ನವದೆಹಲಿ: ತಮ್ಮ ಗಾಯನದಿಂದಲೇ ಭಾರತೀಯರ ಹೃದಯವನ್ನು ಗೆದ್ದಿರುವ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರಿಗೆ ಅವರ 90ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ‘ರಾಷ್ಟ್ರದ ಮಗಳು’ ಬಿರುದನ್ನು ನೀಡಿ ಗೌರವಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಧರಿಸಿದೆ. ಸೆ.28ರಂದು ಲತಾ ಮಂಗೇಶ್ಕರ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಭಾರತೀಯ ಚಲನಚಿತ್ರಕ್ಕೆ, ಸಂಗೀತ ಲೋಕಕ್ಕೆ ಸರಿಸಾಟಿಯಿಲ್ಲದ ಕೊಡುಗೆಯನ್ನು ನೀಡಿರುವ ಅವರನ್ನು ಗೌರವಿಸುವ ಸಲುವಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿ ಪ್ರದಾನದ ಸಂದರ್ಭದಲ್ಲಿ ಖ್ಯಾತ ಕವಿ ಮತ್ತು ಗೀತರಚನೆಕಾರ ಪ್ರಸೂನ್ ಜೋಶಿ ಲತಾ ಅವರಿಗಾಗಿ ವಿಶೇಷ ಹಾಡನ್ನು ಅರ್ಪಿಸಲಿದ್ದಾರೆ.
ಲತಾ ಅವರು ಸಂಗೀತ ಕ್ಷೇತ್ರಕ್ಕೆ ಸುದೀರ್ಘ 70 ವರ್ಷಗಳ ಕೊಡುಗೆಯನ್ನು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಲತಾ ಮಂಗೇಶ್ಕರ್ ಅವರ ದೊಡ್ಡ ಅಭಿಮಾನಿಯಾಗಿದ್ದಾರೆ.
ರಾಷ್ಟ್ರದ ಧ್ವನಿಯೆಂದೇ ಅನೇಕರಿಂದ ಗೌರವಿಸಲ್ಪಡುವ ಮಂಗೇಶ್ಕರ್ ಅವರು ಸಾವಿರಕ್ಕೂ ಹೆಚ್ಚು ಚಿತ್ರಗಳ ಸಂಗೀತಕ್ಕೆ ಧ್ವನಿ ನೀಡಿದ್ದಾರೆ. ಅವರು ಹಿಂದಿ, ಬಂಗಾಳಿ ಮತ್ತು ಮರಾಠಿ ಸೇರಿದಂತೆ 36 ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಹಾಡನ್ನು ಹಾಡಿದ್ದಾರೆ. ಭಾರತದ ಅತ್ಯುನ್ನತ ನಾಗರಿಕ ಗೌರವವಾಗಿರುವ ಭಾರತ ರತ್ನ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.