ನವದೆಹಲಿ: ಗ್ಲೋಬಲ್ ಇ-ಟೈಲರ್ ಅಮೆಜಾನ್ನಿನ ಭಾರತೀಯ ಅಂಗ ಅಮೆಜಾನ್ ಇಂಡಿಯಾವು ಮಾಜಿ ಯೋಧರಿಗೆ ಉದ್ಯೋಗ ಕಾರ್ಯಕ್ರಮ ಯೋಜನೆಯನ್ನು ಆರಂಭಿಸಿದೆ. ಇದರಡಿಯಲ್ಲಿ ಅದು ಮಾಜಿ ಯೋಧರಿಗೆ ಮತ್ತು ಅವರ ಪತ್ನಿಯರಿಗೆ ಉದ್ಯೋಗವನ್ನು ನೀಡಲು ಮುಂದಾಗಿದೆ. ತನ್ನ ಫುಲ್ಫಿಲ್ಮೆಂಟ್, ಸಾರ್ಟ್ ಮತ್ತು ಡೆಲಿವರಿ ಸೆಂಟರ್ಗಳಲ್ಲಿ ಇವರಿಗೆ ಉದ್ಯೋಗವನ್ನು ನೀಡುವುದಾಗಿ ಅದು ಹೇಳಿಕೊಂಡಿದೆ.
“ಡೈರೆಕ್ಟರ್-ಜನರಲ್ ಆಫ್ ರಿಸೆಟಲ್ಮೆಂಟ್ ಮತ್ತು ಆರ್ಮಿ ವೆಲ್ಫೇರ್ ಪ್ಲೇಸ್ಮೆಂಟ್ ಆರ್ಗನೈಝೇಶನ್ ಸಂಸ್ಥೆಯ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದೆ” ಎಂದು ಅಮೆಜಾನ್ ಇಂಡಿಯಾ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.
ಈ ಇ-ಕಾಮರ್ಸ್ ದೈತ್ಯ ಸಂಸ್ಥೆಯು ದೇಶಾದ್ಯಂತದ ನಗರಗಳು ಮತ್ತು ಪಟ್ಟಣಗಳಲ್ಲಿ ಸುಮಾರು 50 ಫುಲ್ಫಿಲ್ಮೆಂಟ್ ಸೆಂಟರ್ ಮತ್ತು 200 ಡೆಲಿವರಿ ಸೆಂಟರ್ಗಳನ್ನು ಹೊಂದಿದೆ. ಆದರೆ ಎಷ್ಟು ಸಾರ್ಟ್ ಸೆಂಟರ್ಗಳನ್ನು ಇದು ಹೊಂದಿದೆ ಎಂಬುದನ್ನು ಇದುವರೆಗೂ ಬಹಿರಂಗಪಡಿಸಿಲ್ಲ. ಭಾರತದ ಉಪಖಂಡದಲ್ಲಿನ ಸೆಂಟರ್ಗಳಲ್ಲಿ ಎಷ್ಟು ಜನರು ಉದ್ಯೋಗದಲ್ಲಿದ್ದಾರೆ ಎಂಬುದನ್ನೂ ಇದು ಬಹಿರಂಗಪಡಿಸುವುದಿಲ್ಲ. ನಮ್ಮ ನಿಯಮಗಳು ಇದಕ್ಕೆ ಅನುವು ಮಾಡಿಕೊಡುವುದಿಲ್ಲ ಎಂದು ಅಮೆಜಾನ್ ಇಂಡಿಯಾ ವಕ್ತಾರರು ಹೇಳಿದ್ದಾರೆ.
“ಸೆಂಟರ್ಗಳಲ್ಲಿನ ಉದ್ಯೋಗಗಳಲ್ಲಿ ಹೆಚ್ಚಿನವು ಒಪ್ಪಂದದ ಆಧಾರದ ಮೇಲೆ ನಡೆಯುತ್ತವೆ, ಹಬ್ಬಗಳು ಮತ್ತು ಇತರ ಸಂದರ್ಭಗಳಲ್ಲಿ ವಿಶೇಷ ಮಾರಾಟವನ್ನು ರಿಯಾಯಿತಿಗಳು ಮತ್ತು ಆಫರ್ಗಳೊಂದಿಗೆ ನಡೆಸಲಾಗುತ್ತದೆ, ಈ ವೇಳೆ ಉದ್ಯೋಗಕ್ಕೆ ಹೆಚ್ಚಿನವರನ್ನು ಒಪ್ಪಂದದ ಮೇರೆಗೆ ನೇಮಕ ಮಾಡಲಾಗುತ್ತದೆ” ಎಂದು ವಕ್ತಾರರು ಹೇಳುತ್ತಾರೆ.
ಪ್ರಸ್ತುತ ಅಮೆಜಾನ್ ಇಂಡಿಯಾ ಹಮ್ಮಿಕೊಂಡಿರುವ ುದ್ಯೋಗ ಕಾರ್ಯಕ್ರಮವು, ಸೇನಾ ಕುಟುಂಬಗಳಿಗೆ ನಿರಂತರ ಉದ್ಯೋಗಾವಕಾಶವನ್ನು ಸೃಷ್ಟಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.