ನ್ಯೂಯಾರ್ಕ್: ಭಯೋತ್ಪಾದನೆ ಕೈಗಾರಿಕೆಯ ಮೇಲಿನ ತನ್ನ 70 ವರ್ಷಗಳ ಹೂಡಿಕೆ ನಷ್ಟವಾಯಿತು ಎಂಬ ಕಾರಣಕ್ಕೆ ಪಾಕಿಸ್ಥಾನವು ಕಾಶ್ಮೀರದ ಬಗ್ಗೆ ಆಕ್ರೋಶಗೊಂಡಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈ ಶಂಕರ್ ಹೇಳಿದ್ದಾರೆ.
ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಅಮೆರಿಕದಲ್ಲಿರುವ ಜೈಶಂಕರ್, ” ಭಾರತಕ್ಕೆ ಪಾಕಿಸ್ಥಾನದೊಂದಿಗೆ ಮಾತುಕತೆ ನಡೆಸುವುದಕ್ಕೆ ಯಾವುದೇ ಸಮಸ್ಯೆಯಿಲ್ಲ, ಆದರೆ ಟೆರರಿಸ್ಥಾನದೊಂದಿಗೆ ಮಾತುಕತೆ ನಡೆಸಲು ನಿಜವಾಗಿಯೂ ತೊಂದರೆ ಇದೆ” ಎನ್ನುವ ಮೂಲಕ ಪಾಕಿಸ್ಥಾನವನ್ನು ನೇರವಾಗಿಯೇ ಭಯೋತ್ಪಾದಕ ರಾಷ್ಟ್ರ ಎಂದು ದೂಷಣೆ ಮಾಡಿದ್ದಾರೆ.
ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಭಾರತದ ಮೇಲೆ ನಿರಂತರವಾಗಿ ನಡೆಸುತ್ತಿರುವ ವಾಗ್ದಾಳಿಯ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದ ಅವರು, “ಅವರದ್ದು ಆಕ್ರೋಶದ ಪ್ರತಿಕ್ರಿಯೆಯಾಗಿದೆ, ಅವರಿಗೆ ಅನೇಕ ವಿಧಗಳಲ್ಲಿ ಹತಾಶೆಯಾಗಿದೆ, ಯಾಕೆಂದರೆ ದೀರ್ಘಕಾಲದವರೆಗೆ ಅವರು ಭಯೋತ್ಪಾದನೆಯ ಇಡೀ ಉದ್ಯಮವನ್ನು ನಿರ್ಮಿಸಿದ್ದಾರೆ. ಭಾರತವನ್ನು ಅಸ್ಥಿರಗೊಳಿಸಲು ನಿರ್ಮಾಣ ಮಾಡಿದ್ದ ಭಯೋತ್ಪಾದಕ ಉದ್ಯಮ ಈಗ ಮುಳುಗುತ್ತಿರುವುದನ್ನು ನೋಡಿ ಪಾಕಿಸ್ಥಾನಕ್ಕೆ ಆತಂಕವಾಗುತ್ತಿದೆ” ಎಂದಿದ್ದಾರೆ.
ನ್ಯೂಯಾರ್ಕ್ನ ಸಾಂಸ್ಕೃತಿಕ ಸಂಸ್ಥೆಯಾದ ಏಷ್ಯಾ ಸೊಸೈಟಿಯಲ್ಲಿ ಮಾಡಿದ ಭಾಷಣದ ಸಂದರ್ಭದಲ್ಲೂ ಅವರು ಇದನ್ನು ಉಲ್ಲೇಖ ಮಾಡಿದ್ದು, ಭಯೋತ್ಪಾದನೆಯನ್ನು ದೇಶದ ಕಾನೂನುಬದ್ಧ ಸಾಧನವಾಗಿ ಬಳಸುವ ಮಾದರಿಯು ಇನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ ಎಂಬುದನ್ನು ಪಾಕಿಸ್ಥಾನ ಒಪ್ಪಿಕೊಳ್ಳಬೇಕಾಗಿದೆ ಎಂದು ಹೇಳಿದ್ದರು.
26/11 ಮುಂಬಯಿ ದಾಳಿಯ ಉದಾಹರಣೆಯನ್ನು ನೀಡಿದ ಜೈಶಂಕರ್ ಅವರು, ಕಾಶ್ಮೀರವು ಉಭಯ ದೇಶಗಳ ನಡುವಿನ ಎಲ್ಲಾ ಸಮಸ್ಯೆಗಳ ಕೇಂದ್ರಬಿಂದುವಾಗಿದೆ ಎಂಬ ವಾದವನ್ನು ತಳ್ಳಿ ಹಾಕಿದ್ದರು. ಕಾಶ್ಮೀರ ದೊಡ್ಡ ಸಮಸ್ಯೆಯಲ್ಲಿ, ಸಮಸ್ಯೆಯಿರುವುದು “ಮನಸ್ಥಿತಿ”ಯಲ್ಲಿ. ಪಾಕಿಸ್ಥಾನವು ಭಯೋತ್ಪಾದನೆಯಿಂದ ದೂರ ಸರಿಯುವ ಅಗತ್ಯವಿದೆ ಎಂದು ಅವರು ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.