ನವದೆಹಲಿ: ಇಂದು ದೇಶದಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಹಲವಾರು ಮಂದಿ ಗಣ್ಯರು ಜನತೆಗೆ ಶುಭಾಶಯವನ್ನು ಕೋರಿದ್ದಾರೆ.
ಟ್ವೀಟ್ ಮಾಡಿರುವ ರಾಷ್ಟ್ರಪತಿ ಕೋವಿಂದ್, “ದೇಶದ ನಾಗರಿಕರಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಕಾಮನೆಗಳು. ಶ್ರೀ ಕೃಷ್ಣ ಪರಮಾತ್ಮನ ಬೋಧನೆಗಳು ಸಾರ್ವಕಾಲಿಕ ಪ್ರತಿಬಿಂಬಗಳಾಗಿವೆ. ಈ ಹಬ್ಬದ ಶುಭ ಸಂದರ್ಭ ಮತ್ತು ಸಂಭ್ರಮಾಚರಣೆ ಸಂತೋಷದಿಂದ ಕೂಡಿರಲಿ ಎಂದು ಹಾರೈಸುತ್ತೇನೆ” ಎಂದಿದ್ದಾರೆ.
Greetings and good wishes to fellow citizens on Janmashtami. As we reflect upon the timeless teachings of Lord Krishna, may this be a joyous day full of festivities and celebrations for all of us #PresidentKovind
— President of India (@rashtrapatibhvn) August 24, 2019
ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್ ಮೂಲಕ ಶುಭಾಶಯವನ್ನು ಕೋರಿದ್ದು, “ಎಲ್ಲರಿಗೂ ಜನ್ಮಾಷ್ಟಮಿ ಹಬ್ಬದ ಶುಭಾಶಯಗಳು. ಭಗವಂತ ಶ್ರೀಕೃಷ್ಣನ ಆಶೀರ್ವಾದಗಳು ಸದಾ ನಮ್ಮನ್ನು ಸಂತೋಷದಿಂದ ಮತ್ತು ಆರೋಗ್ಯಯುತವಾಗಿ ಇಡಲಿ. ಜೈ ಶ್ರೀ ಕೃಷ್ಣ!” ಎಂದಿದ್ದಾರೆ.
सभी देशवासियों को श्रीकृष्ण जन्माष्टमी की हार्दिक शुभकामनाएं। जय श्रीकृष्ण!
Janmashtami greetings to everyone! May the blessings of Bhagwan Shri Krishna always bring happiness and good health in our lives. Jai Shri Krishna!
— Narendra Modi (@narendramodi) August 24, 2019
ವಿಷ್ಣುವಿನ ಅವತಾರವಾದ ಶ್ರೀಕೃಷ್ಣನು ಶ್ರಾವಣ ಮಾಸದ ಕೃಷ್ಣ ಪಕ್ಷದ ಎಂಟನೇ ದಿನದಂದು ಜನ್ಮವೆತ್ತಿದ್ದಾನೆ. ಈ ದಿನವನ್ನು ಕೃಷ್ಣ ಜನ್ಮಾಷ್ಟಮಿಯಾಗಿ ಆಚರಿಸಲಾಗುತ್ತದೆ.
ಬಾಲಕೃಷ್ಣನ ಮೂರ್ತಿಯನ್ನು ಅಲಂಕರಿಸಿದ ತೊಟ್ಟಿಲಲ್ಲಿ ಇಟ್ಟು ಪೂಜಿಸಲಾಗುತ್ತದೆ. ಕೃಷ್ಣನು ಹೂವುಗಳಿಂದ ಅಲಂಕೃತವಾಗಿ ಕಂಗೊಳಿಸುತ್ತಾನೆ. ಶ್ರೀಕೃಷ್ಣನ ಜನ್ಮಭೂಮಿ ಮಥುರಾದಲ್ಲಿನ ದೇಗುಲಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ.
ವಿವಿಧೆಡೆಗಳಲ್ಲಿ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ‘ದಹಿ ಹಂಡಿ’ (ಮೊಸರು, ನೀರು ಅಥವಾ ಹಾಲು ತುಂಬಿದ ಮಣ್ಣಿನ ಮಡಕೆಯನ್ನು ಒಡೆಯುವುದು), ಮಾನವ ಪಿರಮಿಡ್ ರಚನೆ, ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಡಿಸಲಾಗುತ್ತದೆ. ಈ ಆಚರಣೆಯಲ್ಲಿ ಸಾವಿರಾರು ಜನರು ಪಾಲ್ಗೊಳ್ಳುತ್ತಾರೆ.
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಕೃಷ್ಣ ಜನ್ಮಾಷ್ಟಮಿಯಂದು ವಿಶೇಷ ಪೂಜೆ-ಪುನಸ್ಕಾರಗಳನ್ನು ನಡೆಯುತ್ತವೆ. ಮೊಸರು ಕುಡಿಕೆ ಒಡೆಯುವ ವಿಟ್ಲಪಿಂಡಿ ಇಲ್ಲಿನ ವೈಶಿಷ್ಟ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.