ನವದೆಹಲಿ: ಗುರು ಪೂರ್ಣಿಮೆಯನ್ನು ಆಚರಿಸುವ ಸಂಪ್ರದಾಯವನ್ನು ಮುಂದುವರೆಸಿರುವ ಇಂಡಿಕ್ ಅಕಾಡೆಮಿ, ಈ ಬಾರಿ ಭಾರತೀಯ ಸಂಸ್ಕೃತಿ ಮತ್ತು ಧರ್ಮವನ್ನು ಸಂರಕ್ಷಣೆ ಮಾಡುವ ಸಲುವಾಗಿ ಜೀವನವನ್ನು ಮುಡುಪಾಗಿಟ್ಟಿರುವ 108 ವಿದ್ವಾಂಸರಿಗೆ ಗುರು ಪೂರ್ಣಿಮೆಯ ಅಂಗವಾಗಿ ಗೌರವ ಸಮರ್ಪಣೆ ಮಾಡಲು ಅದು ಮುಂದಾಗಿದೆ.
ಭಾರತೀಯ ಸಂಸ್ಕೃತಿಯನ್ನು ಸಂರಕ್ಷಣೆ ಮಾಡುವ ಮತ್ತು ಪ್ರಚುರಪಡಿಸುವ ಕಾರ್ಯದಲ್ಲಿ ತೊಡಗಿರುವ ಶೈಕ್ಷಣಿಕ ತಜ್ಞರು, ಲೇಖಕರು, ಕಲಾವಿದರು, ಹೋರಾಟಗಾರರನ್ನು ಇಂಡಿಕ್ ಅಕಾಡೆಮಿ ಗುರುತಿಸಿದೆ. ಧಾರ್ಮಿಕ ಸ್ಥಳಗಳು, ಸಂಪ್ರದಾಯಗಳು, ಗುರುಗಳು ಮತ್ತು ಸನಾತನ ಧರ್ಮದ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಯನ್ನು ವಿರೋಧಿಸಿದ್ದಕ್ಕಾಗಿ ಇವರನ್ನು ಗೌರವಿಸಲಾಗುತ್ತಿದೆ.
ಅಂಜನೇಯ ಶರ್ಮಾ ಗಾರು, ಡಾ. ರಾಮ್ಚಂದ್ರ ಭಟ್ ಕೋಟೆಮನೆ, ಡಾ.ಆರ್.ಎಲ್. ಕಶ್ಯಪ್, ಡಾ.ಮಣಿ ದ್ರಾವಿಡ್ ಶಾಸ್ತ್ರಿಗಲ್, ಪ್ರೊ. ಕೆವಿ ರಾಮಕೃಷ್ಣಮಚಾರ್ಯಲು, ಬ್ರಹ್ಮಶ್ರೀ ಸುಬ್ರಹ್ಮಣ್ಯ ದೀಕ್ಷಿತರ್, ಬ್ರಹ್ಮಶ್ರೀ ಸುಂದರ್ ಕುಮಾರ್ ಡಿ. ಆಚಾರ್ಯ ಚಿರ್ರವುರಿ ಶ್ರೀರಾಮ ಶರ್ಮಾ, ಪ್ರೊ. ವಿಎನ್ ಜಾ ಅವನ್ನು ಸಾಂಪ್ರದಾಯಿಕ ಜ್ಞಾನ ಮತ್ತು ಶಿಕ್ಷಣದ ಮೌಲ್ಯವನ್ನು ಪ್ರಚುರಪಡಿಸಿದ್ದಕ್ಕೆ, ಸಂರಕ್ಷಣೆ ಮಾಡಿದ್ದಕ್ಕೆ ಗೌರವಿಸಲಾಗುತ್ತಿದೆ.
ಶಿಕ್ಷಣ ತಜ್ಞರಾದ ಸುಭಾಷ್ ಕಾಕ್, ಕೊಯೆನ್ರಾಡ್ ಎಲ್ಸ್ಟ್, ಮೈಕೆಲ್ ಡ್ಯಾನಿನೋ, ಭರತ್ ಗುಪ್ತ, ಎಸ್ ಎನ್ ಬಾಲಗಂಗಾಧರ, ಮಧು ಕಿಶ್ವರ್, ಅರವಿಂದ ಶರ್ಮಾ ಮತ್ತು ಮೀನಾಕ್ಷಿ ಜೈನ್ ಅವರು ಪಾಂಡಿತ್ಯಪೂರ್ಣ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಗೌರವಿಸಲಾಗುತ್ತಿದೆ.
ಪಾಶ್ಚಾತ್ಯ ಭಾರತೀಯತೆಯನ್ನು ಪ್ರಚುರಪಡಿಸುವ ಒಂದು ವರ್ಗದ ಪಕ್ಷಪಾತದ ಮೇಲೆ ಬೆಳಕು ಚೆಲ್ಲಿದ ಮತ್ತು ವಾಸ್ತವಕತೆಯನ್ನು ಎದುರಿಸಿದಲು ರಾಜೀವ್ ಮಲ್ಹೋತ್ರಾ, ದಲಿತ ಉದ್ಯಮಿಗಳನ್ನು ಒಂದೇ ಸೂರಿನಡಿಯಲ್ಲಿ ಒಟ್ಟುಗೂಡಿಸಿದ್ದಕ್ಕಾಗಿ ದಲಿತ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಡಿಐಸಿಸಿಐ) ಸಂಸ್ಥಾಪಕ ಮಿಲಿಂದ್ ಕಾಂಬ್ಳೆ ಅವರಿಗೆ ಗೌರವ ನೀಡಲಾಗುತ್ತಿದೆ.
ಕಲಾವಿದರಾದ ಡಾ.ರಾಮಾ ಕೌಸಲ್ಯ, ಪ್ರಭಾ ಅತ್ರೆ, ಡಾ.ಅರವಿಂದ ಹೆಬ್ಬರ್, ತಿರುಮಲೆ ಶ್ರೀನಿವಾಸ್, ದಕ್ಷಿಣ ಸೇಠ್ ಮತ್ತು ಕೊಸುರ್ಲುವಾ ಶೇಷಲಥ. ಸಂಸ್ಕೃತಿ ಕಾರ್ಯಕರ್ತ ಮೋಹನ್ ಹೆಮ್ಮಾಡಿ ಮತ್ತು ಉದ್ಯಮಿ ಆರ್ ಟಿ ಚಾರಿ ಅವರೂ ಗೌರವಕ್ಕೆ ಪಾತ್ರರಾಗಿದ್ದಾರೆ.
ಯೋಗ, ಆಯುರ್ವೇದ ಮತ್ತು ವೇದಾಂತಗಳನ್ನು ಸಂರಕ್ಷಿಸಲು ಮತ್ತು ಪ್ರಚಾರಪಡಿಸಲು ಶ್ರಮಿಸಿದ ಪ್ರಶಾಂತ್ ಅಯ್ಯಂಗಾರ್, ಡಾ.ಸುಭಾದಾ ಜೋಶಿ, ಡಾ.ಆರ್.ನಾಗರತ್ನ, ಡಾ.ಗಂಗಾಧರನ್ ನಾಯರ್ ಮತ್ತು ರಘು ಅನಂತನಾರಾಯಣನ್ ಅವರಿಗೂ ಗೌರವವನ್ನು ನೀಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.