ಪ್ರಧಾನಿ ನರೇಂದ್ರ ಮೋದಿಯವರ ಒಂದು ವಾರಗಳ ಅಮೆರಿಕಾ ಪ್ರವಾಸವು ಅತ್ಯಂತ ಫಲಪ್ರದವಾಗಿದೆ. ಭಾರತಕ್ಕೆ ಹೆಚ್ಚು ನಿರೀಕ್ಷೆಗಳನ್ನು ಇದು ಹುಟ್ಟು ಹಾಕಿದೆ. ಇತ್ತೀಚಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿರುವ ಕಾರ್ಪೊರೇಟ್ ತೆರಿಗೆ ಕಡಿತ ಮತ್ತು ಮೋದಿ ಯುಎಸ್ ಭೇಟಿ ಎರಡೂ ಹೂಡಿಕೆದಾರರಿಗೆ ಭಾರತದ ಬಗ್ಗೆ ಮೆಚ್ಚುಗೆಯನ್ನು ಉಂಟುಮಾಡುವಂತೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಯುಎಸ್ ಭೇಟಿಯು ಉದ್ಯಮ ದಿಗ್ಗಜರನ್ನು ಉತ್ಸಾಹಗೊಳ್ಳುವಂತೆ ಮಾಡಿದೆ. ಅವರೀಗ ಭಾರತದಲ್ಲಿ ಹೂಡಿಕೆ ಮಾಡುವ ಅವಕಾಶಗಳು ಎದ್ದು ಕಾಣುತ್ತಿದೆ. ಐಬಿಎಂ, ಶೆಲ್, ಕೋಕಾ ಕೋಲಾ ಮತ್ತು ಲಾಕ್ಹೀಡ್ ಮಾರ್ಟಿನ್ ಸೇರಿದಂತೆ ಉನ್ನತ ಇಂಧನ ಮತ್ತು ತಂತ್ರಜ್ಞಾನ ಕಂಪನಿಗಳ 61 ಕಾರ್ಯನಿರ್ವಾಹಕರನ್ನು ಮೋದಿ ಭೇಟಿಯಾಗಿದ್ದಾರೆ. ಇವರೆಲ್ಲಾ ಭಾರತ ಮತ್ತು ಭಾರತದ ಆರ್ಥಿಕತೆಯ ಬಗ್ಗೆ ಶ್ಲಾಘನೆಗಳ ಮಹಾಪೂರವನ್ನೇ ಹರಿಸಿದ್ದಾರೆ.
ವಿಶೇಷವೆಂದರೆ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅವಧಿಯಲ್ಲಿ ಅಮೆರಿಕದ ಹಲವು ಉನ್ನತ ಉದ್ಯಮಿಗಳನ್ನು ಭೇಟಿಯಾಗಿ ಮಾತುಕತೆಯನ್ನು ನಡೆಸಿದ ಏಕೈಕ ವಿದೇಶಿ ನಾಯಕ ಪ್ರಧಾನಿ ಮೋದಿ. ಜೆಪಿ ಮೋರ್ಗಾನ್ ಸಿಇಒ ಜೇಮಿ ಡಿಮೊನ್, ಬ್ಯಾಂಕ್ ಆಫ್ ಅಮೇರಿಕಾ ಸಿಇಒ ಬ್ರಿಯಾನ್ ಮೊಯ್ನಿಹಾನ್, ವಾಲ್ಮಾರ್ಟ್ ಸಿಇಒ ಡೌಗ್ ಮೆಕ್ಮಿಲನ್, 3 ಎಂ ಸಿಇಒ ಮೈಕ್ ರೋಮನ್, ಲಾಕ್ಹೀಡ್ ಮಾರ್ಟಿನ್ ಸಿಇಒ ಮರಿಲಿನ್ ಹೆವ್ಸನ್, ಮಾಸ್ಟರ್ಕಾರ್ಡ್ ಸಿಇಒ ಅಜಯ್ ಭಂಗಾ, ಮ್ಯಾರಿಯಟ್ ಸಿಇಒ ಆರ್ನೆ ಸೊರೆನ್ಸನ್ ಮತ್ತು 30 ಮಂದಿ ಇತರ ಉದ್ಯಮಿಗಳು ಮೋದಿಯವರ ಖಾಸಗಿ ಸಭೆಯಲ್ಲಿ ಭಾಗವಹಿಸಿದ್ದರು ಮತ್ತು ಎರಡು ಗಂಟೆಗಳಿಗಿಂತಲೂ ಹೆಚ್ಚು ಕಾಲ ಭಾರತದಲ್ಲಿನ ಹೂಡಿಕೆ ಅವಕಾಶಗಳ ಬಗ್ಗೆ ಮಾತುಕತೆಯನ್ನು ನಡೆಸಿದ್ದರು.
ಲಾಕ್ಹೀಡ್ ಮಾರ್ಟಿನ್ ಕಂಪನಿಯು 2020 ರಿಂದ ತನ್ನ ಹೈದರಾಬಾದ್ ಘಟಕದಿಂದ ನಿಗದಿಯಂತೆ ಎಫ್ -16 ವಿಮಾನಗಳ ವಿಂಗ್ ಅನ್ನು ಪೂರೈಕೆ ಮಾಡಲು ಪ್ರಾರಂಭಿಸಲಿದೆ, ಇದಕ್ಕಾಗಿ ಅದು ಭಾರತದೊಂದಿಗೆ ದೊಡ್ಡ ಮಟ್ಟದ ವ್ಯವಹಾರ ಕುದುರಿಸುವತ್ತ ನೋಡುತ್ತಿದೆ. ಲಾಕ್ಹೀಡ್ ಮಾರ್ಟಿನ್ ಸಿಇಒ ಮರಿಲಿನ್ ಹೆವ್ಸನ್ ಪ್ರಧಾನಿ ಮೋದಿಯವರನ್ನು ಭೇಟಿಯಾದ ನಂತರ ಹೆಚ್ಚು ಉತ್ಸಾಹಭರಿತರಾಗಿದ್ದಾರೆ ಮತ್ತು ಮೋದಿಯವರ ಅಭಿವೃದ್ಧಿ ಪರ ನೀತಿಗಳನ್ನು ಅವರು ಅತೀವವಾಗಿ ಶ್ಲಾಘಿಸಿದ್ದಾರೆ.
The meeting with PM @narendramodi was excellent. I congratulate India on their pro-growth policies, says Marillyn Hewson the CEO of @LockheedMartin. pic.twitter.com/JzOOJPHJvT
— PMO India (@PMOIndia) September 25, 2019
2017 ರಲ್ಲಿ, ಕೋಕಾ ಕೋಲಾ ಭಾರತದಲ್ಲಿ ಕನಿಷ್ಠ 1.7 ಶತಕೋಟಿ ಹೂಡಿಕೆ ಮಾಡಲು ಆಹಾರ ಸಂಸ್ಕರಣಾ ಉದ್ಯಮ ಸಚಿವಾಲಯದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಅದರ ಅಧ್ಯಕ್ಷ ಮತ್ತು ಸಿಇಒ ಜೇಮ್ಸ್ ಕ್ವಿನ್ಸಿ ಅವರು ಪ್ರಧಾನಿ ಮೋದಿಯವರ ಅಮೆರಿಕಾದಲ್ಲಿನ ಹೂಡಿಕೆ ಸಭೆಯ ಭಾಗವಾಗಲು ಭಾರೀ ಉತ್ಸುಕರಾಗಿದ್ದರು. ಭಾರತವು ಕೋಕ ಕೋಲಾ ಕಂಪನಿಯ 3 ನೇ ಪ್ರಮುಖ ಮಾರುಕಟ್ಟೆಯಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
Really excited to be in the Prime Minister’s investment summit, says James Quincey, Chairman and CEO of @CocaColaCo. pic.twitter.com/dbzMFFXhYD
— PMO India (@PMOIndia) September 25, 2019
ಶೆಲ್ ಭಾರತದಲ್ಲಿ ದೊಡ್ಡ ಹೂಡಿಕೆ ಮಾಡುತ್ತಿದೆ ಮತ್ತು ಅದು ಇತ್ತೀಚೆಗೆ ಹಜೀರಾ ಎಲ್ಎನ್ಜಿ ಮತ್ತು ಪೋರ್ಟ್ ಕಂಪನಿಗಳಲ್ಲಿ 100% ಷೇರುಗಳನ್ನು ಪಡೆದುಕೊಂಡಿದೆ. ಮೋದಿಯನ್ನು ಭೇಟಿಯಾದ ಅದರ ಸಿಇಒ ಬೆನ್ ವ್ಯಾನ್ ಬ್ಯುರ್ಡೆನ್ ಮೋದಿಯ ಬಲವಾದ ನೀತಿ ಮತ್ತು ಸಮಗ್ರ ಭಾಷಣವನ್ನು ಶ್ಲಾಘಿಸಿದ್ದಾರೆ. ಪ್ರಧಾನಿ ಮೋದಿಯವರ ನಾಲ್ಕು ‘ಡಿ’-ಪ್ರಜಾಪ್ರಭುತ್ವ, ಜನಸಂಖ್ಯಾಶಾಸ್ತ್ರ, ಬೇಡಿಕೆ ಮತ್ತು ನಿರ್ಣಾಯಕತೆ ಭಾರತದಲ್ಲಿ ಹೂಡಿಕೆ ಮಾಡಲು ಬಹಳ ಪ್ರಬಲವಾದ ವಾದಗಳಾಗಿವೆ, ಮುಂಬರುವ ವರ್ಷಗಳಲ್ಲಿ ದೇಶದಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಲಿದ್ದೇವೆ ಎಂದಿದ್ದಾರೆ.
The Prime Minister’s speech was strong and comprehensive: Ben van Beurden, CEO of @Shell. pic.twitter.com/ekMI4E0nPu
— PMO India (@PMOIndia) September 25, 2019
ಬ್ಯಾಂಕ್ ಆಫ್ ಅಮೆರಿಕಾ 2018 ರಲ್ಲಿ ಭಾರತದಲ್ಲಿ ನಡೆದ ಅತಿದೊಡ್ಡ ಎಂ & ಎ ಮತ್ತು ನಿಧಿಸಂಗ್ರಹ ವಹಿವಾಟಿನ ಭಾಗವಾಗಿತ್ತು. ಇದು 100 ಬಿಲಿಯನ್ ಡಾಲರ್ ಗಡಿಯನ್ನೂ ದಾಟಿತ್ತು. ಅದರ ಸಿಇಒ ಬ್ರಿಯಾನ್ ಟಿ. ಮೊಯ್ನಿಹನ್ ಅವರು ಮೋದಿ ಸರ್ಕಾರದ ಬೆಳವಣಿಗೆಯ ಪರವಾದ ಕಾರ್ಯಸೂಚಿಯನ್ನು ಮತ್ತು ಭಾರತದಲ್ಲಿನ ವ್ಯವಹಾರವನ್ನು ಸುಲಲಿತಗೊಳಿಸುವ ಕ್ರಮವನ್ನು ಶ್ಲಾಘಿಸಿದರು.
Here’s what the CEO of @BankofAmerica, Brian T. Moynihan has to say on the interaction with PM @narendramodi. pic.twitter.com/2OZHYm8DPD
— PMO India (@PMOIndia) September 25, 2019
EY ಇಂಡಿಯಾದ ಪ್ರಕಾರ, ಭಾರತದಲ್ಲಿ ಖಾಸಗಿ ಷೇರುಗಳು ಮತ್ತು ವೆಂಚರ್ ಬಂಡವಾಳ ಹೂಡಿಕೆಗಳು 2019 ರಲ್ಲಿ ದಾಖಲೆಯ ಗರಿಷ್ಠ 36.7 ಶತಕೋಟಿಯನ್ನು ಮುಟ್ಟಿದೆ. ಇದು ಹಿಂದಿನ ಸಾರ್ವಕಾಲಿಕ ಗರಿಷ್ಠವಾಗಿದ್ದ 2018 ರ 36.5 ಬಿಲಿಯನ್ ಅನ್ನು ಮೀರಿದೆ. ಈ ಏರಿಕೆಯು ಮೂಲಸೌಕರ್ಯದಲ್ಲಿ ದೊಡ್ಡ ಹೂಡಿಕೆಗಳ ಹಿನ್ನೆಲೆಯಿಂದಾಗಿ ಹರಿದು ಬಂದಿದೆ. ಈ ಹೂಡಿಕೆಯು 2019 ರ ಇದುವರೆಗಿನ ಎಲ್ಲಾ ಪಿಇ ಅಥವಾ ವಿಸಿ ವಹಿವಾಟುಗಳಲ್ಲಿ 35 ಪ್ರತಿಶತದಷ್ಟು ಪಾಲನ್ನು ಹೊಂದಿದೆ. 12.8 ಬಿಲಿಯನ್ನಲ್ಲಿ, ಮೂಲಸೌಕರ್ಯ ಕ್ಷೇತ್ರಕ್ಕೆ ಹಣದ ಹರಿವು 2012 ರಿಂದ ಈ ವಲಯವು ಕಂಡಿದ್ದಕ್ಕಿಂತ ಹೆಚ್ಚಾಗಿದೆ. ವಿದೇಶಿ ಬಂಡವಾಳ ಹೂಡಿಕೆದಾರರು ರೂ. 76,052 ಕೋಟಿ ಮೊತ್ತವನ್ನು ಈಕ್ವಿಟಿಯಲ್ಲಿ ಗಳಿಸಿದ್ದಾರೆ. ಈ ಅಂಕಿಅಂಶಗಳು ಆರ್ಥಿಕತೆ ಕುಸಿದಿದೆ ಎಂಬ ಕೂಗುಗಳನ್ನು ಸಂಪೂರ್ಣವಾಗಿ ಬುಡಮೇಲು ಮಾಡುತ್ತದೆ. ಇಂದು ಹೂಡಿಕೆದಾರರು ಭಾರತಕ್ಕೆ ಬರಲು ಕಾರ್ಯಸೂಚಿಗಳನ್ನು ರಚಿಸುತ್ತಿದ್ದಾರೆ.
ಪ್ರಧಾನಿ ಮೋದಿಯವರ ಭೇಟಿಯಾಗಲು ಭಾರತ ಮತ್ತು ಯುಎಸ್ ಎರಡರಲ್ಲೂ ಉದ್ಯಮಿಗಳು ಭಾರೀ ಉತ್ಸಾಹವನ್ನು ತೋರಿಸುತ್ತಿದ್ದಾರೆ ಎಂಬುದು ಅವರು ಯಾವ ರೀತಿಯ ಜನಪ್ರಿಯತೆಯನ್ನು ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶ್ಲಾಘನೆ ಮತ್ತು ನಂತರದ ತೆರಿಗೆ ಕಡಿತ ಕ್ರಮವು ಭಾರತದ ಆರ್ಥಿಕತೆಯ ಮೇಲೆ ದೊಡ್ಡ ಮಟ್ಟದ ಸಕಾರಾತ್ಮಕ ಪ್ರಭಾವವನ್ನು ನೀಡಲಿದೆ. ಪ್ರತಿಷ್ಠಿತ ಕಂಪೆನಿಗಳ ಉನ್ನತ ಉದ್ಯಮಿಗಳನ್ನು ಮೋದಿಯವರು ಭೇಟಿಯಾಗಿರುವುದು ಮುಂಬರುವ ವರ್ಷಗಳಲ್ಲಿ ಭಾರತಕ್ಕೆ ಹೆಚ್ಚಿನ ಹೂಡಿಕೆಗಳನ್ನು ಹರಿದು ಬರುವಂತೆ ಮಾಡುತ್ತದೆ ಎಂಬ ನಿರೀಕ್ಷೆಯನ್ನು ಹುಟ್ಟು ಹಾಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.