ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಬಹ್ರೇನ್ ಭೇಟಿಯ ಸಂದರ್ಭದಲ್ಲಿ ಬಹ್ರೇನಿನ ರಾಜಧಾನಿಯಲ್ಲಿರುವ 200 ವರ್ಷಗಳಷ್ಟು ಹಳೆಯದಾದ ಶ್ರೀ ಕೃಷ್ಣ ದೇವಾಲಯದ ನವೀಕರಣ ಯೋಜನೆಯನ್ನು ಔಪಚಾರಿಕವಾಗಿ ಪ್ರಾರಂಭಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಪ್ರಧಾನಿ ಮೋದಿ ಅವರ ಈ ಭೇಟಿಯು ಆ ದೇಶಕ್ಕೆ ಭಾರತದ ಪ್ರಧಾನ ಮಂತ್ರಿಯೊಬ್ಬರು ನೀಡುತ್ತಿರುವ ಮೊದಲ ಭೇಟಿಯಾಗಲಿದೆ. ಇಂದು ಎರಡು ದಿನಗಳ ಪ್ರವಾಸಕ್ಕಾಗಿ ಮೋದಿಯವರು ಬಹ್ರೇನ್ಗೆ ತೆರುತ್ತಿದ್ದಾರೆ. ಅವರು ಬಹ್ರೇನ್ನ ರಾಜಧಾನಿ ಮನಮದಲ್ಲಿರುವ ಶ್ರೀನಾಥಜೀ (ಶ್ರೀ ಕೃಷ್ಣ) ದೇವಾಲಯದ ನವೀಕರಣ ಕಾರ್ಯಕ್ಕೆ ಆರಂಭವನ್ನು ನೀಡಲಿದ್ದಾರೆ.
“ಬಹ್ರೇನ್ ಭೇಟಿಯ ಸಮಯದಲ್ಲಿ, ಕೊಲ್ಲಿಯ ಅತ್ಯಂತ ಹಳೆಯದಾದ ಶ್ರೀನಾಥಜೀ ದೇವಾಲಯದ ಪುನರಾಭಿವೃದ್ಧಿಗೆ ಶ್ರೀ ಕೃಷ್ಣಜನ್ಮಾಷ್ಟಮಿಯ ಸಂದರ್ಭದಲ್ಲಿ ಔಪಚಾರಿಕ ಆರಂಭವನ್ನು ನೀಡಲು ನಾನು ಕೃತಾರ್ಥನಾಗಿದ್ದೇನೆ” ಎಂದು ಮೋದಿ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದೇವಾಲಯವನ್ನು 4.5 ಮಿಲಿಯನ್ ಡಾಲರ್ ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ. ಮೂರು ಅಂತಸ್ತಿನ ರಚನೆ ಇದಾಗಿದ್ದು, 45,000 ಚದರ ಅಡಿ ಭೂಮಿಯಲ್ಲಿ ನಿರ್ಮಿಸಲಾಗುತ್ತಿದ ಥಟ್ಟೈ ಹಿಂದೂ ವ್ಯಾಪಾರಿ ಸಮುದಾಯದ ಅಧ್ಯಕ್ಷ ಬಾಬ್ ಠಾಕೂರ್ ಹೇಳಿದ್ದಾರೆ. ಪುರೋಹಿತರಿಗೆ ಅವಕಾಶ ಕಲ್ಪಿಸಲು ವಿಶೇಷ ಸೌಲಭ್ಯವೂ ಇದರಲ್ಲಿ ಇರಲಿದೆ ಎಂದಿದ್ದಾರೆ.
ವರದಿಯ ಪ್ರಕಾರ, ಭಾರತೀಯ ಮದುವೆಗಳಿಗೆ ತಮ್ಮ ದೇಶವನ್ನು ಹಬ್ ಆಗಿ ಮಾಡುವ ಹಿನ್ನಲೆಯಲ್ಲಿ ಬಹರೇನ್ ಪ್ರವಾಸೋದ್ಯಮ ಕೈಗೊಂಡಿರುವ ಕ್ರಮಗಳ ಭಾಗವಾಗಿ ಈ ದೇವಾಲಯವು ಹಿಂದೂ ವಿವಾಹಗಳನ್ನು ಆಯೋಜಿಸುವ ಸೌಲಭ್ಯವನ್ನು ಸಹ ಹೊಂದಿರಲಿದೆ.
“ದೇವಾಲಯದಲ್ಲಿ ಜ್ಞಾನ ಕೇಂದ್ರ ಮತ್ತು ವಸ್ತು ಸಂಗ್ರಹಾಲಯ ಕೂಡ ಇರಲಿದೆ” ಎಂದು ಠಾಕೂರ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.