ನವದೆಹಲಿ: ಗಣೇಶ ಚತುರ್ಥಿ ಹಬ್ಬದ ಸಂಭ್ರಮ ನಿನ್ನೆಯಿಂದ ಜೋರಾಗಿ ನಡೆಯುತ್ತಿದೆ. ಪರಿಸರ ಸ್ನೇಹಿ ಗಣಪ ಈ ವರ್ಷ ಎಲ್ಲಾ ಕಡೆಯು ರಾರಾಜಿಸುತ್ತಿದ್ದಾನೆ. ಜನರಲ್ಲಿ ಹೆಚ್ಚುತ್ತಿರುವ ಪರಿಸರ ಕಾಳಜಿ ಇದಕ್ಕೆ ಕಾರಣ ಎಂಬುದು ಸಕಾರಾತ್ಮಕ ಬೆಳವಣಿಗೆಯಾಗಿದೆ.
ಒರಿಸ್ಸಾದ ಹಳ್ಳಿಯೊಂದು ಗಣೇಶನ ವಿಗ್ರಹವನ್ನು ರಚಿಸಲು ಬಾಳೆಹಣ್ಣು ಮತ್ತು ಬಿದಿರನ್ನು ಬಳಸಿಕೊಂಡಿದೆ. ಹತ್ತು ದಿನಗಳ ಬಳಿಕ ಗಣಪನ ಮೂರ್ತಿ ರಚನೆಗೆ ಬಳಸಲಾದ ಬಾಳೆ ಕಾಯಿ ಹಣ್ಣಾಗಿ ತಿನ್ನಲು ಯೋಗ್ಯವಾಗುತ್ತದೆ. ಬಳಿಕ ಅದನ್ನು ಬಡವರಿಗೆ ವಿತರಿಸಲು ಆಯೋಜಕರು ನಿರ್ಧರಿಸಿದೆ.
ಪರಿಸರ ಕಾಳಜಿ ಹೆಚ್ಚುತ್ತಿರುವುದು ನಾನಾ ಸ್ವರೂಪದ ಪರಿಸರ ಸ್ನೇಹಿ ಗಣೇಶ ವಿಗ್ರಹಗಳ ಆವಿಷ್ಕಾರಕ್ಕೆ ಕಾರಣವಾಗಿದೆ. ಬಾಳೆಹಣ್ಣು ಮತ್ತು ಬಿದಿರನ್ನು ಬಳಸಿ ಈ ನಿರ್ದಿಷ್ಟ ವಿಗ್ರಹ ತಯಾರಿಕೆಯನ್ನು 2017 ರಲ್ಲಿ ಒರಿಸ್ಸಾ ರಾಜ್ಯದ ಸಂಬಲ್ಪುರ ಗ್ರಾಮದಲ್ಲಿ ಪ್ರಾರಂಭಿಸಲಾಯಿತು. ಈ ವಿಗ್ರಹವನ್ನು ನಟರಾಜ್ ಕ್ಲಬ್ನ ಸದಸ್ಯರು ನಿರ್ಮಾಣ ಮಾಡಿದ್ದಾರೆ.
ಜನರು ಈ ಬಾಳೆಹಣ್ಣಿನಿಂದ ತಯಾರಿಸಲ್ಪಟ್ಟ ಗಣಪನನ್ನು ಇಷ್ಟಪಡುತ್ತಿದ್ದಾರೆ. 10 ದಿನಗಳ ಬಳಿಕ ಬಡವರಿಗೆ ವಿತರಿಸಲ್ಪಡುತ್ತದೆ ಎಂಬುದು ಉತ್ತಮ ವಿಷಯವಾಗಿದೆ.
ಈ ಹಿಂದೆ, ಈ ಕ್ಲಬ್ನ ಸದಸ್ಯರು ತೆಂಗಿನಕಾಯಿ, ರುದ್ರಾಕ್ಷಿ, ಸಿಹಿ ಬೂಂದಿ ಲಡ್ಡು, ಪವಿತ್ರ ದಾರಗಳು ಮತ್ತು ಶಂಖ ಚಿಪ್ಪುಗಳಂತಹ ಜೈವಿಕ ವಿಘಟನೀಯ ವಸ್ತುಗಳನ್ನು ಬಳಸಿ 25 ಅಡಿ ಎತ್ತರದ ಗಣೇಶನ ವಿಗ್ರಹಗಳನ್ನು ತಯಾರಿಸಿದ್ದರು.
ಈ ವಿಗ್ರಹಗಳ ಅನನ್ಯತೆಯೆಂದರೆ ಅವು ನೀರಿನಲ್ಲಿ ಮುಳುಗಿಸಲ್ಲ ಆದರೆ ಮರುಬಳಕೆ ಮಾಡಬಹುದಾದ ಮತ್ತು ಖಾದ್ಯ ವಸ್ತುಗಳಿಂದ ಮಾಡಲ್ಪಟ್ಟಿದೆ.
ಒರಿಸ್ಸಾ ಮಾತ್ರವಲ್ಲದೇ, ಹಲವು ಕಡೆಗಳಲ್ಲೂ ಪರಿಸರ ಸ್ನೇಹಿಯಾಗಿ ವಿಶಿಷ್ಟ ಸ್ವರೂಪದಲ್ಲಿ ಗಣಪನನ್ನು ರಚನೆ ಮಾಡಲಾಗಿದೆ. ಅದರಲ್ಲಿ ಬೆಂಗಳೂರಿನಲ್ಲಿ ತೆಂಗಿನ ಕಾಯಿಯ ಮೂಲಕ ಗಣಪನನ್ನು ರಚನೆ ಮಾಡಿದ್ದು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
9 ಸಾವಿರ ತೆಂಗಿನ ಕಾಯಿಗಳನ್ನು ಬಳಸಿ ಪುಟ್ಟೇನಗಳ್ಳಿ ದೇಗುಲದಲ್ಲಿ ಗಣಪನನ್ನು ರಚನೆ ಮಾಡಲಾಗಿದೆ. 70 ಭಕ್ತರು 20 ದಿನಗಳನ್ನು ತೆಗೆದುಕೊಂಡು ಈ ಗಣಪನನ್ನು ರಚನೆ ಮಾಡಿದ್ದಾರೆ. ದೇವರ ಅಲಂಕಾರಕ್ಕೆ 20 ವಿಧದ ತರಕಾರಿಗಳನ್ನು ಬಳಸಲಾಗಿದೆ. ಕಳೆದ ವರ್ಷ ಇಲ್ಲಿ ಕಬ್ಬನಿಂದ ಗಣಪನನ್ನು ರಚನೆ ಮಾಡಲಾಗಿತ್ತು
Karnataka: An idol of Lord Ganesha made for #GaneshChaturthi, using over 9,000 coconuts, at a temple in Bengaluru. (01.09.2019) pic.twitter.com/IILC74wbXe
— ANI (@ANI) September 1, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.