ಬೆಂಗಳೂರು: ಲೂನಾರ್ ಮಿಷನ್ ಅನ್ನು ಯಶಸ್ವಿಯಾಗಿ ನಡೆಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಶೀಘ್ರ ಭವಿಷ್ಯದಲ್ಲಿ ಸೂರ್ಯನ ಕರೋನ (ಪ್ರಭಾವಲಯ) ವನ್ನು ಅಧ್ಯಯನ ನಡೆಸುವ ಸೋಲಾರ್ ಮಿಷನ್ ಅನ್ನು ಹಮ್ಮಿಕೊಳ್ಳಲಿದೆ. ಇದಕ್ಕಾಗಿ ಅದು ಈಗಿನಿಂದಲೇ ಸಜ್ಜಾಗುತ್ತಿದೆ.
ಭಾರತದ ಅತೀ ಭಾರವಾದ ಮತ್ತು ಅತ್ಯಂತ ಶಕ್ತಿಶಾಲಿ ರಾಕೆಟ್ ಜಿಎಸ್ಎಲ್ವಿ ಎಂಕೆಐಐನಲ್ಲಿ ಚಂದ್ರಯಾನ -2 ಮಿಷನ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ನಂತರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 2020 ರ ಮೊದಲಾರ್ಧದಲ್ಲಿ ಸೂರ್ಯನ ಕರೋನವನ್ನು ಅಧ್ಯಯನ ಮಾಡಲು ಸೌರ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಜ್ಜಾಗಿದೆ ಎಂದು ವರದಿಗಳು ತಿಳಿಸಿವೆ.
ಇಸ್ರೋವು, ಸೂರ್ಯನ ಕರೋನವನ್ನು ಗಮನಿಸಿ ಅಧ್ಯಯನ ಮಾಡುವ ‘ಆದಿತ್ಯ-ಎಲ್ 1’ ಎಂಬ ಮಿಷನ್ ಅನ್ನು ಪ್ರಾರಂಭಿಸಲು ಮುಂದಾಗಿದೆ. ಕರೋನವು ಅತ್ಯಂತ ಹೆಚ್ಚಿನ ತಾಪಮಾನದಲ್ಲಿ ಹೇಗೆ ಬಿಸಿಯಾಗುತ್ತದೆ ಎಂಬುದು ಜಗತ್ತಿಗೆ ಇನ್ನೂ ತಿಳಿದಿಲ್ಲ. ಕರೋನಾ ಸೂರ್ಯನ ಹೊರ ಪದರವಾಗಿದ್ದು, ಇದು ಸಾವಿರಾರು ಕಿಲೋಮೀಟರ್ಗಳಷ್ಟು ವಿಸ್ತರಿಸಿದೆ.
ಇಸ್ರೋ ಮುಖ್ಯಸ್ಥ ಕೆ. ಸಿವನ್ ಅವರ ಪ್ರಕಾರ, ಆದಿತ್ಯ-ಎಲ್ 1 ಕರೋನದ ಬಗ್ಗೆ ತನ್ನ ವಿಶ್ಲೇಷಣೆಯನ್ನು ನೀಡಲಿದೆ, ಯಾಕೆಂದರೆ ಇದು ಹವಾಮಾನ ಬದಲಾವಣೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಆದಿತ್ಯ-ಎಲ್ 1 ಅನ್ನು ಭೂಮಿಯಿಂದ 1.5 ದಶಲಕ್ಷ ಕಿಲೋಮೀಟರ್ ದೂರದಲ್ಲಿರುವ ಕಕ್ಷೆಯಲ್ಲಿ ಇಡಲಾಗುವುದು, ಇದರಿಂದಾಗಿ ಉಪಗ್ರಹದಲ್ಲಿರುವ ಉಪಕರಣಗಳಿಗೆ ಅದರ ಮ್ಯಾಗ್ನೆಟಿಕ್ ಫೀಲ್ಡ್ ಅಡ್ಡಿಯಾಗುವುದಿಲ್ಲ.
ಸೂರ್ಯನ ಕರೋನದ ವಿಶ್ಲೇಷಣೆಯ ಜೊತೆಗೆ, ಆದಿತ್ಯ-ಎಲ್ 1 ಮಿಷನ್ ಸೂರ್ಯನ ದ್ಯುತಿಗೋಳ (Photosphere) ಮತ್ತು ವರ್ಣತಂತು (chromosphere) ಗಳ ಬಗ್ಗೆ ಅವಲೋಕನಗಳನ್ನು ಸಹ ನೀಡಲಿದೆ. ಇದರ ಪ್ರ್ಯಾಕ್ಟಿಕಲ್ ಪೇಲೋಡ್ಗಳು ಸೂರ್ಯನಿಂದ ಹೊರಹೊಮ್ಮುವ ಕಣಗಳ ಹರಿವನ್ನು ಸಹ ಅಧ್ಯಯನ ಮಾಡಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.