ನವದೆಹಲಿ: ಕುಲಭೂಷಣ್ ಯಾದವ್ ಅವರ ಬಗ್ಗೆ ಅಂತಾರಾಷ್ಟ್ರೀಯ ನ್ಯಾಯಾಲಯ ನೀಡಿರುವ ತೀರ್ಪಿಗೆ, ಪಾಕಿಸ್ಥಾನದ ಜೈಲಿನಲ್ಲಿ ಮೃತಪಟ್ಟ ಭಾರತೀಯ ಕೈದಿ ಸರಬ್ಜೀತ್ ಸಿಂಗ್ ಅವರ ಸಹೋದರಿ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಈ ತೀರ್ಪು ಭಾರತ ಸರ್ಕಾರಕ್ಕೆ ಸಂದ ಅತೀದೊಡ್ಡ ಜಯ ಎಂದಿದ್ದಾರೆ. ಅಲ್ಲದೇ ಆಗಿನ ಸರ್ಕಾರ ಕ್ರಿಯಾಶೀಲಗೊಂಡಿದ್ದರೆ ಸರಬ್ಜೀತ್ ಸಿಂಗ್ ಅವರ ಪ್ರಕರಣವೂ ಸುಖಾಂತ್ಯವಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ಪಾಕಿಸ್ಥಾನ ಮಿಲಿಟರಿ ಕುಲಭೂಷಣ್ಗೆ ಘೋಷಣೆ ಮಾಡಿದ್ದ ಮರಣದಂಡನೆಗೆ ಬುಧವಾರ ಅಂತಾರಾಷ್ಟ್ರೀಯ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ ಮತ್ತು ಅವರಿಗೆ ಭಾರತದ ರಾಜತಾಂತ್ರಿಕ ಸಂಪರ್ಕವನ್ನು ಒದಗಿಸಬೇಕು ಎಂದು ಆದೇಶಿಸಿದೆ. ಇದು ಭಾರತಕ್ಕೆ ಈ ಪ್ರಕರಣದಲ್ಲಿ ಸಂದ ದೊಡ್ಡ ಮಟ್ಟದ ಜಯ ಎಂದು ಬಣ್ಣಿಸಲಾಗಿದೆ.
ಈ ತೀರ್ಪನ್ನು ಸ್ವಾಗತ ಮಾಡಿರುವ ದಲ್ಬೀರ್ ಕೌರ್, ಇದು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತಕ್ಕೆ ಮತ್ತು ನರೇಂದ್ರ ಮೋದಿ ಸರ್ಕಾರಕ್ಕೆ ಸಂದ ದೊಡ್ಡ ಜಯ ಎಂದಿದ್ದಾರೆ.
“ಇದು ಭಾರತಕ್ಕೆ ದೊರೆತ ದೊಡ್ಡ ಗೆಲುವು. ಅಂತಾರಾಷ್ಟ್ರೀಯ ನ್ಯಾಯಾಲಯವನ್ನು ತಲುಪಿದ್ದಕ್ಕಾಗಿ ಮತ್ತು ಸತ್ಯಗಳನ್ನು ಪರಿಣಾಮಕಾರಿಯಾಗಿ ಮಂಡಿಸಿದ್ದಕ್ಕಾಗಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನು ನಾನು ಅಭಿನಂದಿಸುತ್ತೇನೆ. ಅವರ ಶಿಕ್ಷೆಯನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ಯಂತ ಮುಖ್ಯವಾಗಿ, ಜಾಧವ್ ಅವರು ಹೋರಾಟ ನಡೆಸಲು ವಕೀಲರನ್ನು ಪಡೆಯಲು ಅರ್ಹರಾಗಿದ್ದಾರೆ “ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ನನ್ನ ಸಹೋದರ ಜೈಲಿನಲ್ಲಿದ್ದಾಗ, ಆಗಿನ ಸರ್ಕಾರವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ವಿಫಲವಾಗಿತ್ತು, ಹೀಗಾಗಿ ಲಾಹೋರ್ ಜೈಲಿನಲ್ಲಿ ಸರಬ್ಜೀತ್ ಸಾವನ್ನು ಕಾಣಬೇಕಾಯಿತು ಎಂದಿದ್ದಾರೆ.
“ನಾನು ಅಂದಿನ ಸರ್ಕಾರವನ್ನು ಸಂಪರ್ಕಿಸಿ ಸರಬ್ಜೀತ್ ಪ್ರಕರಣದಲ್ಲಿ ಹಲವು ತಪ್ಪುಗಳು ನಡೆದಿದೆ ಅಂತಾರಾಷ್ಟ್ರೀಯ ನ್ಯಾಯಾಲಯವನ್ನು ಸಂಪರ್ಕಿಸಿ ಎಂದು ಕೇಳಿಕೊಂಡಿದ್ದೆ. ಆದರೆ ನನ್ನ ಮಾತನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಸರಬ್ಜೀತ್ ಪ್ರಕರಣದಲ್ಲಿ ಆ ಸರ್ಕಾರ ದುರ್ಬಲವಾಯಿತು” ಎಂದು ಕೌರ್ ಬೇಸರ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.