ನವದೆಹಲಿ: ಈ ನವರಾತ್ರಿಯಲ್ಲಿ ವ್ರತ ಮಾಡುವವರು ದೂರ ದೂರದ ಊರುಗಳಿಗೆ ರೈಲು ಪ್ರಯಾಣ ಮಾಡುವುದಕ್ಕೆ ಹಿಂದೇಟು ಹಾಕಬೇಕಾಗಿಲ್ಲ. ವ್ರತದಲ್ಲಿರುವ ಪ್ರಯಾಣಿಕರಿಗೆಂದೇ ಭಾರತೀಯ ರೈಲ್ವೇಯ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೋರೇಶನ್ ‘ವ್ರತ್ ಕ ಖಾನಾ’ವನ್ನು ಪೂರೈಕೆ ಮಾಡುತ್ತಿದೆ. ಆಯ್ದ ರೈಲು ನಿಲ್ದಾಣಗಳಲ್ಲಿ ಇ-ಕ್ಯಾಟರಿಂಗ್ ಸೇವೆಯ ಮೂಲಕ ಇದು ಲಭ್ಯವಿದೆ.
ಒಂಬತ್ತು ದಿನಗಳ ಸುದೀರ್ಘ ಹಬ್ಬದ ವೇಳೆಯಲ್ಲಿ ಹಲವಾರು ಭಕ್ತರು ಉಪವಾಸವನ್ನು ಮಾಡುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಐಆರ್ಸಿಟಿಸಿ ‘ವ್ರತ್ ಕಾ ಖಾನಾ’ ಸೇವೆಯನ್ನು ತಂದಿದೆ.
ಸೆಪ್ಟೆಂಬರ್ 29 ರಿಂದ ಈ ಸೌಲಭ್ಯವನ್ನು ಪರಿಚಯಿಸಲಾಗಿದೆ. ಸಾಬುದಾನ, ಸೆಂಧಾ ನಮಕ್, ಕುಟ್ಟು ಕಾ ಅಟ್ಟಾ ಮತ್ತು ಕೆಲವು ತರಕಾರಿಗಳಂತಹ ಸಾತ್ವಿಕ ಆಹಾರದೊಂದಿಗೆ ಮೆನುವನ್ನು ಸಿದ್ಧಪಡಿಸಲಾಗಿದೆ. ಸಬುದಾನೆ ಕಿ ಖಿಚ್ಡಿ, ಡ್ರೈ ಮಖಾನೆ, ಸಬುದಾನಾ ಮೂಂಗ್ಫಲಿ, ನಮ್ಕೀನ್, ಆಲೂ ಟಿಕ್ಕಿ, ನವರಾತ್ರಿ ಥಾಲಿ, ಜೀರಾ ಆಲೂ, ಫ್ರೆಂಚ್ ಫ್ರೈಸ್, ಸಬುದಾನಾ ವಡಾ, ಫಲ್ಹಾರಿ ಚುಡಾ, ಫಲ್ಹಾರಿ ಥಾಲಿ, ಮಲೈ ಬರ್ಫಿ, ರಸ್ಮಲೈ, ಸಾದಿ ಬರ್ಫಿ ಮುಂತಾದವುಗಳು ಕೂಡ ಇದರಲ್ಲಿ ಲಭ್ಯವಿದೆ.
“ಈ ವರ್ಷ ಐಆರ್ಸಿಟಿಸಿ, ರೈಲು ಪ್ರಯಾಣವನ್ನು ತೊಂದರೆ ಮುಕ್ತವನ್ನಾಗಿಸುವ ಉದ್ದೇಶದಿಂದ ತನ್ನ ಇ-ಕ್ಯಾಟರಿಂಗ್ ಮೆನುವಿನ ಭಾಗವಾಗಿ ‘ವ್ರತ್ ಕಾ ಖಾನಾ’ ಅನ್ನು ನೀಡುತ್ತಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ವಿಶೇಷ ಆಹಾರವು ಆಯ್ದ ರೆಸ್ಟೋರೆಂಟ್ಗಳ ಮತ್ತು ಭಾರತೀಯ ರೈಲ್ವೆ ನೆಟ್ವರ್ಕ್ನಲ್ಲಿನ ಆಯ್ದ ನಿಲ್ದಾಣಗಳಲ್ಲಿ ಲಭ್ಯವಿದೆ ಎಂದು ತಿಳಿಸಿದೆ.
ಕಾನ್ಪುರ ಸೆಂಟ್ರಲ್, ಜಬಲ್ಪುರ, ರತ್ಲಂ, ಜೈಪುರ, ಬಿನಾ, ಪಾಟ್ನಾ, ರಾಜೇಂದ್ರ ನಗರ, ಹಜರತ್ ನಿಜಾಮುದ್ದೀನ್, ಅಂಬಾಲಾ ಕ್ಯಾಂಟ್, ಝಾನ್ಸಿ, ಔರಂಗಾಬಾದ್, ಅಕೋಲಾ, ಇಟಾರ್ಸಿ, ವಸೈ ರೋಡ್, ವಾಪಿ, ಕಲ್ಯಾಣ್, ಬೊರಿವಾಲಿ ಮಥುರಾ, ನಾಗ್ಪುರ, ಭೋಪಾಲ್, ಉಜ್ಜಯಿನಿ ಮತ್ತು ಅಹ್ಮದಾನಗರ್ ರೈಲುನಿಲ್ದಾಣಗಳಲ್ಲಿ ‘ವ್ರತ್ ಕಾ ಖಾನಾ’ ಲಭ್ಯವಿದೆ.
ಐಆರ್ಸಿಟಿಸಿಯ ಇ-ಕ್ಯಾಟರಿಂಗ್ ವೆಬ್ಸೈಟ್ www.ecatering.irctc.co.in ಅಥವಾ “ಫುಡ್-ಆನ್-ಟ್ರ್ಯಾಕ್” ಅಪ್ಲಿಕೇಶನ್ನಲ್ಲಿ ಪ್ರಯಾಣಿಕರು ಮೊದಲೇ ಆರ್ಡರ್ ನೀಡುವ ಮೂಲಕ ಈ ಸೇವೆಯನ್ನು ಪಡೆಯಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.