಳಗಾಗುತ್ತಿವೆ.
ಆದರೂ, 1.3 ಬಿಲಿಯನ್ನಿನ ಅಭಿವೃದ್ಧಿ ಹೊಂದುತ್ತಿರುವ ದೇಶವಾದ ಭಾರತವು ತಲಾ ಹೊರಸೂಸುವಿಕೆಯಲ್ಲಿ 158 ನೇ ಸ್ಥಾನದಲ್ಲಿದೆ ಮತ್ತು ಯುಎಸ್ಎಯ ತಲಾ ಹೊರಸೂಸುವಿಕೆ ಸುಮಾರು 10 ಪಟ್ಟು ಹೆಚ್ಚಾಗಿದೆ. ಗ್ರೆಟಾ ಥನ್ಬರ್ಗ್ ದೇಶ ಸ್ವೀಡನ್ ತಲಾವಾರು ಸುಮಾರು 3 ಪಟ್ಟು ಹೆಚ್ಚು ಹೊರಸೂಸುತ್ತದೆ. ಆದರೆ ಆಕೆ ಪಿಎಂ ಮೋದಿಯ ಘನತೆಗೆ ಧಕ್ಕೆ ತರುವ ವೀಡಿಯೋ ಸಂದೇಶವನ್ನು ರವಾನೆ ಮಾಡುತ್ತಾಳೆ. ನವೀಕರಿಸಬಹುದಾದ ಇಂಧನ, ನೈರ್ಮಲ್ಯ ಮತ್ತು ನೈರ್ಮಲ್ಯದ ಕೆಲಸವನ್ನು ಪ್ರಧಾನಿ ಅಚ್ಚುಕಟ್ಟಾಗಿ ಮಾಡಿದ್ದಾರೆ, ಇದು ಭಾರತಕ್ಕೆ ಸಂದ ಜಯವಾಗಿದೆ.
ರ್ಯಾಂಕಿಂಗ್ನಲ್ಲಿ ಯುಎಸ್ 11 ನೇ ಸ್ಥಾನದಲ್ಲಿದೆ ಮತ್ತು ಗಣನೀಯ ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ, ತಲಾವಾರು ಅತಿ ಹೆಚ್ಚು CO2 ಹೊರಸೂಸುವಿಕೆಯನ್ನು ಹೊಂದಿದೆ ಮತ್ತು ಸಂಪೂರ್ಣ ಹೊರಸೂಸುವಿಕೆಯ ವಿಷಯದಲ್ಲಿ ಭಾರತವು ಮೂರನೇ ದೊಡ್ಡ ದೇಶವಾಗಿದೆ, ಆದರೆ ತಲಾ ಹೊರಸೂಸುವಿಕೆ ಕೇವಲ 1.7 ಮೆಟ್ರಿಕ್ ಟನ್ಗಳಷ್ಟಿದೆ. ಭಾರತದ ತಲಾ ಹೊರಸೂಸುವಿಕೆಯು ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಹೆಚ್ಚು ಹೆಚ್ಚು ಜನರನ್ನು ಬಡತನದಿಂದ ಮೇಲಕ್ಕೆತ್ತಲು ಅನಿವಾರ್ಯ, ಅಭಿವೃದ್ಧಿ ಹೊಂದಿದ ಪ್ರಪಂಚದ ಪಳೆಯುಳಿಕೆ ಇಂಧನಗಳ ಆರ್ಭಟಕ್ಕೆ ಭಾರತದ 1.3 ಶತಕೋಟಿ ಜನರ ಆಕಾಂಕ್ಷೆಗಳ ಮೇಲೆ ಆಕ್ರಮಣ ಮಾಡುವ ಯಾವುದೇ ನೈತಿಕ ಅಧಿಕಾರ ಇಲ್ಲ.
ಪ್ಯಾರಿಸ್ ಒಪ್ಪಂದಕ್ಕೆ ಒಳಪಟ್ಟು ಇತರ ಎಲ್ಲರಂತೆ ಭಾರತವು ಒಪ್ಪಂದದ ಗುರಿಗಳ ಪಟ್ಟಿಯನ್ನು ಅಂಗೀಕರಿಸಿತು ಮತ್ತು 2030 ರ ವೇಳೆಗೆ ಅವುಗಳನ್ನು ಸಾಧಿಸುವುದಾಗಿ ವಾಗ್ದಾನ ಮಾಡಿತು. 2030 ರ ವೇಳೆಗೆ ಪಳೆಯುಳಿಕೆ ರಹಿತ ಇಂಧನ ಮೂಲಗಳಿಂದ ತನ್ನ 40% ವಿದ್ಯುಚ್ಛಕ್ತಿ ಸಾಧಿಸುವ ಗುರಿಯನ್ನು ಭಾರತ ಹೊಂದಿತ್ತು. ಆದರೆ ಈಗ, ಭಾರತ 2022 ರ ವೇಳೆಗೆ ಈ ಗುರಿಯನ್ನು ಸಾಧಿಸಲು ಸಿದ್ಧವಾಗಿ ನಿಂತಿದೆ. ಇದು ನಿಗದಿತ ಸಮಯಕ್ಕಿಂತ ಎಂಟು ವರ್ಷಗಳು ಮುಂಚಿತವಾಗಿ ಎಂಬುದು ಇಲ್ಲಿ ಗಮನಾರ್ಹವಾದ ವಿಷಯ. ಇದಲ್ಲದೆ, ಈಗಾಗಲೇ ನಿರ್ಮಾಣ ಹಂತದಲ್ಲಿರುವುದನ್ನು ಮೀರಿ ಹೊಸ ಕಲ್ಲಿದ್ದಲು ಸ್ಥಾವರಗಳನ್ನು ನಿರ್ಮಿಸುವ ಅಗತ್ಯವಿಲ್ಲ ಎಂದು ಭಾರತೀಯ ಅಧಿಕಾರಿಗಳು ಅಂದಾಜಿಸಿದ್ದಾರೆ. ಭಾರತದಲ್ಲಿ ಇತ್ತೀಚೆಗೆ ನಡೆದ ಹರಾಜಿನಲ್ಲಿ, ಸೌರ ಫಾರ್ಮ್ಗಳ ಡೆವಲಪರ್ಗಳು ಗ್ರಿಡ್ಗೆ ವಿದ್ಯುತ್ ಅನ್ನು ಪ್ರತಿ ಕಿಲೋವ್ಯಾಟ್-ಗಂಟೆಗೆ 2.44 ರೂಪಾಯಿಗೆ ಮಾರಾಟ ಮಾಡಲು ಮುಂದಾಗಿದ್ದರು. ಭಾರತದ ತಾಂತ್ರಿಕ ಪ್ರಗತಿಗಳು ದೊಡ್ಡ ಮಟ್ಟದ ಬದಲಾವಣೆಯಾಗಿ ಹೊರಹೊಮ್ಮಿವೆ. ದೇಶವು ಪ್ರತಿ ಯೂನಿಟ್ ವಿದ್ಯುತ್ ವೆಚ್ಚವನ್ನು ಅಭೂತಪೂರ್ವವಾಗಿ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ. ಇದು ಒಂದು ವರ್ಷದ ಹಿಂದೆ ಸೌರ ಫಾರ್ಮ್ ಕೇಂದ್ರಗಳು ಬಿಡ್ ಮಾಡಿದ್ದಕ್ಕಿಂತ 50% ಕಡಿಮೆ ಮತ್ತು ಕಲ್ಲಿದ್ದಲು ಉತ್ಪಾದಿತ ವಿದ್ಯುತ್ ಸ್ಥಾವರಗಳಿಂದ ಉತ್ಪತ್ತಿಯಾಗುವ ಶಕ್ತಿಯ ಸರಾಸರಿ ಬೆಲೆಗಿಂತ 24% ಕಡಿಮೆ. ಮೋದಿ ಸರ್ಕಾರವು ಸುಸ್ಥಿರ ಬೆಳವಣಿಗೆಯ ಮೇಲೆ ವ್ಯಾಪಕವಾಗಿ ಕೇಂದ್ರೀಕರಿಸಿದೆ, ಇದರ ಪರಿಣಾಮವಾಗಿ ದೇಶದ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು 20% ಕ್ಕಿಂತ ಹೆಚ್ಚಿನ ವಾರ್ಷಿಕ ಬೆಳವಣಿಗೆಯ ದರವನ್ನು ದಾಖಲಿಸಿದೆ.
ನವೀಕರಿಸಬಹುದಾದ ಇಂಧನ ಮೂಲಗಳ ಮೇಲೆ ಮೋದಿ ಸರ್ಕಾರದ ಗಮನವು ಖಂಡಿತವಾಗಿಯೂ ಫಲಿತಾಂಶವನ್ನು ನೀಡಿದೆ, ಯಾಕೆಂದರೆ ಭಾರತದ ಸೌರ ಸಾಮರ್ಥ್ಯವು ಪ್ರಸ್ತುತ ಸುಮಾರು 30 GW ಆಗಿದೆ, ಇದು 2014 ರ 2.6 GW ಕ್ಕಿಂತ ಹೆಚ್ಚಾಗಿದೆ ಮತ್ತು ಅದೇ ಅವಧಿಯಲ್ಲಿ, ಗಾಳಿಯ ಸಾಮರ್ಥ್ಯವು 21 GW ಯಿಂದ 36 GW ಗಿಂತ ಹೆಚ್ಚಾಗಿದೆ. ಇತ್ತೀಚೆಗೆ ಮೋದಿ ಸರ್ಕಾರ 350 ದಶಲಕ್ಷ ಎಲ್ಇಡಿ ಬಲ್ಬ್ಗಳನ್ನು ವಿತರಿಸಿದ್ದು ಆ ಮೂಲಕ ವಿದ್ಯುತ್ ವ್ಯಯವನ್ನು ಕಡಿಮೆ ಮಾಡಿದೆ. ಜಲ್ ಜೀವನ್ ಮಿಷನ್ ಅಡಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ 3,60,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಸರ್ಕಾರ ಯೋಜಿಸುತ್ತಿದೆ. ಮೋದಿ ಸರ್ಕಾರ ತನ್ನ ಎರಡನೇ ಅವಧಿಯಲ್ಲಿ ನೀರಿನ ಸಂರಕ್ಷಣೆಯ ಮಹತ್ವದ ಬಗ್ಗೆ ವ್ಯಾಪಕವಾಗಿ ಗಮನ ಹರಿಸಿದೆ. ‘ಹರ್ ಘರ್ ಜಲ’ ಉಪಕ್ರಮದಡಿಯಲ್ಲಿ, 2024 ರ ವೇಳೆಗೆ ಪ್ರತಿ ವ್ಯಕ್ತಿಗೆ 55 ಲೀಟರ್ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ‘ಹರ್ ಘರ್ ಜಲ’ ಒಂದು ಉತ್ತಮ ಉಪಕ್ರಮವಾಗಿದೆ ಯಾಕೆಂದರೆ ಇಂದು ಕೇವಲ ಶೇ.18.24 ಮನೆಗಳಿಗೆ ಪೈಪ್ ನೀರಿನ ಲಭ್ಯತೆಯಿದೆ. ಈ ಲಭ್ಯತೆಯನ್ನು ಹೆಚ್ಚಿಸುವುದು ಮೋದಿ ಸರ್ಕಾರದ ಕ್ರಮವಾಗಿದೆ. ಈ ಕ್ರಮವು ದೇಶದ ಲಕ್ಷಾಂತರ ಜನರ ಜೀವನವನ್ನು ಸುಧಾರಿಸುತ್ತದೆ. ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೆಚ್ಚಿಸುವ ಮೋದಿ ಸರಕಾರದ ಉತ್ತೇಜನವು ಹೂಡಿಕೆದಾರರ ಗಮನವನ್ನೂ ಸೆಳೆದಿದೆ. ಈ ಕ್ಷೇತ್ರದಲ್ಲಿ ಭಾರಿ ಹೂಡಿಕೆ ಹರಿದು ಬರುತ್ತಿದೆ. ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ಸಲಹಾ ಸಂಸ್ಥೆ ಕೆಪಿಎಂಜಿಯ ಮಾಹಿತಿಯ ಪ್ರಕಾರ, 2018 ರ ಕ್ಯಾಲೆಂಡರ್ ವರ್ಷಕ್ಕೆ ಶುದ್ಧ ಶಕ್ತಿಯ ಒಟ್ಟು ಹೂಡಿಕೆಯು 11.1 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಮೋದಿ ಸರ್ಕಾರ ಅಧಿಕಾರ ವಹಿಸಿಕೊಂಡಾಗಿನಿಂದಲೂ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತವು ಅದ್ಭುತ ಪ್ರಗತಿಯನ್ನು ದಾಖಲಿಸಿದೆ. 24/7 ವಿದ್ಯುತ್ ಸರಬರಾಜು ಇಲ್ಲದೆ ಲಕ್ಷಾಂತರ ಭಾರತೀಯರು ವಾಸಿಸುತ್ತಿರುವ ಈ ಸಮಯದಲ್ಲಿ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೊಂದು ಇಂಧನ ಕ್ಷೇತ್ರದಲ್ಲಿ ಇಂತಹ ದೈತ್ಯ ದಾಪುಗಾಲು ಹಾಕುವುದು ಅತ್ಯಂತ ಕಷ್ಟಕರವಾಗಿದೆ, ಆದರೂ, ಭಾರತವು ಸುಸ್ಥಿರ ಅಭಿವೃದ್ಧಿಯನ್ನು ಕೈಗೆಟುಕುವಷ್ಟು ಮುಂದುವರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.