ಥಿಂಪು: ಆಗಸ್ಟ್ 17 ಮತ್ತು 18 ರಂದು ಎರಡು ದಿನಗಳ ಭೂತಾನ್ ಪ್ರವಾಸವನ್ನು ಹಮ್ಮಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಅಲ್ಲಿ ಒಟ್ಟು 10 ಒಪ್ಪಂದಗಳಿಗೆ ಸಹಿಯನ್ನು ಹಾಕಿದ್ದಾರೆ.
ಭೂತಾನ್ನಲ್ಲಿ ವಿವಿಧ ನಾಯಕರನ್ನು ಭೇಟಿ ಮಾಡಿದ ಮೋದಿ ಅವರು ಭಾನುವಾರ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ತಮ್ಮ ನಿರ್ಗಮನದ ವೇಳೆ ಟ್ವಿಟ್ ಮಾಡಿರುವ ಅವರು, “ಧನ್ಯವಾದ ಭೂತಾನ್, ಇದು ಸದಾ ನೆನಪಿನಲ್ಲಿಡುವ ಭೇಟಿಯಾಗಿದೆ. ಎರಡು ದಿನಗಳ ಕಾಲ ಅದ್ಭುತ ದೇಶವಾದ ಭೂತಾನಿನ ಜನರು ತೋರಿಸಿದ ವಾತ್ಸಲ್ಯವನ್ನು ನಾನು ಎಂದಿಗೂ ಮರೆಯುವುದಿಲ್ಲ. ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಗೌರವ ಸ್ವೀಕರಿಸಿದ್ದೇನೆ. ಭೇಟಿಯಿಂದ ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧ ವೃದ್ಧಿಯಾಗಿದೆ” ಎಂದಿದ್ದಾರೆ.
ತಮ್ಮ ಎರಡನೇಯ ಅವಧಿಯಲ್ಲಿ ಮೋದಿ ನೀಡುತ್ತಿರುವ ಮೊದಲ ವಿದೇಶಿ ಭೇಟಿ ಇದಾಗಿತ್ತು, ಶನಿವಾರ ಬೆಳಗ್ಗೆ ಮೋದಿ ಅವರು ಭೂತಾನ್ಗೆ ತಲುಪಿದ್ದರು. ಅಲ್ಲಿನ ಪ್ರಧಾನಿ ಲೋಟೈ ತ್ಸೆರಿಂಗ್ ಅವರೊಂದಿಗೆ ಮಾತುಕತೆ ನಡೆಸಿದರು. ಹಲವು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಭಾಗಿತ್ವವನ್ನು ಇನ್ನಷ್ಟು ವಿಸ್ತರಿಸುವ ಕ್ರಮದ ಕುರಿತು ಇಬ್ಬರೂ ಚರ್ಚಿಸಿದರು.
ಎರಡೂ ದೇಶಗಳ ನಡುವೆ ಬಾಹ್ಯಾಕಾಶ ಸಂಶೋಧನೆ, ವಾಯುಯಾನ, ಐಟಿ, ವಿದ್ಯುತ್ ಮತ್ತು ಶಿಕ್ಷಣ ಸೇರಿದಂತೆ ವಿವಿಧ ವಲಯಗಳಿಗೆ ಸಂಬಂಧಿಸಿದ ಒಟ್ಟು 10 ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಭಾರತ-ಭೂತಾನ್ ಸಹಕಾರ ಸಂಬಂಧಕ್ಕೆ ಎರಡು ದಶಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇದರ ನೆನಪಿಗಾಗಿ ಸ್ಟ್ಯಾಂಪ್ನ್ನು ಮೋದಿ ಬಿಡುಗಡೆ ಮಾಡಿದರು. ಭೂತಾನ್ನ ಸಿಮ್ಟೋಕಾ ಡ್ಜೊಂಗ್ನಲ್ಲಿ ವಸ್ತುವೊಂದನ್ನು ಖರೀದಿ ಮಾಡುವ ಮೂಲಕ ಮೋದಿ ರುಪೇ ಕಾರ್ಡ್ಗೆ ಅಧಿಕೃತ ಚಾಲನೆ ನೀಡಿದರು.
ಅಲ್ಲದೆ, ಮೋದಿ ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ಗೇಲ್ ವಾಂಗ್ಚಕ್ ಅವರನ್ನು ಭೇಟಿ ಮಾಡಿ ಇತರರಿಗೆ ಮಾದರಿಯಾಗಿರುವ ಭೂತಾನ್-ಭಾರತದ ಸಹಭಾಗಿತ್ವವನ್ನು ಮುಂದುವರಿಸುವಂತೆ ಮನವಿ ಮಾಡಿದರು. ನಂತರ ಭೂತಾನ್ನ ನಾಲ್ಕನೇ ರಾಜ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ ಅವರನ್ನು ಭೇಟಿ ಮಾಡಿ, ಭಾರತ-ಭೂತಾನ್ನ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಅವರ ನಿರಂತರ ಮಾರ್ಗದರ್ಶನಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.
ಭಾನುವಾರ ಭೂತಾನ್ನ ಪ್ರತಿಷ್ಠಿತ ರಾಯಲ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಪರಿಶ್ರಮದ ಮೂಲಕ ಹಿಮಾಲಯದ ರಾಷ್ಟ್ರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.
ಭೂತಾನ್ ಪ್ರಧಾನಿ ಲೋಟೈ ತ್ಸೆರಿಂಗ್ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಎರಡು ದಿನಗಳ ಪ್ರವಾಸ ಕೈಗೊಂಡಿದ್ದರು. ಥಿಂಪುವಿನಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೂತಾನ್ ಪ್ರಧಾನಿ ಡಾ.ಲೋಟೈ ತ್ಸೆರಿಂಗ್ ಅದ್ಧೂರಿಯಾಗಿ ಸ್ವಾಗತಿಸಿದ್ದರು. ಈ ವೇಳೆ ಪುಟ್ಟ ಬಾಲಕಿಯೊಬ್ಬರು ಮೋದಿ ಅವರಿಗೆ ಪುಷ್ಪಗುಚ್ಚ ನೀಡಿ, ವಿಶೇಷ ಗೌರವ ಸಲ್ಲಿಸಿದ್ದರು.
ಥಿಂಪು ವಿಮಾನ ನಿಲ್ದಾಣದಲ್ಲಿ ಅನೇಕರು ಭಾರತ ತ್ರಿವರ್ಣ ಧ್ವಜ ಹಿಡಿದು ಮೋದಿಯನ್ನು ಸ್ವಾಗತಿಸಿದರು ಮತ್ತು ಮೋದಿ ಪರ ಘೋಷಣೆಗಳನ್ನು ಕೂಗಿದ್ದರು. ಅವರು ಸಾಗಿದ ದಾರಿಯುದ್ದಕ್ಕೂ ಮಹಿಳೆಯರು, ವಿದ್ಯಾರ್ಥಿಗಳು, ಶಿಕ್ಷಕರು, ಜನಸಾಮಾನ್ಯರು ಕೈ ಬೀಸಿ ಅಭಿಮಾನವನ್ನು ತೋರ್ಪಡಿಸಿದರು.
Thank you Bhutan!
It was a memorable visit. The affection I have received from the people of this wonderful nation can never be forgotten.
There were many programmes which I had the honour of taking part in.
The outcomes of the visit will enhance bilateral ties. pic.twitter.com/325NGWZifb
— Narendra Modi (@narendramodi) August 18, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.