ನವದೆಹಲಿ: 1897ರಲ್ಲಿ ನಡೆದ ಸರ್ ಗಢಿ ಯುದ್ಧದಲ್ಲಿ ಹುತಾತ್ಮರಾದ 21 ಮಂದಿ ಸಿಖ್ ವೀರರಿಗೆ ನಟ ಅಕ್ಷಯ್ ಕುಮಾರ್ ಅವರು ಗೌರವ ಸಲ್ಲಿಸಿದ್ದಾರೆ. ತಮ್ಮ ‘ಕೇಸರಿ’ ಸಿನಿಮಾದ ಮೂಲಕ ಅಕ್ಷಯ್ ಅವರು ಇಡೀ ಜಗತ್ತಿಗೆ ಸರ್ ಗಢಿ ಯುದ್ಧದ ಬಗ್ಗೆ ತಿಳಿಸಿಕೊಟ್ಟಿದ್ದರು.
‘ಕೇಸರಿ’ ಸಿನಿಮಾದ ಫೋಟೋಗಳನ್ನು ಹಂಚಿಕೊಂಡಿರುವ ಅಕ್ಷಯ್ ಅವರು, “36ನೇ ಸಿಖ್ ರೆಜಿಮೆಂಟಿನ ವೀರರಿಗೆ ನನ್ನ ಗೌರವ ನಮನಗಳು. 10 ಸಾವಿರ ಮಂದಿಯ ವಿರುದ್ಧ ಅವರು ಹೋರಾಡಿದ ಪರಿ, ಅವರ ತ್ಯಾಗ ಇತಿಹಾಸದ ಪುಟಗಳಲ್ಲಿ ಮತ್ತು ನಮ್ಮ ಹೃದಯದಲ್ಲಿ ಅಚ್ಚೊತ್ತಿದೆ #ಸರ್ಗಢಿದಿನ” ಎಂದು ಅವರು ಟ್ವಿಟ್ ಮಾಡಿದ್ದಾರೆ.
My tributes to the bravehearts of the 36th Sikh Regiment, 21 Against 10,000…a sacrifice which will forever be etched in the pages of history and our hearts 🙏🏻 #SaragarhiDay pic.twitter.com/RcANBKM4K0
— Akshay Kumar (@akshaykumar) September 12, 2019
122 ವರ್ಷಗಳ ಹಿಂದೆ ಸರ್ ಗಢಿ ಯುದ್ಧದಲ್ಲಿ 21 ಸಿಖ್ ಸೈನಿಕರು 10,000 ಆಫ್ಘನ್ನರನ್ನು ಧೈರ್ಯದಿಂದ ಎದುರಿಸಿದ್ದರು. ಸಿಖ್ ಸೈನಿಕರ ಶೌರ್ಯ ಮತ್ತು ಧೈರ್ಯದ ಕಥೆಯನ್ನು ಅಕ್ಷಯ್ ಅಭಿನಯದ ‘ಕೇಸರಿ’ ಯಲ್ಲಿ ಹೇಳಲಾಗಿದೆ. ಈ ಸಿನಿಮಾದಲ್ಲಿ ನಟ ಅಕ್ಷಯ್ ಅವರು ಹವಲ್ದಾರ್ ಇಶರ್ ಸಿಂಗ್ ಪಾತ್ರವನ್ನು ನಿಭಾಯಿಸಿದ್ದರು.
ಈ ಚಿತ್ರವನ್ನು ಸಹ-ನಿರ್ಮಾಣವನ್ನು ಮಾಡಿರುವ ಝೀ ಸ್ಟುಡಿಯೋಸ್ ಕೂಡ ಹುತಾತ್ಮರನ್ನು ನೆನಪಿಸಿಕೊಂಡು ಟ್ವೀಟ್ ಮಾಡಿದೆ. “ಈ ದಿನ, ಮಿಲಿಟರಿ ಇತಿಹಾಸದಲ್ಲಿ ಸರಿಸಾಟಿಯಿಲ್ಲದ ಧೈರ್ಯದ ಕಾರ್ಯವನ್ನು ಅಚ್ಚೊತ್ತಿದೆ. 21 ಧೈರ್ಯಶಾಲಿ ಸೈನಿಕರು 10,000 ಅಫ್ಘನ್ನರ ವಿರುದ್ಧ ಹೋರಾಡಿ ಸರ್ ಗಢಿ ಕೋಟೆಯ ಹೆಮ್ಮೆಯನ್ನು ಉಳಿಸಿಕೊಂಡರು” ಎಂದಿದೆ.
On this day, an unmatchable saga of bravery was etched in the military history, when 21 brave soldiers laid their lives fighting against 10,000 Afghan tribesmen to save the pride of Saragarhi Fort. @akshaykumar #Kesari #SaragarhiDay pic.twitter.com/lXuPCMzhlP
— Zee Studios (@ZeeStudios_) September 12, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.