ಅಯೋಧ್ಯಾ: ಅಯೋಧ್ಯೆಯಲ್ಲಿ ನಿರ್ಮಿಸಲು ಪ್ರಸ್ತಾಪಿಸಲಾಗಿರುವ ಭಗವಾನ್ ಶ್ರೀರಾಮನ ಪ್ರತಿಮೆ ವಿಶ್ವದಲ್ಲೇ ಅತೀ ಎತ್ತರದ ಪ್ರತಿಮೆಯಾಗಿ ಹೊರಹೊಮ್ಮುವ ನಿರೀಕ್ಷೆ ಇದೆ. ಈ ಪ್ರತಿಮೆ 251 ಮೀಟರ್ ಎತ್ತರವಿರಲಿದ್ದು 100 ಎಕರೆ ಜಾಗದಲ್ಲಿ ಸ್ಥಾಪಿಸಲಾಗುತ್ತದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಸೋಮವಾರ ಸಂಜೆ ಲಕ್ನೋದಲ್ಲಿ ನಡೆದ ಸಭೆಯಲ್ಲಿ ಶ್ರೀರಾಮ ಪ್ರತಿಮೆಯನ್ನು ಅತೀ ಎತ್ತರದ ಪ್ರತಿಮೆಯಾಗಿ ನಿರ್ಮಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಗುಜರಾತ್ನ ಸರ್ದಾರ್ ಪಟೇಲ್ ಪ್ರತಿಮೆ 183 ಮೀಟರ್ ಎತ್ತರವಿದೆ. ಶ್ರೀರಾಮನ ಪ್ರತಿಮೆ ಅದಕ್ಕಿಂತಲೂ ಎತ್ತರವಿರಲಿದೆ. ಇದನ್ನು ನಿರ್ಮಿಸಲು ತಾಂತ್ರಿಕ ನೆರವು ಪಡೆಯುವುದಕ್ಕಾಗಿ ಗುಜರಾತ್ ಸರ್ಕಾರದೊಂದಿಗೆ ತಿಳುವಳಿಕೆಯ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಗುವುದು ಎಂದು ಸಿಎಂ ಯೋಗಿ ತಿಳಿಸಿದ್ದಾರೆ.
ಅಯೋಧ್ಯೆಯ ಒಟ್ಟಾರೆ ಅಭಿವೃದ್ಧಿಗೆ ಪೂರಕವಾಗುವಂತೆ ಈ ಯೋಜನೆಯನ್ನು ಸಿದ್ಧಪಡಿಸಲಾಗುತ್ತದೆ ಎಂದು ಆದಿತ್ಯನಾಥ್ ಹೇಳಿದ್ದಾರೆ.
“ಭಗವಾನ್ ಶ್ರೀ ರಾಮನ ಥೀಮ್ ಆಧಾರಿತ ಡಿಜಿಟಲ್ ಮ್ಯೂಸಿಯಂ, ಇಂಟರ್ಪ್ರಿಟೇಶನ್ ಸೆಂಟರ್, ಲೈಬ್ರರಿ, ಪಾರ್ಕಿಂಗ್, ಫುಡ್ ಪ್ಲಾಜಾ, ಭೂದೃಶ್ಯದ ಜೊತೆಗೆ ಮೂಲ ಪ್ರವಾಸಿ ಸೌಲಭ್ಯಗಳ ವ್ಯವಸ್ಥೆ ಇದರಲ್ಲಿರಲಿದೆ” ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಟ್ರಸ್ಟ್ ರಚಿಸುವ ಬಗ್ಗೆಯೂ ಸಭೆಯಲ್ಲಿ ನಿರ್ಧರಿಸಲಾಗಿದೆ.
ಈ ಪ್ರಾಜೆಕ್ಟ್, ಸ್ಟ್ರಕ್ಚರ್, ಬಿಡ್ಡಿಂಗ್ ಆಪರೇಶಣ್ ಮತ್ತು ನಿರ್ಮಾಣ ಕಾರ್ಯಗಳಿಗಾಗಿ ರಾಜ್ಯ ಉತ್ಪಾದನಾ ನಿಗಮದ ಪ್ರತ್ಯೇಕ ಘಟಕವನ್ನು ಸ್ಥಾಪಿಸಲಾಗುತ್ತದೆ ಎಂದಿದ್ದಾರೆ.
ಐಐಟಿ ಕಾನ್ಪುರ್ ಮತ್ತು ನಾಗ್ಪುರ ಮೂಲದ NEERI (ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ)ಯನ್ನು ಈ ಯೋಜನೆಯ ಸೈಟ್ ಸರ್ವೇ, ಪರಿಸರ ಅಧ್ಯಯನ, ಸಲಹೆಗಳಿಗಾಗಿ ನಿಯೋಜಿಸಲಾಗುತ್ತಿದೆ.
251 ಮೀಟರ್ ಎತ್ತರದ ರಾಮನ ಪ್ರತಿಮೆ ವಿಶ್ವದ ಅತಿ ಎತ್ತರದ ಪ್ರತಿಮೆಯಾಗಲಿದೆ. ನ್ಯೂಯಾರ್ಕ್ನ ಸ್ಟ್ಯಾಚು ಆಫ್ ಲಿಬರ್ಟಿ ಪ್ರತಿಮೆ 93 ಮೀಟರ್ ಎತ್ತರವಿದೆ, ಮುಂಬೈನಲ್ಲಿನ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆ 137.2 ಮೀಟರ್, ಗುಜರಾತ್ನ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆ 183 ಮೀಟರ್, ಚೀನಾದಲ್ಲಿ ಗೌತಮ್ ಬುದ್ಧನ ಪ್ರತಿಮೆ 208 ಮೀಟರ್ ಮತ್ತು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪ್ರತಿಮೆ 212 ಮೀಟರ್ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.