ನವದೆಹಲಿ: ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಸಂವಿಧಾನದ 370 ನೇ ವಿಧಿಯನ್ನು ತೆಗೆದುಹಾಕಿದ ಮೋದಿ ಸರ್ಕಾರದ ನಿರ್ಧಾರವು ಬಿಜೆಪಿಯ ಸದಸ್ಯತ್ವ ಅಭಿಯಾನದ ಮೇಲೆ ಭಾರಿ ಪ್ರಭಾವ ಬೀರಿದೆ. ಈ ವರ್ಷ, ಪಕ್ಷದ ಸದಸ್ಯತ್ವ ಅಭಿಯಾನವು ಹಿಂದಿನ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿದೆ.
ಜುಲೈ 6 ರಿಂದ ಆಗಸ್ಟ್ 20 ರ ನಡುವೆ ನಡೆದ ಸದಸ್ಯತ್ವ ಅಭಿಯಾನದಲ್ಲಿ ಸುಮಾರು 3.8 ಕೋಟಿ ಹೊಸ ಸದಸ್ಯರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಈ ಸಂಖ್ಯೆಯನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ. ಪಕ್ಷದ ಐಟಿ ವಯಲವು ಅಂಕಿ-ಅಂಶಗಳನ್ನು ಪರಿಶೀಲಿಸಿದ ನಂತರ ಹೊಸ ಸದಸ್ಯರ ಸೇರ್ಪಡೆಯ ಬಗ್ಗೆ ಅಧಿಕೃತ ಸಂಖ್ಯೆ ಹೊರಬೀಳಲಿದೆ.
ಉತ್ತರಪ್ರದೇಶದಲ್ಲಿ ಗರಿಷ್ಠ ಸೇರ್ಪಡೆ ದಾಖಲಾಗಿದ್ದು, ಆ ರಾಜ್ಯದಲ್ಲಿ ಪಕ್ಷದ ಸದಸ್ಯತ್ವ 1.8 ಕೋಟಿಗೆ ಏರಿದೆ. 2015 ರಲ್ಲಿ ಇಲ್ಲಿ ರಾಜ್ಯ ಬಿಜೆಪಿ ಒಟ್ಟು 1.13 ಕೋಟಿ ಸದಸ್ಯರನ್ನು ಹೊಂದಿತ್ತು ಮತ್ತು ತನ್ನ ಸದಸ್ಯತ್ವವನ್ನು ಶೇ.20 ಅಥವಾ 22.6 ಲಕ್ಷ ಹೆಚ್ಚಿಸುವ ಗುರಿಯನ್ನು ಹೊಂದಿತ್ತು. ಆದರೆ ಸದಸ್ಯತ್ವ ಅಭಿಯಾನ ಎಲ್ಲಾ ದಾಖಲೆಗಳನ್ನು ಮುರಿದಿದ್ದು, ಈ ವರ್ಷ 55 ಲಕ್ಷ ಹೊಸ ಸದಸ್ಯರು ಸೇರಿದ್ದಾರೆ.
ಕೆಲವೇ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ದೆಹಲಿಯಲ್ಲಿ, 15 ಲಕ್ಷ ಹೊಸ ಸದಸ್ಯರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಪಕ್ಷವು ಪ್ರತಿ ಆರು ವರ್ಷಗಳಿಗೊಮ್ಮೆ ತನ್ನ ಸದಸ್ಯತ್ವ ಅಭಿಯಾನಕ್ಕೆ ಚಾಲನೆಯನ್ನು ನೀಡುತ್ತದೆ ಮತ್ತು ಸದಸ್ಯರನ್ನು ಶೇಕಡಾ 20 ರಷ್ಟು ಹೆಚ್ಚಿಸುವ ಗುರಿಯನ್ನು ಇಡುತ್ತದೆ.
ಜಮ್ಮು ಮತ್ತು ಕಾಶ್ಮೀರದಲ್ಲೂ ಪಕ್ಷವು ಉತ್ತಮ ಯಶಸ್ಸನ್ನು ಕಂಡಿದ್ದು, 1 ಲಕ್ಷದ ಗುರಿಯನ್ನು ಇಲ್ಲಿ ಇಟ್ಟುಕೊಳ್ಳಲಾಗಿತ್ತು, ಆದರೆ ಇದಕ್ಕೆ ವಿರುದ್ಧವಾಗಿ 3.5 ಲಕ್ಷ ಹೊಸ ಸದಸ್ಯರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಸೆಕ್ಷನ್ 370 ರನ್ನು ರದ್ದುಪಡಿಸಿದ ನಂತರ ಈ ರಾಜ್ಯದಲ್ಲಿ ಇಂಟರ್ನೆಟ್ ಸೇವೆಗಳಲ್ಲಿನ ಅಡಚಣೆಯಿಂದಾಗಿ ಸದಸ್ಯತ್ವ ಅಭಿಯಾನದ ಮೇಲೆ ಪರಿಣಾಮ ಬೀರಿದೆ ಎಂದು ಪಕ್ಷವು ಹೇಳಿದೆ. ಈ ಅಭಿಯಾನವನ್ನು ಈ ರಾಜ್ಯದಲ್ಲಿ ಆಗಸ್ಟ್ 25 ರವರೆಗೆ ವಿಸ್ತರಿಸಲಾಗಿದೆ ಮತ್ತು ಪಕ್ಷವು ಮತ್ತೆ 12 ಲಕ್ಷ ಸದಸ್ಯರನ್ನು ಹೊಂದುವ ಗುರಿಯನ್ನು ಹೊಂದಿದೆ.
ಹರಿಯಾಣದಲ್ಲಿ ಬಿಜೆಪಿಗೆ ಒಟ್ಟು 7,14,784, ಹಿಮಾಚಲ ಪ್ರದೇಶದಲ್ಲಿ 4,62,804, ಪಂಜಾಬ್ನಲ್ಲಿ 5,5,422, ಉತ್ತರಾಖಂಡದಲ್ಲಿ 10 ಲಕ್ಷ, ಗುಜರಾತ್ನಲ್ಲಿ 33.73 ಲಕ್ಷ, ಕರ್ನಾಟಕದಲ್ಲಿ 16.90 ಲಕ್ಷ, ಮಹಾರಾಷ್ಟ್ರದಲ್ಲಿ 19.97 ಲಕ್ಷ, ಮಧ್ಯಪ್ರದೇಶದಲ್ಲಿ 24.53 ಲಕ್ಷ ಮಂದಿ ಸೇರ್ಪಡೆಗೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.