ತವಾಂಗ್: ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾದ ಹೀರೋ ವಿಕ್ಕಿ ಕೌಶಲ್ ಅವರು ಪ್ರಸ್ತುತ ಅರುಣಾಚಲ ಪ್ರದೇಶದ ತವಾಂಗ್ನಲ್ಲಿ ಭಾರತ-ಚೀನಾ ಗಡಿಯಲ್ಲಿ ಭಾರತೀಯ ಯೋಧರೊಂದಿಗೆ ಕಾಲ ಕಳೆಯುತ್ತಿದ್ದು, ಯೋಧರಿಗೆ ಚೆಫ್ ಆಗಿದ್ದಾರೆ.
ಉರಿ ಸಿನಿಮಾದ ಬಳಿಕ ಎರಡನೇಯ ಬಾರಿಗೆ ಅವರು ಸೇನೆಯ ಸಮವಸ್ತ್ರದಲ್ಲಿ ತೆರೆಯಲ್ಲಿ ಕಂಗೊಳಿಸಲಿದ್ದಾರೆ. ತಾವು ಸೈನಿಕರಿಗಾಗಿ ರೋಟಿ ಮಾಡುತ್ತಿರುವ ದೃಶ್ಯವನ್ನು ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. “ಜೀವನದಲ್ಲಿ ಮೊದಲ ಬಾರಿಗೆ ರೋಟಿ ಮಾಡುತ್ತಿದ್ದೇನೆ, ಅದು ಕೂಡ ಸೇನೆಗಾಗಿ ಎಂಬುದು ಸಂತಸವಾಗುತ್ತಿದೆ” ಎಂದು ಬರೆದಿದ್ದಾರೆ.
ಸೈನಿಕರೊಂದಿಗೆ ತಾವಿರುವ ಫೋಟೋಗಳನ್ನು ಹಂಚಿಕೊಂಡಿರುವ ಕೌಶಲ್, “ಅರುಣಾಚಲಪ್ರದೇಶದ ತವಾಂಗಿನಲ್ಲಿನ ಭಾರತ-ಚೀನಾ ಗಡಿಯಲ್ಲಿ 14,000 ಅಡಿ ಎತ್ತರದಲ್ಲಿ ನಿಯೋಜನೆಗೊಂಡಿರುವ ಯೋಧರೊಂದಿಗೆ ಕೆಲ ದಿನಗಳ ಕಾಲ ಕಾಲ ಕಳೆಯುವ ಅವಕಾಶ ಸಿಕ್ಕಿದ್ದಕ್ಕೆ ಧನ್ಯನಾಗಿದ್ದೇನೆ” ಎಂದಿದ್ದಾರೆ.
ಪ್ರಸ್ತುತ ವಿಕ್ಕಿ ಕೌಶಲ್ ಅವರು, ತಕ್ತ್, ಭೂತ್ ಪಾರ್ಟ್ ಒನ್-ದಿ ಹೌಂಟೆಡ್ ಶಿಪ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೆಕ್ಷಾ ಅವರ ಜೀವನಾಧಾರಿತ ಸಿನಿಮಾವನ್ನು ಇವರು ಮಾಡಲಿದ್ದಾರೆ. ಈ ಸಿನಿಮಾಗೆ ಇನ್ನೂ ಹೆಸರನ್ನು ಇಡಲಾಗಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.