ಲಕ್ನೋ: ಕ್ವಿಟ್ ಇಂಡಿಯಾ ಚಳವಳಿಯ 77 ನೇ ವಾರ್ಷಿಕೋತ್ಸವವಾದ ಶುಕ್ರವಾರದಂದು 66,000 ಸಸಿಗಳನ್ನು ಏಕಕಾಲದಲ್ಲಿ ವಿತರಿಸಿದ ಉತ್ತರ ಪ್ರದೇಶವು ಗಿನ್ನಿಸ್ ವಿಶ್ವ ದಾಖಲೆಗೆ ಪ್ರವೇಶಿಸಿದೆ.
ಅಲಹಾಬಾದ್ನ ಗಂಗಾ-ಯಮುನಾ ಸಂಗಮದ ತೀರದಲ್ಲಿ ಉಚಿತ ಸಸಿಗಳನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿತರಣೆ ಮಾಡಿದ್ದಾರೆ. ಈ ವೇಳೆ ರಾಜ್ಯ ಶುಕ್ರವಾರ ನಾಲ್ಕು ದಾಖಲೆಗಳನ್ನು ನಿರ್ಮಿಸಿದೆ ಎಂದು ಅವರು ಘೋಷಣೆ ಮಾಡಿದ್ದಾರೆ.
ಬೆಳಿಗ್ಗೆ 9 ರಿಂದ ಬೆಳಿಗ್ಗೆ 10 ರವರೆಗೆ ಏಕಕಾಲದಲ್ಲಿ ಐದು ಕೋಟಿ ಗಿಡಗಳನ್ನು ನೆಟ್ಟಿದ್ದು ಒಂದು ದಾಖಲೆಯಾದರೆ, ಗವರ್ನರ್ ಆನಂದಿ ಬೆನ್ ಪಟೇಲ್ ಅವರ ಸಮ್ಮುಖದಲ್ಲಿ ಕಾಸ್ಗಂಜ್ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ವಿತರಿಸಿದ್ದು ಒಂದು ದಾಖಲೆ, ನಿರ್ದಿಷ್ಟ ಸಮಯದ ಅವಧಿಯಲ್ಲಿ 66,000 ಸಸಿಗಳನ್ನು ಒಂದೇ ಸ್ಥಳದಲ್ಲಿ ವಿತರಿಸಿದ್ದು ಮತ್ತೊಂದು ದಾಖಲೆಯಾಗಿದೆ. ಅಲ್ಲದೇ ಒಟ್ಟಾರೆಯಾಗಿ 22 ಕೋಟಿ ಸಸಿಗಳನ್ನು ನೆಟ್ಟಿದ್ದು ಮತ್ತೊಂದು ದಾಖಲೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
66,000 ಸಸಿಗಳನ್ನು ಏಕಕಾಲದಲ್ಲಿ ವಿತರಿಸಿದ ದಾಖಲೆಗಾಗಿ ಪ್ರಮಾಣಪತ್ರವನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಅಧಿಕಾರಿಗಳು ನಿಗದಿತ ಸಮಯದೊಳಗೆ ಮುಖ್ಯಮಂತ್ರಿಗೆ ಹಸ್ತಾಂತರಿಸಿದ್ದಾರೆ ಎಂದು ಲಕ್ನೋ ರಾಜ್ಯದ ವಕ್ತಾರರು ತಿಳಿಸಿದ್ದಾರೆ.
ಮುಂದಿನ ವರ್ಷದ ವನ ಮಹೋತ್ಸವದಲ್ಲಿ 25 ಕೋಟಿ ಸಸಿಗಳನ್ನು ನೆಡುವುದಾಗಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ
ಇದಕ್ಕೂ ಮೊದಲು ಮುಖ್ಯಮಂತ್ರಿಗಳು ಜೈತಿಖೇಡ ಪ್ರದೇಶದಲ್ಲಿ ಬೆಳಿಗ್ಗೆ ‘ಹರಿಶಂಕರಿ’ ನೆಡುವ ಮೂಲಕ ಸಸಿ ನೆಡುವ ಅಭಿಯಾನವನ್ನು ಪ್ರಾರಂಭಿಸಿದರು.
ಈ ಸಂದರ್ಭದಲ್ಲಿ ಸಿಎಂ ಯೋಗಿ ಅವರು ‘ವೃಕ್ಷಾರೋಪಣ್ ಮಹಾಕುಂಭ’ದ ಲೋಗೋವನ್ನು ಅನಾವರಣಗೊಳಿಸಿದರು ಮತ್ತು ಐದು ಗ್ರಾಮೀಣ ಮಹಿಳೆಯರಿಗೆ “ಸಹಜನ್” (ನುಗ್ಗೆಕಾಯಿ) ಗಳ ಸಸಿಗಳನ್ನು ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.