ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಮಾದರಿ “ಸಂಪೂರ್ಣ ನಕಾರಾತ್ಮಕ”ವಲ್ಲ ಮತ್ತು ಅವರ ಕೆಲಸವನ್ನು ಗುರುತಿಸದಿರುವುದು ಮತ್ತು ಎಲ್ಲಾ ಸಮಯದಲ್ಲೂ ಅವರನ್ನು ಹೀಗಳೆಯುವುದು ನಮಗೆ ಸಹಾಯವಾಗುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ.
ಪ್ರಧಾನಿ ಮೋದಿಯವರ ಕೆಲಸ, 2014 ಮತ್ತು 2019 ರ ನಡುವೆ ಅವರು ಏನು ಮಾಡಿದ್ದಾರೆ ಎಂಬುದನ್ನು ನಾವು ಗುರುತಿಸುವ ಸಮಯ ಇದಾಗಿದೆ, ತನ್ನ ಕೆಲಸದಿಂದಾಗಿಯೇ ಅವರು 2019ರಲ್ಲಿ ಶೇ. 30 ಕ್ಕಿಂತ ಹೆಚ್ಚು ಮತದಾರರಿಂದ ಆಯ್ಕೆಯಾಗಿ ಅಧಿಕಾರಕ್ಕೆ ಮರಳಿದ್ದಾರೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ 37.4 ರಷ್ಟು ಮತಗಳನ್ನು ಪಡೆದಿದೆ. ಒಟ್ಟಾಗಿ ಎನ್ಡಿಎ ಸುಮಾರು ಶೇ.45 ರಷ್ಟು ಮತಗಳನ್ನು ಗಳಿಸಿದೆ.
ರಾಜಕೀಯ ವಿಶ್ಲೇಷಕ ಕಪಿಲ್ ಸತೀಶ್ ಕೊಮಿರೆಡ್ಡಿ ಬರೆದ “ಮಾಲೆವೊಲೆಂಟ್ ರಿಪಬ್ಲಿಕ್: ಎ ಶಾರ್ಟ್ ಹಿಸ್ಟರಿ ಆಫ್ ದಿ ನ್ಯೂ ಇಂಡಿಯಾ” ಪುಸ್ತಕವನ್ನು ಬಿಡುಗಡೆ ಮಾಡುವಾಗ ಸಂದರ್ಭದಲ್ಲಿ ಜೈರಾಮ್ ರಮೇಶ್ ಈ ಹೇಳಿಕೆ ನೀಡಿದ್ದಾರೆ.
“ಮೋದಿ ಜನರೊಂದಿಗೆ ಬೆಸೆಯುವ ಭಾಷೆಯಲ್ಲಿ ಮಾತನಾಡುತ್ತಾರೆ. ಜನರು ಗುರುತಿಸುವ ಮತ್ತು ಹಿಂದೆ ನಾವು ಮಾಡದಂತಹ ಕೆಲಸಗಳನ್ನು ಅವರು ಮಾಡುತ್ತಿದ್ದಾರೆಂದು ನಾವು ಗುರುತಿಸದ ಹೊರತು, ನಾವು ಈ ವ್ಯಕ್ತಿಯನ್ನು ಎದುರಿಸಲು ಸಾಧ್ಯವಿಲ್ಲ” “ಎಂದಿದ್ದಾರೆ
“ಅಲ್ಲದೆ, ನೀವು ಅವರನ್ನು ಎಲ್ಲಾ ಕಾಲದಲ್ಲೂ ರಾಕ್ಷಸೀಕರಿಸಿ ಹೀಗಳೆಯುತ್ತಿದ್ದರೆ, ನೀವು ಅವರನ್ನು ಎದುರಿಸಲು ಸಾಧ್ಯವಾಗುವುದಿಲ್ಲ” ಎಂದು ತಮ್ಮ ಪಕ್ಷದ ನಾಯಕರಿಗೇ ಅವರು ಸಲಹೆ ನೀಡಿದ್ದಾರೆ.
ಪ್ರಧಾನಿಯನ್ನು ಶ್ಲಾಘಿಸಿ ಎಂದು ನಾನು ಯಾರನ್ನೂ ಒತ್ತಾಯಿಸುತ್ತಿಲ್ಲ, ಆದರೆ ರಾಜಕೀಯ ವರ್ಗವು ಕನಿಷ್ಠಪಕ್ಷ ಅವರು ಆಡಳಿತದಲ್ಲಿ ಅದರಲ್ಲೂ ಆರ್ಥಶಾಸ್ತ್ರದ ಆಡಳಿತದಲ್ಲಿ ತಂದಿರುವ ಸುಧಾರಣೆಗಳನ್ನು ಗುರುತಿಸಬೇಕೆಂದು ಬಯಸುತ್ತೇನೆ ಎಂದಿದ್ದಾರೆ.
ಅರ್ಥಶಾಸ್ತ್ರದ ಆಡಳಿತಕ್ಕೆ ಸಂಬಂಧಿಸಿದಂತೆ ಸಂಪೂರ್ಣ ನಕಾರಾತ್ಮಕವಾದ ಕಥೆಯನ್ನು ಹೇಳಬೇಡಿ, ಅದು ರಾಜಕೀಯದ ಆಡಳಿತಕ್ಕಿಂತ ಸಂಪೂರ್ಣ ವಿಭಿನ್ನವಾದುದು. ಮೋದಿಯವರ ಆಡಳಿತದಲ್ಲಿ ಜಾರಿಗೆ ತರಲಾದ ಸಾಮಾಜಿಕ ಸಂಬಂಧಗಳು ಸಂಪೂರ್ಣ ವಿಭಿನ್ನವಾದುದು ಎಂದಿದ್ದಾರೆ.
ಉಜ್ವಲ ಯೋಜನೆ ಸೇರಿದಂತೆ ಕೆಲವು ಯೋಜನೆಗಳನ್ನು ಪ್ರಸ್ತಾಪಿಸುವ ಮೂಲಕ ಜೈರಾಮ್ ರಮೇಶ್ ತಮ್ಮ ವಾದವನ್ನು ಸಮರ್ಥಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.