ನವದೆಹಲಿ: ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್ ಅನ್ನು ಶುಕ್ರವಾರ ನಿಗದಿತ ಸ್ಥಳದಲ್ಲಿ ಯಶಸ್ವಿಯಾಗಿ ನಿಯಂತ್ರಿತ ಇಳಿಸುವಿಕೆ (ಅರೆಸ್ಟೆಡ್ ಲ್ಯಾಂಡಿಂಗ್)ಗೆ ಒಳಪಡಿಸಲಾಗಿದೆ. ಈ ಮೂಲಕ ನಿರ್ಣಾಯಕ ಪರೀಕ್ಷೆಯಲ್ಲಿ ತೇಜಸ್ ಜಯಶಾಲಿಯಾಗಿ ಹೊರಹೊಮ್ಮಿದೆ. ಗೋವಾದ ಕಿರಿದಾದ ಪ್ರದೇಶದಲ್ಲಿ ಈ ಪರೀಕ್ಷೆಯನ್ನು ನಡೆಸಲಾಗಿತ್ತು.
ಈ ಯಶಸ್ವಿ ಶಾರ್ಟ್ ಲ್ಯಾಂಡಿಂಗ್ ಬಳಿಕ ತೇಜಸ್ ಲಘು ಯುದ್ಧ ವಿಮಾನವು ಮಹತ್ವದ ಮೈಲಿಗಲ್ಲನ್ನು ತಲುಪಿದೆ. ಈ ಪರೀಕ್ಷೆಯನ್ನು ಪಾಸ್ಸಾದ ದೇಶದ ಮೊದಲ ಸ್ವದೇಶಿ ನಿರ್ಮಿತ ಯುದ್ಧ ವಿಮಾನ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
ಕ್ಷಿಪ್ರ ವೇಗದಲ್ಲಿ ಚಲಿಸುವ ಯುದ್ಧವಿಮಾನವನ್ನು ಅತ್ಯಂತ ಕಡಿಮೆ ಅಂತರದಲ್ಲಿ ಇಳಿಸುವ ಸಾಮರ್ಥ್ಯವನ್ನು ಪರೀಕ್ಷಿಸುವ ಸಲುವಾಗಿ ಈ ಪರೀಕ್ಷೆಯನ್ನು ನಡೆಸಲಾಗಿದೆ.
ಗೋವಾದ ತೀರ ಆಧಾರಿತ ಪರೀಕ್ಷಾ ಕೇಂದ್ರದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಮತ್ತು ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿಯ ಮೇಲ್ವಿಚಾರಣೆಯಲ್ಲಿ ಈ ಪರೀಕ್ಷೆಯನ್ನು ನಡೆಸಲಾಗಿದೆ.
ಶುಕ್ರವಾರ ಈ ಪರೀಕ್ಷಾ ಕೇಂದ್ರದಲ್ಲಿ ನೌಕಾ ನೆಲೆಯಂತಿರುವ ಕಿರಿದಾದದ ಜಾಗದಲ್ಲಿ ಕ್ಷಿಪ್ರ ವೇಗದಲ್ಲಿ ಹಾರಿಬಂದು ತೇಜಸ್ ಲ್ಯಾಂಡಿಂಗ್ ಮಾಡಿದೆ. ಇದುವರೆಗೆ ರಷ್ಯಾ, ಅಮೆರಿಕಾ, ಚೀನಾ, ಫ್ರಾನ್ಸ್ನ ಕೆಲವೇ ಯುದ್ಧ ವಿಮಾನಗಳು ಈ ಪರೀಕ್ಷೆಯಲ್ಲಿ ಯಶಸ್ವಿಯಾಗಿವೆ.
#WATCH DRDO and the Aeronautical Development Agency successfully executed the first ever arrested landing of LCA Tejas (Navy) at the shore based test facility in Goa. This is a step towards the aircraft getting operational on aircraft carrier INS Vikramaditya. (video:DRDO) pic.twitter.com/LcsnIYTHPU
— ANI (@ANI) September 13, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.