ನವದೆಹಲಿ: ಪಾಕಿಸ್ಥಾನದ ಭೂಪ್ರದೇಶದೊಳಗೆ ನುಗ್ಗಿ ಬಾಲಕೋಟ್ನಲ್ಲಿದ್ದ ಉಗ್ರರ ಶಿಬಿರಗಳ ಮೇಲೆ ವೈಮಾನಿಕ ದಾಳಿಯನ್ನು ನಡೆಸಿದ ಘಟನೆಯ ಬಗ್ಗೆ ಭಾರತೀಯ ವಾಯುಸೇನೆ ಶುಕ್ರವಾರ ಪ್ರಚಾರ ವೀಡಿಯೋವನ್ನು ಬಿಡುಗಡೆ ಮಾಡಿದೆ.
ಅಕ್ಟೋಬರ್ 8 ರಂದು ಭಾರತೀಯ ವಾಯುಸೇನಾ ದಿನವಾಗಿದ್ದು, ಇದರ ಭಾಗವಾಗಿ ವಾಯುಸೇನಾ ಮುಖ್ಯಸ್ಥ ಆರ್ಕೆಎಸ್ ಬಧೌರಿಯಾ ಅವರು ಪ್ರಚಾರ ವಿಡಿಯೋ ಬಿಡುಗಡೆ ಮಾಡಿದ್ದಾರೆ. 1.25 ಸೆಕೆಂಡುಗಳ ವಿಡಿಯೋ ಇದಾಗಿದ್ದು, ಬಾಲಾಕೋಟ್ ವಾಯುದಾಳಿಯಲ್ಲಿ ಸೆರೆಹಿಡಿದ ಹಲವು ದೃಶ್ಯಗಳನ್ನು ಈ ವಿಡಿಯೋದಲ್ಲಿ ಬಳಸಿಕೊಳ್ಳಲಾಗಿದೆ ಎಂದು ಭದೌರಿಯಾ ಹೇಳಿದ್ದಾರೆ.
ಬಾಲಾಕೋಟ್ ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸಲು ಸಿದ್ದವಾದ ವಿಮಾನಗಳು ಹಾರಾಟ ಆರಂಭಿಸುವ ದೃಶ್ಯಗಳು, ಉಗ್ರರ ತರಬೇತಿ ಶಿಬಿರಗಳ ಮೇಲೆ ಬಾಂಬ್ ಹಾಕಿದ ದೃಶ್ಯ ಹಾಗೂ ನಿಖರ ಬಾಂಬ್ ದಾಳಿ ನಡೆಸಲು ಆಯ್ಕೆ ಮಾಡಿದ್ದ ಸ್ಥಳವನ್ನು ರೇಡಾರ್ಗಳು ಝೂಮ್ ಮಾಡುವ ದೃಶ್ಯಾವಳಿ ಸೇರಿದಂತೆ ಹಲವು ದೃಶ್ಯಗಳನ್ನು ವಿಡಿಯೋ ಒಳಗೊಂಡಿದೆ.
ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಭಾರತೀಯ ವಾಯುಪಡೆ ಬಾಲಕೋಟ್ ವೈಮಾನಿಕ ದಾಳಿಯನ್ನು ನಡೆಸಿತ್ತು. ಈ ಬಗ್ಗೆ ವೀಡಿಯೋದಲ್ಲಿನ ಹಿನ್ನೆಲೆ ಧ್ವನಿಯನ್ನು ಹೇಳಲಾಗಿದೆ. ಫೆಬ್ರವರಿ 27 ರಂದು ಭಾರತದ ಮಿಗ್-21 ಮತ್ತು ಪಾಕಿಸ್ಥಾನದ ಯುದ್ದವಿಮಾನಗಳ ನಡುವಣ ಹೋರಾಟವನ್ನೂ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.
#WATCH Indian Air Force showcases the story of the Balakot aerial strikes in a promotional video at the annual Air Force Day press conference by Air Force Chief Air Chief Marshal Rakesh Kumar Singh Bhadauria. pic.twitter.com/GBRWwWe6sJ
— ANI (@ANI) October 4, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.