ಸಿರ್ಮೌರ್: ಹಿಮಾಚಲಪ್ರದೇಶದ ಸಿರ್ಮೌರ್ ಜಿಲ್ಲೆಯ ದೃಷ್ಟಿ ವಿಕಲಚೇತನ ವಿರೇಂದ್ರ ಸಿಂಗ್ ಅವರು ಪ್ಲಾಸ್ಟಿಕ್ ಮುಕ್ತ ಭಾರತದ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದ್ದಾರೆ. ದೇಶದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಅನ್ನು ನಿರ್ಮೂಲನೆಗೊಳಿಸುವ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಅವರು 219 ಕಿಮೀ ಓಟವನ್ನು ಹಮ್ಮಿಕೊಂಡಿದ್ದಾರೆ.
ಸೆ.30ರಂದು ಶಿಮ್ಲಾದಿಂದ ಅವರ ಓಟ ಆರಂಭವಾಗಲಿದೆ ಮತ್ತು ಅಕ್ಟೋಬರ್ 2ರಂದು ಗಾಂಧೀ ಜಯಂತಿಯ ಸಂದರ್ಭದಲ್ಲಿ ಚಂಡೀಗಢದಲ್ಲಿ ಇದು ಸಮಾಪಣಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ನೀಡಿರುವ ಪ್ಲಾಸ್ಟಿಕ್ ಮುಕ್ತ ಭಾರತದ ಸಂದೇಶವನ್ನು ತಮ್ಮ ಓಟದ ಮೂಲಕ ಪಸರಿಸುವ ಉದ್ದೇಶ ಅವರದ್ದು.
ಪ್ಲಾಸ್ಟಿಕ್ ಫ್ರೀ ಇಂಡಿಯಾ ಮ್ಯಾರಥಾನ್ಗೆ ಸಹಕಾರವನ್ನು ನೀಡಿದ್ದಕ್ಕಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಆಯುರ್ವೇದಿಕ್ ಇಲಾಖೆ ಮತ್ತು ಇತರ ಸರ್ಕಾರಿ ಭಾಗಿದಾರರಿಗೆ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಶಿಮ್ಲಾದಿಂದ ಪ್ರಾರಂಭವಾಗುವ ಈ ಓಟವು ಸಿರ್ಮೌರ್ ಜಿಲ್ಲಾ ಕೇಂದ್ರವಾದ ಸೋಲನ್ ಜಿಲ್ಲೆಯ ಮೂಲಕ ಸಾಗಿ ನಹಾನ್ ಅನ್ನು ತಲುಪುತ್ತದೆ, ಅಲ್ಲಿಂದ ಸಿಂಗ್ ಚಂಡೀಗಢಕ್ಕೆ ತೆರಳಲಿದ್ದಾರೆ.
ಈ ಹಿಂದೆಯೂ ಈ ದಿವ್ಯಾಂಗ ಓಟಗಾರ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಮುಖ ಸ್ಥಾನ ಪಡೆದಿದ್ದಾರೆ. 18 ನೇ ಪ್ಯಾರಾ ರಾಷ್ಟ್ರೀಯ ಅಥ್ಲೆಟಿಕ್ಸ್ನಲ್ಲಿ 1,500 ಮೀಟರ್ ಮತ್ತು 5 ಕಿ.ಮೀ ಓಟಗಳಲ್ಲಿ ಕಂಚಿನ ಪದಕಗಳನ್ನು ಗೆದ್ದು ರಾಷ್ಟ್ರಮಟ್ಟದಲ್ಲಿ ತಮ್ಮ ರಾಜ್ಯದ ಹೆಸರನ್ನು ಬೆಳಗಿಸಿದ್ದರು.
ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ಲುಧಿಯಾನ ಶಾಲೆಯಲ್ಲಿ ಓದುತ್ತಿರುವ 14 ವರ್ಷದ ಉರ್ಮಿಲಾಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಇವರು ಮೇ 14 ಮತ್ತು 17 ರಂದು ಎರಡು ಚಾರಿಟಿ ಓಟ ನಡೆಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.