ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಎರಡು ದಿನಗಳ ಭೂತಾನ್ ಪ್ರವಾಸವನ್ನು ಕೈಗೊಂಡಿದ್ದಾರೆ, ಅಲ್ಲಿ ಅವರು ಭೂತಾನ್ ಪ್ರಧಾನಿ ಲೋಟೇ ತ್ಸೆರಿಂಗ್, ಭೂತಾನ್ ರಾಜ ಜಿಗ್ಮೆ ಖೇಸರ್ ನಂಗೆಲ್ ವಾಂಗ್ಚಕ್ ಸೇರಿದಂತೆ ಉನ್ನತ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆಯನ್ನು ನಡೆಸಲಿದ್ದಾರೆ.
ಪ್ರಧಾನಿ ಮೋದಿಯವರ ನಿರ್ಗಮನಕ್ಕೂ ಮುನ್ನ, ಭೂತಾನ್ನ ಭಾರತದ ರಾಯಭಾರಿ ರುಚಿರಾ ಕಾಂಬೋಜ್ ಸುದ್ದಿ ಸಂಸ್ಥೆ ಅವರು ಮೋದಿ ಪ್ರವಾಸದ ಮಾಹಿತಿಯನ್ನು ನೀಡಿದ್ದಾರೆ. “ಆಗಸ್ಟ್ 17-18 ರಿಂದ ಭೂತಾನ್ಗೆ ಪ್ರಧಾನಿ ಮೋದಿಯವರು ಭೇಟಿ ನೀಡಲಿದ್ದು, ಈ ಭೇಟಿಯಲ್ಲಿ ಭಾರತ-ಭೂತಾನ್ ಸಹಭಾಗಿತ್ವವನ್ನು ಬಲಪಡಿಸುವ ಬದ್ಧತೆಯನ್ನು ಕಾಣಬಹುದು. ಇದಲ್ಲದೆ, ಉಭಯ ದೇಶಗಳ ನಡುವೆ ಸುಮಾರು 10 ತಿಳುವಳಿಕೆಯ ಒಪ್ಪಂದಕ್ಕೆ ಸಹಿ ಬೀಳುವ ನಿರೀಕ್ಷೆಯಿದೆ. ಪ್ರಧಾನಿ ಮೋದಿ ಅವರ ಭೇಟಿಯ ಸಂದರ್ಭದಲ್ಲಿ ಆ ದೇಶದಲ್ಲಿ ಐದು ಕಾರ್ಯಕ್ರಮಗಳನ್ನು ಉದ್ಘಾಟಿಸಲು ನಿರ್ಧರಿಸಲಾಗಿದೆ” ಎಂದಿದ್ದಾರೆ.
ಇಂದು ಪ್ರಧಾನಿ ಮೋದಿ ಅವರು ಪರೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಅಲ್ಲಿಂದ ಅವರು ಸೆಮ್ಟೋಖಾ ಜೊಂಗ್ಗೆ ತೆರಳಲಿದ್ದಾರೆ. ಇಂದು ಅವರು ತಾಶಿಚೋಡ್ಜೊಂಗ್ಗೆ ಭೇಟಿ ನೀಡಿದ ವೇಳೆ ಅವರಿಗೆ ಗೌರವ ಸ್ವಾಗತವನ್ನು ಅಲ್ಲಿ ನೀಡಲಾಗುತ್ತದೆ.
ಡೊಝಾಂಗ್ನಲ್ಲಿ, ಪ್ರಧಾನಿ ಮೋದಿ ಭೂತಾನ್ ರಾಜ ಜಿಗ್ಮೆ ಖೇಸರ್ ನಮ್ಗೆಲ್ ವಾಂಗ್ಚಕ್ ಅವರನ್ನು ಭೇಟಿಯಾಗಲಿದ್ದಾರೆ. ಮೋದಿಯ ಗೌರವಾರ್ಥ ಚಿಪ್ಡ್ರೆಲ್ ಮೆರವಣಿಗೆ ಕೂಡ ಅಲ್ಲಿ ನಡೆಯಲಿದೆ.
ಭೂತಾನ್ ಪ್ರವಾಸ ಕೈಗೊಳ್ಳುವುದಕ್ಕೂ ಮುನ್ನ ಟ್ವಿಟ್ ಮಾಡಿರುವ ಮೋದಿ, “ಪ್ರಸ್ತುತ ಅವಧಿಯ ಆರಂಭದಲ್ಲಿ ನಾನು ಭೂತಾನಿಗೆ ಭೇಟಿ ನೀಡಿದ್ದು ಭೂತಾನ್ ಗೆ ನಮ್ಮ ಸರ್ಕಾರ ನೀಡುವ ಹೆಚ್ಚಿನ ಆದ್ಯತೆಯನ್ನು ಪ್ರತಿಬಿಂಬಿಸುತ್ತದೆ. ಭೂತಾನ್ ನಮ್ಮ ವಿಶ್ವಾಸಾರ್ಹ ಸ್ನೇಹಿತ ಮತ್ತು ನೆರೆಯವ” ಎಂದಿದ್ದಾರೆ.
On 17th and 18th August, I will be in Bhutan for a bilateral visit that reflects the high importance attached to strong relations with our trusted friend and neighbour. I would be taking part in a wide range of programmes during this visit. https://t.co/X4LJXMscAc
— Narendra Modi (@narendramodi) August 16, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.