ಲಕ್ನೋ: ಯುವಕನೊಬ್ಬನನ್ನು ಕೊಲೆ ಮಾಡಿರುವ ಐದು ಮಂದಿ ಗೋಕಳ್ಳರನ್ನು ಉತ್ತರಪ್ರದೇಶದ ಪಿಲಿಬಿಟ್ ಪೊಲೀಸರು ಬಂಧಿಸಿದ್ದಾರೆ. ಬೀದಿ ಹಸುಗಳನ್ನು ಕಳ್ಳತನ ಮಾಡುವುದನ್ನು ಯುವಕ ವಿರೋಧಿಸಿದ ಹಿನ್ನಲೆಯಲ್ಲಿ ಬಂಧಿತ ಗೋಕಳ್ಳರು ಆತನನ್ನು ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಮೃತ ಯುವಕನನ್ನು 23 ವರ್ಷದ ಸೋನ್ಪಾಲ್ ಎಂದು ಗುರುತಿಸಲಾಗಿದ್ದು, ಮೋಹನ್ಪುರ ಬಾಬುರಾ ಗ್ರಾಮದವನಾಗಿದ್ದಾನೆ. ವರದಿಯ ಪ್ರಕಾರ, ಆಗಸ್ಟ್ 21 ರಂದು ಸೋನ್ಪಾಲ್ ತನ್ನ ಮನೆಯ ಸಮೀಪವಿರುವ ಶೆಡ್ಡಿನಲ್ಲಿ ಮಲಗಿದ್ದ ವೇಳೆ ಗೋ ಕಳ್ಳಸಾಗಾಣಿಕೆದಾರರು ಕರುವನ್ನು ಕದಿಯಲು ಪ್ರಯತ್ನಿಸುತ್ತಿರುವುದನ್ನು ಕಂಡಿದ್ದಾನೆ. ತಕ್ಷಣವೇ ಓಡಿಹೋಗಿ ಅವರನ್ನು ತಡೆಯಲು ಪ್ರಯತ್ನಿಸಿದ್ದಾನೆ. ಇದರಿಂದ ಉದ್ರಿಕ್ತಗೊಂಡ ಕಳ್ಳರು ಆತನ ಮೇಲೆ ಗುಂಡು ಹಾರಿಸಿದ್ದಾರೆ. ಸ್ಥಳದಲ್ಲೇ ಆತ ಮೃತಪಟ್ಟಿದ್ದಾನೆ.
ಪೊಲೀಸರು ಆರಂಭದಲ್ಲಿ ಈ ವಿಷಯವನ್ನು ಲಘುವಾಗಿ ತೆಗೆದುಕೊಂಡಿದ್ದಾರೆ. ಸ್ಥಳೀಯ ಶಾಸಕರ ಮಧ್ಯಪ್ರವೇಶದ ನಂತರವೇ ಅವರು ಅಪರಾಧಿಗಳನ್ನು ಹುಡುಕಲು ಪ್ರಾರಂಭಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಆಗಸ್ಟ್ 25ರಂದು ಪೊಲೀಸರು ಲೆಲ್ಹಾರ್-ಬಮ್ರೌಲಿ ರಸ್ತೆಯಲ್ಲಿ ವೇಗವಾಗಿ ಬರುತ್ತಿದ್ದ ಕಾರೊಂದನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ ಕಾರನ್ನು ನಿಲ್ಲಿಸದೆ ಅದರೊಳಗಿದ್ದವರು ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದಾರೆ. ಬಳಿಕ ಪೊಲೀಸರು ಕಾರಿನೊಳಗಿದ್ದ ಮೂವರನ್ನು ಬಂಧನಕ್ಕೊಳಪಡಿಸಿದ್ದಾರೆ. ಅವರ ಬಳಿ ಇದ್ದ ಜೀವಂತ ದನಗಳನ್ನು ಮತ್ತು ರಿವಾಲ್ವರ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅವರ ವಿಚಾರಣೆಯ ವೇಳೆ ಅವರೇ ಸೋನ್ಪಾಲ್ ಹತ್ಯಾಕೋರರು ಎಂಬ ಅಂಶವೂ ಬೆಳಕಿಗೆ ಬಂದಿದೆ.
ಗೋಕಳ್ಳರಿಗೆ ಜನರು ಹಿಗ್ಗಾಮುಗ್ಗಾ ಥಳಿಸುವ ಘಟನೆಗಳು ನಮ್ಮ ದೇಶದ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತವೆ. ಅದೇ ಗೋವು ಕಳ್ಳರಿಂದ ಹತ್ಯೆಗೀಡಾದವರ ಬಗ್ಗೆ ಯಾರೂ ಹೆಚ್ಚಾಗಿ ಚಿಂತೆ ಮಾಡಲು ಹೋಗುತ್ತಿಲ್ಲ ಎಂಬುದು ವಿಪರ್ಯಾಸ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.