ಮಂಗಳೂರು: ‘ಬಿಂಬುಳಿ’ ಸಾರವನ್ನು ಬಳಸಿಕೊಂಡು ರಬ್ಬರ್ ಅನ್ನು ಹೆಪ್ಪುಗಟ್ಟಿಸುವ ಪರಿಸರ ಸ್ನೇಹಿ ಮತ್ತು ಅಗ್ಗದ ಪ್ರಕ್ರಿಯೆಯನ್ನು ಆವಿಷ್ಕರಿಸಿದ ಕರ್ನಾಟಕದ ಇಬ್ಬರು ಬಾಲಕರಾದ ಅಮನ್ ಕೆಎ ಮತ್ತು ಎಯು ನಚಿಕೇತ ಕುಮಾರ್ಗೆ ಇಂಟರ್ನೆಟ್ ದಿಗ್ಗಜ ಗೂಗಲ್ ಸಂಸ್ಥೆಯು ‘ನ್ಯಾಷನಲ್ ಜಿಯೋಗ್ರಾಫಿಕ್ ಎಕ್ಸ್ಪ್ಲೋರರ್ ಅವಾರ್ಡ್’ ನೀಡಿ ಗೌರವಿಸಿದೆ.
ಈ ಇಬ್ಬರು ಹುಡುಗರು ಆರಂಭದಲ್ಲಿ ಬಿಂಬುಳಿಯಿಂದ ವಿನೆಗರ್ ತಯಾರಿಸಿದ್ದರು. ಆದರೆ ಅದು ಅವರ ನಿರೀಕ್ಷೆಗಳನ್ನು ತಲುಪಲಿಲ್ಲ. ಯೆನೆಪೋಯಾ ಪ್ರಯೋಗಾಲಯದಲ್ಲಿ ಇದನ್ನು ಪರೀಕ್ಷೆ ನಡೆಸಿದಾಗ ಸಿಟ್ರಿಕ್ ಆಮ್ಲದ ಉಪಸ್ಥಿತಿಯಿಂದ ಉತ್ಪನ್ನವು ಅಸಮರ್ಥವಾಗಿದೆ ಎಂದು ಕಂಡುಬಂದಿತ್ತು. ಆದರೂ ಛಲ ಬಿಡದ ಇವರಿಬ್ಬರು International Sustainable World Energy, Engineering and Environmental Project (ISWEEP)ಯಲ್ಲಿ ಭಾಗವಹಿಸುವ ದೃಢ ಉದ್ದೇಶದಿಂದ ತಮ್ಮ ಪ್ರಯತ್ನಗಳನ್ನು ಮುಂದುವರೆಸಿದರು.
ಮಂಗಳೂರಿನಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ತಮ್ಮ ವಿಜ್ಞಾನ ಶಿಕ್ಷಕಿ ನಿಶಿತಾ ಕೆ ಕೆ ಅವರ ಪ್ರೇರಣೆಯೊಂದಿಗೆ ಯೋಜನೆಯನ್ನು ಮುಂದುವರೆಸಿದ ಇವರು, ಎರಡನೇ ಪ್ರಯತ್ನದಲ್ಲಿ ಸಫಲತೆಯನ್ನು ಕಂಡಿದ್ದರು. ಯೋಜನೆಗೆ ಸಂಬಂಧಿಸಿದಂತೆ ಅಮನ್ ತಾಯಿ ರಹೀಮತ್ ಬೇಗಂ ಹುಡುಗರಿಗೆ ಹೊಸ ದಿಶೆಯನ್ನು ತೋರಿಸಿದರು.
ಮಂಗಳೂರಿನ ಕಡಬದಲ್ಲಿ ರಬ್ಬರ್ ತೋಟವನ್ನು ಅಮನ್ ಕುಟುಂಬ ಹೊಂದಿತ್ತು. ತಮ್ಮ ಅಜ್ಜ ರಬ್ಬರ್ ಹೆಪ್ಪುಗಟ್ಟಲು ಫಾರ್ಮಿಕ್ ಆ್ಯಸಿಡ್ ಕೊರೆತೆಯುಂಟಾದಾಗ ಪರ್ಯಾಯವಾಗಿ ಏನೆಲ್ಲಾ ಮಾಡುತ್ತಿದ್ದರು ಎಂಬುದನ್ನು ಬೇಗಂ ಈ ಮಕ್ಕಳಿಗೆ ವಿವರಿಸಿದ್ದರು. ಇದು ಮಕ್ಕಳಿಗೆ ಹೊಸ ಉಪಾಯ ಹೊಳೆಯುವಂತೆ ಮಾಡಿತು.
“ನಾವು ಬಿಂಬ್ಲಿ ಹಣ್ಣನ್ನು ತಂದೆವು, ಅದರ ವೈಜ್ಞಾನಿಕ ಹೆಸರು ಅವೆರಹ್ಹೋ ಬಿಂಬ್ಲಿ. ಅದರ ಜ್ಯೂಸ್ ತಯಾರಿಸಿದೆವು. ಒಂದು ಲೀಟರ್ ರಬ್ಬರ್ ಲೇಟೆಕ್ಸ್ (ಹಾಲು) ಟ್ರೇಗೆ 60 ಎಂಎಲ್ ಜ್ಯೂಸ್ ಹಾಕಿದೆವು. ಇದರಿಂದ ರಬ್ಬರ್ ಹೆಪ್ಪುಗಟ್ಟುವಿಕೆ ಬಹುಬೇಗ ಅಂದರೆ 10 ಗಂಟೆ ಮುಂಚಿತವಾಗಿಯೇ ಆಯಿತು. ಈ ಪ್ರಕ್ರಿಯೆಗೆ ಫಾರ್ಮಿಕ್ ಆಮ್ಲ 16 ಗಂಟೆ ತೆಗೆದುಕೊಳ್ಳುತ್ತದೆ. ಆದರೆ ಬಿಂಬ್ಲಿ ಸಾರ ಕೇವಲ 6 ಗಂಟೆ ಮುಂಚಿತವಾಗಿಯೇ ರಬ್ಬರ್ ಹೆಪ್ಪುಗಟ್ಟುವಂತೆ ಮಾಡಿದೆ” ಎಂದು ಅಮನ್ ಹೇಳುತ್ತಾನೆ.
“ಈ ಪ್ರಕ್ರಿಯೆಯು ಹೆಪ್ಪುಗಟ್ಟುವಿಕೆಯ ವೇಗವನ್ನು ವೃದ್ಧಿಸುವುದು ಮಾತ್ರವಲ್ಲ, ರಬ್ಬರ್ ಹಾಳೆಗಳ ಗುಣಮಟ್ಟವನ್ನು ಫಾರ್ಮಿಕ್ ಆಮ್ಲವನ್ನು ಬಳಸಿ ತಯಾರಿಸಿದ ಹಾಳೆಗಳಿಗಿಂತ ಹೆಚ್ಚು ಗುಣಮಟ್ಟದ್ದನ್ನಾಗಿ ಮಾಡಿದೆ” ಎಂದು ನಚಿಕೇತ್ ಕುಮಾರ್ ಹೇಳಿದ್ದಾನೆ.
2017ರಲ್ಲಿ ನಡೆದ ವಿಶ್ವದ ಅತೀದೊಡ್ಡ ವಿಜ್ಞಾನ ಸಮ್ಮೇಳನ International Sustainable World Energy, Engineering and Environmental Project (ISWEEP)ನಲ್ಲಿ ಈ ಹುಡುಗರ ಈ ಆವಿಷ್ಕಾರಕ್ಕೆ ಬೆಳ್ಳಿಯ ಪದಕ ಸಿಕ್ಕಿದೆ.
ಇದೀಗ ಈ ಹುಡುಗರಿಗೆ ಗೂಗಲ್ ಸಂಸ್ಥೆಯು ‘ನ್ಯಾಷನಲ್ ಜಿಯೋಗ್ರಾಫಿಕ್ ಎಕ್ಸ್ಪ್ಲೋರರ್ ಅವಾರ್ಡ್’ ನೀಡಿ ಗೌರವಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.