ನವದೆಹಲಿ: ಪಾಕಿಸ್ಥಾನ ಮೂಲದ ಡ್ರೋನ್ ಪಂಜಾಬಿನ ಅಟ್ಟಾರಿಯಲ್ಲಿ ಪತ್ತೆಯಾಗಿದೆ. ಆರೋಪಿತ ಭಯೋತ್ಪಾದಕ ಆಕಾಶ್ ದೀಪ್ ಸ್ಥಳದ ಬಗ್ಗೆ ಮಾಹಿತಿಯನ್ನು ನೀಡಿದ ಬಳಿಕ ಪಂಜಾಬ್ ಪೊಲೀಸ್ ಭಯೋತ್ಪಾದನಾ ನಿಗ್ರಹ ಘಟಕ ಡ್ರೋನ್ ಅನ್ನು ಪತ್ತೆ ಹಚ್ಚಿದೆ. ಡ್ರೋನ್ ಬಿದ್ದಿದ್ದ ಜಾಗಕ್ಕೆ ಪೊಲೀಸರು ಆರೋಪಿಯನ್ನು ಕರೆದೊಯ್ದಿದ್ದರು.
“ತಾಂತ್ರಿಕ ದೋಷದಿಂದಾಗಿ ಡ್ರೋನ್ಗೆ ಪಾಕಿಸ್ಥಾನಕ್ಕೆ ಮರಳಲು ಸಾಧ್ಯವಾಗಿಲ್ಲ, ಹೀಗಾಗಿ ಆರೋಪಿ ಅದನ್ನು ಅಟ್ಟಾರಿ ಗಡಿಯ ಸಮೀಪ ಮುಚ್ಚಿಟ್ಟಿದ್ದ” ಎಂದು ಹಿರಿಯ ಪೊಲೀಸ್ ಅಧಿಕಾರಿ ಬಲ್ಬೀರ್ ಸಿಂಗ್ ಹೇಳಿದ್ದಾರೆ.
ಭತ್ತದ ಗದ್ದೆಯಲ್ಲಿ ನೆಲದಡಿಯಲ್ಲಿ ಈತ ಡ್ರೋನ್ ಅನ್ನು ಅಡಗಿಸಿಟ್ಟಿದ್ದ ಎನ್ನಲಾಗಿದೆ.
ಅಮೃತಸರದಲ್ಲಿ ಎಕೆ-47 ಅಸಾಲ್ಟ್ ರೈಫಲ್ ಮತ್ತು ಗ್ರೆನೇಡ್ ಅನ್ನು ಡ್ರೋನ್ ಮೂಲಕ ಪಾಕಿಸ್ಥಾನ ಇಳಿಸಲು ಪ್ರಯತ್ನಿಸಿದೆ ಎಂದು ಪೊಲೀಸರು ಹೇಳಿದ್ದರು. ಜಮ್ಮು ಕಾಶ್ಮೀರದಲ್ಲಿ ತೊಂದರೆಯನ್ನು ಸೃಷ್ಟಿಸುವ ಸಲುವಾಗಿಯೇ ಈ ಕೃತ್ಯವನ್ನು ನಡೆಸಲಾಗಿತ್ತು.
ಸ್ಯಾಟಲೈಟ್ ಫೋನ್ಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಭಾರತದ ನೆಲದಲ್ಲಿ ಇಳಿಸಲು ಈ ಡ್ರೋನ್ ಈ ತಿಂಗಳ 10 ದಿನಗಳ ಕಾಲ ಎಂಟು ಸುತ್ತುಗಳನ್ನು ಹಾಕಿದವು ಎಂದು ಮೂಲಗಳು ತಿಳಿಸಿವೆ. ಈ ಹಾರುವ ಯಂತ್ರಗಳು 5 ಕೆಜಿ ವರೆಗಿನ ಭಾರವನ್ನು ಸಾಗಿಸಬಲ್ಲವು. ಕಣ್ತಪ್ಪಿಸಲು ಇವುಗಳು ವೇಗವಾಗಿ ಮತ್ತು ನಿಧಾನಗತಿಯಲ್ಲಿ ಹಾರಾಟವನ್ನು ನಡೆಸಬಲ್ಲವು ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.