ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಪ್ರಮೋದ್ ಕುಮಾರ್ ಮಿಶ್ರಾ (ಪಿಕೆ ಮಿಶ್ರಾ) ಅವರು ಮತ್ತು ಪ್ರಧಾನ ಸಲಹೆಗಾರರಾಗಿ ಮಾಜಿ ಸಂಪುಟ ಕಾರ್ಯದರ್ಶಿ ಪ್ರದೀಪ್ ಕುಮಾರ್ ಸಿನ್ಹಾ (ಪಿಕೆ ಸಿನ್ಹಾ) ಅವರು ಬುಧವಾರ ನೇಮಕಗೊಂಡಿದ್ದಾರೆ.
ಎರಡೂ ಅಧಿಕಾರಿಗಳ ನೇಮಕಾತಿಗಳು ಪ್ರಧಾನಮಂತ್ರಿಯ ಅಧಿಕಾರದ ಅವಧಿಯವರೆಗೆ ಇರಲಿದೆ ಅಥವಾ ಮುಂದಿನ ಆದೇಶದವರೆಗೆ ಇರಲಿದೆ ಎಂದು ಮೂಲಗಳು ತಿಳಿಸಿವೆ.
2014 ರಲ್ಲಿ ಮೋದಿಯವರು ಪ್ರಧಾನ ಮಂತ್ರಿಯಾಗಿ ಆಯ್ಕೆಯಾದಾಗಿನಿಂದಲೂ ಪಿಎಂಒ ಜೊತೆಗಿದ್ದ ಮಾಜಿ ಪ್ರಧಾನ ಕಾರ್ಯದರ್ಶಿ ತ್ರಿಪೇಂದ್ರ ಮಿಶ್ರಾ ಅವರ ನಿರ್ಗಮನದ ಹಿನ್ನೆಲೆಯಲ್ಲಿ ಹೊಸ ನೇಮಕಗಳು ನಡೆದಿವೆ. ಮೋದಿಯವರಿಗೆ ನವದೆಹಲಿಯ ಅಧಿಕಾರಶಾಹಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿದ ಕೀರ್ತಿ ತ್ರಿಪೇಂದ್ರ ಮಿಶ್ರಾ ಅವರಿಗೆ ಸಲ್ಲುತ್ತದೆ.
ಪಿ ಕೆ ಮಿಶ್ರಾ ಪ್ರಸ್ತುತ ಪ್ರಧಾನಿಯವರು ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಸಿನ್ಹಾ ಅವರು ಪ್ರಧಾನಿಗೆ ಒಎಸ್ಡಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡೆವಲಪ್ಮೆಂಟ್ ಎಕನಾಮಿಕ್ಸ್ನಲ್ಲಿ ಪಿಎಚ್ಡಿ ಮಾಡಿರುವ ಪಿ ಕೆ ಮಿಶ್ರಾ ಅವರು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಪದವಿ ಪಡೆದುಕೊಂಡಿದ್ದಾರೆ ಮತ್ತು ಸ್ನಾತಕೋತ್ತರರವನ್ನು ಸಸೆಕ್ಸ್ ಯೂನಿವರ್ಸಿಟಿಯಲ್ಲಿ ಪಡೆದುಕೊಂಡಿದ್ದಾರೆ. ವಿಪತ್ತು ನಿರ್ವಹಣೆಗಾಗಿ ಅವರನ್ನು ಇತ್ತೀಚೆಗೆ ವಿಶ್ವಸಂಸ್ಥೆಯ SASAKAWA ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೃಷಿ, ವಿಪತ್ತು ನಿರ್ವಹಣೆ, ವಿದ್ಯುತ್ ವಲಯ, ಮೂಲಸೌಕರ್ಯ ಹಣಕಾಸು ಮತ್ತು ನಿಯಂತ್ರಕ ವಿಷಯಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳ ನಿರ್ವಹಣೆಯಲ್ಲಿ ಅವರು ದೀರ್ಘಕಾಲದ ಅನುಭವವನ್ನು ಹೊಂದಿದ್ದಾರೆ ಮತ್ತು ಸಂಶೋಧನೆ, ಪ್ರಕಟಣೆಗಳು, ನೀತಿ ನಿರೂಪಣೆ ಮತ್ತು ಕಾರ್ಯಕ್ರಮ ಮತ್ತು ಯೋಜನಾ ನಿರ್ವಹಣೆಯನ್ನು ಒಳಗೊಂಡ ಅತ್ಯುತ್ತಮ ವೃತ್ತಿ ದಾಖಲೆಯನ್ನು ಹೊಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.