ನವದೆಹಲಿ: ನಾಯಕತ್ವ ಮತ್ತು ಸ್ವಚ್ಛ ಭಾರತ ಅಭಿಯಾನಕ್ಕೆ ತೋರಿಸಿದ ಬದ್ಧತೆಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಪ್ರತಿಷ್ಠಿತ ‘ಗ್ಲೋಬಲ್ ಗೋಲ್ಕೀಪರ್ಸ್ ಆಫ್ ದಿ ಇಯರ್ ಅವಾರ್ಡ್’ ನೀಡಿ ಈ ತಿಂಗಳ ಕೊನೆಯಲ್ಲಿ ಗೌರವಿಸಲಿದೆ. ಜಗತ್ತಿನ ನಂ.1 ಶ್ರೀಮಂತ ಬಿಲ್ ಗೇಟ್ಸ್ ಮತ್ತು ಅವರ ಪತ್ನಿ ಮೆಲಿಂಡಾ ನಡೆಸುತ್ತಿರುವ ಫೌಂಡೇಶನ್ ಇದಾಗಿದೆ.
ಮೋದಿಗೆ 2019 ರ ‘ಗ್ಲೋಬಲ್ ಗೋಲ್ಕೀಪರ್ಸ್ ಅವಾರ್ಡ್’ ನೀಡಲಾಗುವುದು ಎಂದು ಮೂಲಗಳು ದೃಢಪಡಿಸಿವೆ. ಫೌಂಡೇಶನ್ ಪ್ರಕಾರ, ಈ ಪ್ರಶಸ್ತಿಯು ತಮ್ಮ ದೇಶದಲ್ಲಿ ಪರಿಣಾಮಕಾರಿಯಾದ ಕೆಲಸವನ್ನು ಮಾಡುವ ಮೂಲಕ ಜಾಗತಿಕ ಗುರಿಗಳನ್ನು ತಲುಪಲು ತಮ್ಮ ಬದ್ಧತೆಯನ್ನು ಪ್ರದರ್ಶಿಸುವ ರಾಜಕೀಯ ನಾಯಕನನ್ನು ಗೌರವಿಸುವ ವಿಶೇಷ ಮಾನ್ಯತೆಯಾಗಿದೆ.
2014 ರ ಅಕ್ಟೋಬರ್ 2 ರಂದು ಪ್ರಾರಂಭಿಸಿದ ಸ್ವಚ್ಛಭಾರತ ಮಿಷನ್ಗೆ ಬದ್ಧತೆಯನ್ನು ತೋರಿಸಿದ್ದಕ್ಕಾಗಿ ಮತ್ತು ನಾಯಕತ್ವಕ್ಕಾಗಿ ಮೋದಿಯವರನ್ನು ಗೌರವಿಸಲಾಗುತ್ತಿದೆ.
ಮಹತ್ಮಾಗಾಂಧಿಯವರ 150 ನೇ ಜನ್ಮದಿನಾಚರಣೆಯ ವೇಳೆಗೆ ದೇಶದಲ್ಲಿ ಸಾರ್ವತ್ರಿಕ ನೈರ್ಮಲ್ಯವನ್ನು ಸಾಧಿಸುವ ಪ್ರಯತ್ನಗಳನ್ನು ಚುರುಕುಗೊಳಿಸುವ ಮಹತ್ವಾಕಾಂಕ್ಷೆಯನ್ನು ಈ ಅಭಿಯಾನ ಹೊಂದಿದೆ.
ಅಕ್ಟೋಬರ್ 2, 2019 ರ ವೇಳೆಗೆ 90 ದಶಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಮತ್ತು ಪ್ರಸ್ತುತ ಭಾರತದ ಶೇಕಡಾ 98 ರಷ್ಟು ಗ್ರಾಮಗಳು ಬಯಲು ಶೌಚ ಮುಕ್ತಗೊಂಡಿವೆ. ನಾಲ್ಕು ವರ್ಷಗಳ ಹಿಂದೆ ಶೇಕಡಾ 38 ರ ಬಯಲು ಶೌಚ ಮುಕ್ತ ಗ್ರಾಮಗಳಿದ್ದವು.
ಫೌಂಡೇಶನ್ ಸೆಪ್ಟೆಂಬರ್ 24 ರಂದು ತನ್ನ ನಾಲ್ಕನೇ ವಾರ್ಷಿಕ ಗೋಲ್ಕೀಪರ್ಸ್ ‘ಗ್ಲೋಬಲ್ ಗೋಲ್ಸ್ ಅವಾರ್ಡ್ಸ್’ ಅನ್ನು ಆಯೋಜಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.