ವಡೋದರಾ: ಶಾಲಾ ಮಕ್ಕಳ ಬೆನ್ನ ಮೇಲಿನ ಭಾರವನ್ನು ಇಳಿಸುವ ನಿಟ್ಟಿನಲ್ಲಿ ಗುಜರಾತಿನ ವಡೋದರದ ಸರ್ಕಾರಿ ಶಾಲೆಗಳು ವಿಶಿಷ್ಟ ವಿಧಾನವನ್ನು ಅನುಸರಿಸುತ್ತಿವೆ. ಪ್ರಾಥಮಿಕ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಶಾಲೆಗೆ ಭಾರದ ಬ್ಯಾಗ್ಗಳನ್ನು ಕೊಂಡೊಯ್ಯುವುದರಿಂದ ವಿನಾಯಿತಿ ನೀಡಲಾಗಿದೆ. ಬದಲಿಗೆ ಅವರಿಗೆ ಶಾಲೆಯಲ್ಲಿಯೇ ಸ್ಟಡಿ ಕಿಟ್ಗಳನ್ನು ನೀಡಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಂತಹ ಒಂದು ಶಾಲೆಯ ಪ್ರಾಂಶುಪಾಲರು, ‘ಮಕ್ಕಳು ಶಾಲೆಗೆ ಬರಿಗೈಯಲ್ಲಿ ಬರುತ್ತಾರೆ, ಸ್ಟಡಿ ಕಿಟ್ಗಳ ಸಹಾಯದಿಂದ ಅಧ್ಯಯನ ಮಾಡುತ್ತಾರೆ ಮತ್ತು ಶಾಲೆಗಳಲ್ಲೇ ಸ್ಟಡಿ ಕಿಟ್ ಇಟ್ಟು ಬರಿಗೈಯಲ್ಲಿ ಮನೆಗೆ ತೆರಳುತ್ತಾರೆ. ಅವರಿಗೆ ಯಾವುದೇ ಹೋಂವರ್ಕ್ ನೀಡಲಾಗುವುದಿಲ್ಲ. ಅವರಿಗೆ ಕಥೆ ಹೇಳುವುದು, ಹಾಡುಗಳು ಮತ್ತು ನಟನೆಯಂತಹ ಪ್ರಾಯೋಗಿಕ ವಿಧಾನಗಳನ್ನು ಬಳಸಿ ವಿದ್ಯೆ ಕಲಿಸಲಾಗುತ್ತದೆ “ಎಂದಿದ್ದಾರೆ.
ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಲು ಗುಜರಾತ್ ಸರ್ಕಾರ ಪ್ರಾರಂಭಿಸಿರುವ ಪ್ರಜ್ಞಾ ಕಾರ್ಯಕ್ರಮದ ಭಾಗವಾಗಿ ಈ ವಿಧಾನವನ್ನು ವಡೋದರದ ಸರ್ಕಾರಿ ಶಾಲೆಗಳು ಅನುಸರಿಸುತ್ತಿವೆ.
ಮಕ್ಕಳು ಕೂಡ ಈ ವಿಧಾನದಿಂದ ತುಂಬಾ ಸಂತೋಷಗೊಂಡಿದ್ದಾರೆ. ‘ನೋ ಬ್ಯಾಗ್’ ಸಿಸ್ಟಮ್ ಅವರಿಗೆ ನಿರಾಳತೆಯನ್ನು ತಂದುಕೊಟ್ಟಿದೆ.
“ಶಾಲೆಯಲ್ಲೇ ಓದಲು ಪಠ್ಯ ಪುಸ್ತಕ ಪಡೆಯುತ್ತೇವೆ ಮತ್ತು ನಿತ್ಯ ಹೊಸ ಹೊಸ ಚಟುವಟಿಕೆ ಕಲಿಯುತ್ತೇವೆ. ಓದಲು ಪುಸ್ತಕವನ್ನು ಇಲ್ಲೇ ಪಡೆಯುವುದರಿಂದ ಅವುಗಳನ್ನು ಮನೆಗೆ, ಮನೆಯಿಂದ ಶಾಲೆಗೆ ಕೊಂಡೊಯ್ಯುವ ಕಷ್ಟ ಇಲ್ಲ” ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.