ನವದೆಹಲಿ: ರಕ್ಷಣಾ, ಕಡಲ ಭದ್ರತೆ, ಭಯೋತ್ಪಾದನೆ ನಿಗ್ರಹ, ನಾಗರಿಕ ಪರಮಾಣು ಶಕ್ತಿ, ವ್ಯಾಪಾರ ಮತ್ತು ಹೂಡಿಕೆ ಮುಂತಾದ ಕ್ಷೇತ್ರಗಳಲ್ಲಿನ ಸಹಕಾರವನ್ನು ಬಲಪಡಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಫ್ರಾನ್ಸ್ ಪ್ರವಾಸವನ್ನು ಕೈಗೊಳ್ಳುತ್ತಿದ್ದಾರೆ. ಈ ವೇಳೆ ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುವಲ್ ಮ್ಯಾಕ್ರನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಪ್ರಧಾನ ಮಂತ್ರಿ ಗುರುವಾರ ಸಂಜೆ ಫ್ರಾನ್ಸ್ಗೆ ತಲುಪಲಿದ್ದು, ತಕ್ಷಣವೇ ಮ್ಯಾಕ್ರನ್ರೊಂದಿಗಿನ ಮಾತುಕತೆಗೆ ತೆರಳಲಿದ್ದಾರೆ. ಮ್ಯಾಕ್ರೋನ್ ಅವರು ಪ್ಯಾರಿಸ್ ನಿಂದ 60 ಕಿ.ಮೀ ದೂರದಲ್ಲಿರುವ ಓಯಿಸ್ನಲ್ಲಿರುವ 19 ನೇ ಶತಮಾನದ ತಾಣ ಚಟೌ ಡಿ ಚಾಂಟಿಲಿಯಲ್ಲಿ ಪ್ರಧಾನಿ ಮೋದಿಯವರಿಗೆ ವಿಶೇಷ ಔತಣಕೂಟವನ್ನು ಕೂಡ ಏರ್ಪಡಿಸಿದ್ದಾರೆ.
ಫ್ರಾನ್ಸ್ ಭೇಟಿಯ ಸಮಯದಲ್ಲಿ, ಪ್ರಧಾನಿ ಪ್ಯಾರಿಸ್ನಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ನಿಡ್ ಡಿ ಏಗಲ್ನಲ್ಲಿ ಏರ್ ಇಂಡಿಯಾ ಪತನದಲ್ಲಿ ಸಾವಿಗೀಡಾದ ಭಾರತೀಯರ ಸ್ಮರಣಾರ್ಥ ನಿರ್ಮಾಣ ಮಾಡಲಾದ ಸ್ಮಾರಕವನ್ನು ಉದ್ಘಾಟಿಸಲಿದ್ದಾರೆ.
“ಫ್ರಾನ್ಸಿಗೆ ದ್ವಿಪಕ್ಷೀಯ ಭೇಟಿ ಮತ್ತು G-7 ಸಮಿತ್ ಆಹ್ವಾನವು ಭಾರತ ಮತ್ತು ಫ್ರಾನ್ಸ್ ನಡುವಿನ ಬಲವಾದ ಮತ್ತು ನಿಕಟ ಪಾಲುದಾರಿಕೆ ಮತ್ತು ಉನ್ನತ ಮಟ್ಟದ ರಾಜಕೀಯ ಸಂಪರ್ಕಗಳ ಸಂಪ್ರದಾಯಕ್ಕೆ ಅನುಗುಣವಾಗಿದೆ” ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಹವಾಮಾನ ಬದಲಾವಣೆ, ಹಣಕಾಸು ಮತ್ತು ಹಸಿರು ತಂತ್ರಜ್ಞಾನಗಳ ಸಹಯೋಗ, ನಿರ್ದಿಷ್ಟ ಮಾರ್ಗಸೂಚಿ ಮತ್ತು ಡಿಜಿಟಲ್ ಮತ್ತು ಸೈಬರ್ಸ್ಪೇಸ್ನಂತಹ ಹೊಸ ಕ್ಷೇತ್ರಗಳಲ್ಲಿ ಮುಕ್ತ ಸಹಭಾಗಿತ್ವ, ಮತ್ತು ಕೌಶಲ್ಯ ಅಭಿವೃದ್ಧಿಯ ಕುರಿತು ಮಹತ್ವದ ಮಾತುಕತೆಗಳು ಭೇಟಿಯ ಪ್ರಮುಖ ಅಂಶಗಳಾಗಿವೆ. ಈ ನಿಟ್ಟಿನಲ್ಲಿ ಒಪ್ಪಂದಗಳೂ ಏರ್ಪಡಲಿವೆ ಎಂದು ಮಾಹಿತಿ ಮೂಲಗಳು ತಿಳಿಸಿವೆ.
ವಿಜ್ಞಾನ ಮತ್ತು ತಂತ್ರಜ್ಞಾನದ ಸಹಯೋಗದ ಬಗ್ಗೆ ಒಪ್ಪಂದಗಳನ್ನು ನಿರೀಕ್ಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.