ಬೆಂಗಳೂರು : ಕರ್ನಾಟಕದಾದ್ಯಂತ ಸೆ. 1 ರಿಂದ 30 ರ ತನಕ ಬಿ.ಎಲ್.ಓ (ಬೂತ್ ಲೆವಲ್ ಆಫೀಸರ್)ಗಳು ಮನೆ ಮನೆಗೆ ತೆರಳಿ ಮತದಾರರ ಪಟ್ಟಿಯ ಪರಿಶೀಲನೆ, ದೃಢೀಕರಣ, ಸೇರ್ಪಡೆ, ತೆಗೆದು ಹಾಕುವಿಕೆ, ತಿದ್ದುಪಡಿ ಮುಂತಾದ ಪ್ರಕ್ರಿಯೆಗಳನ್ನು ನಡೆಸಲಿದ್ದಾರೆ.
ಬಿಎಲ್ಓಗಳು ಮನೆ ಮನೆಗೆ ಆಗಮಿಸುತ್ತಿದ್ದು, ಪ್ರತಿಯೊಬ್ಬರು ತಮ್ಮ ಮತದಾನ ಸಂಬಂಧಿತ ದಾಖಲೆಗಳೊಂದಿಗೆ ಸಿದ್ಧವಿರಬೇಕು ಎಂದು ಕೋರಲಾಗಿದೆ.
ಭಾರತದ ಪಾಸ್ಪೋರ್ಟ್, ಚಾಲನಾ ಪರವಾನಗಿ, ಆಧಾರ್ ಕಾರ್ಡ್, ಪಡಿತರ ಚೀಟಿ, ಚುನಾವಣಾ ಆಯೋಗ ನೀಡಿರುವ ದಾಖಲೆಗಳು, ಸರ್ಕಾರಿ/ಅರೆ ಸರ್ಕಾರಿ ನೌಕರರು ಹೊಂದಿರುವ ಚೀಟಿ, ಬ್ಯಾಂಕ್ ಪಾಸ್ ಬುಕ್, ರೈತರು ಹೊಂದಿರುವ ಚೀಟಿಗಳ ಪೈಕಿ ಯಾವುದನ್ನಾದರೂ ಹೊಂದಿರಬೇಕು.
ಹೆಸರು, ತಂದೆಯ ಹೆಸರು, ಲಿಂಗ, ದಿನಾಂಕ, ವಿಳಾಸ, ಫೋಟೋ ತಿದ್ದುಪಡಿಗಳನ್ನು ನಮೂನೆ 8ರಲ್ಲಿ ಮಾಡಲಾಗುತ್ತದೆ.
ಸ್ಥಳ ಬದಲಾವಣೆ ಮತ್ತು ಮರಣ ಇತ್ಯಾದಿಗಳನ್ನು ನಮೂನೆ 7ರಲ್ಲಿ ಮಾಡಬೇಕಾಗುತ್ತದೆ.
ಸೇರ್ಪಡೆಗಾಗಿ ಹುಟ್ಟಿದ ದಿನಾಂಕ, ವಯಸ್ಸಿನ ದೃಢೀಕರಣ, ವಿಳಾಸ ದೃಢೀಕರಣ, 2 ಪಾಸ್ ಪೋರ್ಟ್ ಸೈಝ್ ಫೋಟೋಗಳ ಅಗತ್ಯವಿದೆ. ಇದನ್ನು ನಮೂನೆ 6ರ ಅಡಿಯಲ್ಲಿ ಮಾಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.