ನವದೆಹಲಿ: ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದ ತ್ರಿಪುರಾದ ಬದಹರ್ಘಢ ಮತ್ತು ಉತ್ತರಪ್ರದೇಶದ ಹಮೀರ್ ಪುರ್ ಕ್ಷೇತ್ರದ ಜನರಿಗೆ ಪ್ರಧಾನಿ ನರೇಂದ್ರ ಮೋದಿಯವರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಟ್ವಿಟ್ ಮಾಡಿರುವ ಅವರು, “ಬಿಜೆಪಿ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ತ್ರಿಪುರಾದ ಬದಹರ್ಘಢ ಮತ್ತು ಯುಪಿಯ ಹಮೀರ್ಪುರದ ನನ್ನ ಸಹೋದರಿಯರು ಮತ್ತು ಸಹೋದರರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅವರ ಕನಸುಗಳನ್ನು ಈಡೇರಿಸುವಲ್ಲಿ ನಾವು ಯಾವಾಗಲೂ ಮುಂಚೂಣಿಯಲ್ಲಿರುತ್ತೇವೆ. ಗೆಲುವಿಗೆ ಶ್ರಮಿಸಿದ ಆಯಾ ರಾಜ್ಯ ಘಟಕಗಳಿಗೆ ಮತ್ತು ಶ್ರಮಿಸಿದ ಕಾರ್ಯಕರ್ತರಿಗೆ ನಾನು ನಮಸ್ಕರಿಸುತ್ತೇನೆ, “ಎಂದಿದ್ದಾರೆ.
I thank my sisters and brothers of Badharghat in Tripura and Hamirpur in UP for placing their faith in @BJP4India. We will always remain at the forefront of fulfilling their dreams. I salute the respective state units and Karyakartas who worked hard among the people.
— Narendra Modi (@narendramodi) September 27, 2019
ಬದಹರ್ಘಢದ ಬಿಜೆಪಿ ಅಭ್ಯರ್ಥಿ 20,487 ಮತಗಳಿಂದ ಜಯವನ್ನು ಗಳಿಸಿದ್ದಾರೆ. ಅವರ ಹತ್ತಿರದ ಪ್ರತಿಸ್ಪರ್ಧಿ ಕಮ್ಯೂನಿಸ್ಟ್ ಪಕ್ಷದ ಬಲ್ತಿ ಬಿಶ್ವಾಸ್ ಅವರು 15,211 ಮತ ಪಡೆದುಕೊಂಡಿದ್ದಾರೆ.
ಹಮೀರ್ ಪುರದ ಬಿಜೆಪಿ ಅಭ್ಯರ್ಥಿ ಯುವರಾಜ್ ಸಿಂಗ್ 74,5000 ಮತಗಳನ್ನು ಪಡೆದುಕೊಂಡಿದ್ದಾರೆ, ಸಮಾಜವಾದಿಯ ಅಭ್ಯರ್ಥಿ 57,300 ಮತಗಳನ್ನು ಉಪಚುನಾವಣೆಯಲ್ಲಿ ಪಡೆದುಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.