ನವದೆಹಲಿ: ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆಗಾಗಿ, ಐಐಟಿ ಕಾನ್ಪುರವು ಮೋಷನ್ ಪ್ಲ್ಯಾನಿಂಗ್ ಮತ್ತು ಮ್ಯಾಪಿಂಗ್ ಜನರೇಶನ್ ಸಾಫ್ಟವೇರ್ ಅನ್ನು ಅಭಿವೃದ್ಧಿಪಡಿಸಿದೆ.
ವರದಿಗಳ ಪ್ರಕಾರ, ಐಐಟಿ ಕಾನ್ಪುರ್ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಸಾಫ್ಟ್ವೇರ್ ರೋವರ್ಗೆ ಅದರ ಚಲನೆಯಲ್ಲಿ ಸಹಾಯ ಮಾಡಲಿದೆ ಮತ್ತು ಚಂದ್ರನ ಮೇಲ್ಮೈಯಲ್ಲಿ ರೋವರ್ಗೆ ಅದರ ಮಾರ್ಗದ ಬಗ್ಗೆ ಮಾರ್ಗದರ್ಶವನ್ನು ನೀಡಲಿದೆ.
ಈ ಸಾಫ್ಟ್ವೇರ್ ಅನ್ನು ಐಐಟಿ ಕಾನ್ಪುರದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಆಶಿಶ್ ದತ್ತಾ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊ.ಕೆ.ಎಸ್. ವೆಂಕಟೇಶ್ ಅಭಿವೃದ್ಧಿಪಡಿಸಿದ್ದಾರೆ.
ನಾವು ಅಭಿವೃದ್ಧಿಪಡಿಸಿದ ಪ್ಲ್ಯಾನಿಂಗ್ ಮತ್ತು ಮ್ಯಾಪಿಂಗ್ ಜನರೇಶನ್ ಸಾಫ್ಟ್ವೇರ್ ಅನ್ನು ಇಸ್ರೋ ಅನುಮೋದಿಸಿದೆ ಎಂದು ಇವರು ಹೇಳಿದ್ದಾರೆ.
ಈ ಸಾಫ್ಟ್ವೇರ್ ಟಾರ್ಗೆಟ್ ಏರಿಯಾವನ್ನು ತಲುಪಲು ತಗಲುವ ಶಕ್ತಿ ಮತ್ತು ಸಮಯವನ್ನು ಉಳಿತಾಯ ಮಾಡಲಿದೆ ಎಂದು ಈ ಇಬ್ಬರು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.
“ಲೂನಾರ್ ರೋವರ್ ಸಾಫ್ಟ್ವೇರ್ ಅನ್ನು ದೇಶದಲ್ಲಿ ಮೊದಲ ಬಾರಿಗೆ ಅಭಿವೃದ್ಧಿಪಡಿಸಲಾಗಿದೆ ಮತ್ತು ವಿನ್ಯಾಸಗೊಳಿಸಲಾಗಿದೆ. ಇದರ ಮೂಲಕ ನಮ್ಮ ದೇಶವು ಲೂನಾರ್ ರೋವರ್ ಸಾಫ್ಟ್ವೇರ್ ತಯಾರಿಸುವ ತಂತ್ರಜ್ಞಾನವನ್ನು ಹೊಂದಿರುವ ದೇಶಗಳಲ್ಲಿ ಸ್ಥಾನ ಪಡೆಯಲು ಅನುವು ಮಾಡಿಕೊಡಲಾಗಿದೆ” ಎಂದಿದ್ದಾರೆ.
ರೋವರ್ನೊಂದಿಗೆ ಅಳವಡಿಸಲಾಗುವ ಈ ಸಾಫ್ಟ್ವೇರ್ ಚಂದ್ರನ ಮೇಲ್ಮೈಯಲ್ಲಿ ನೀರು ಮತ್ತು ಇತರ ಖನಿಜ ಸಂಪತ್ತನ್ನು ಪತ್ತೆ ಮಾಡುತ್ತದೆ ಮತ್ತು ಹೆಚ್ಚಿನ ಸಂಶೋಧನೆ ಮತ್ತು ಪರೀಕ್ಷೆಗೆ ಸಂಬಂಧಿಸಿದ ಚಿತ್ರವನ್ನು ಪ್ರಯೋಗಾಲಯಕ್ಕೆ ಕಳುಹಿಸುತ್ತದೆ.
“ಈ ಸಾಫ್ಟ್ವೇರ್ ಅನ್ನು 20-ವ್ಯಾಟ್ ಸೋಲಾರ್ ಬ್ಯಾಟರಿಯೊಂದಿಗೆ ನಿರ್ವಹಿಸಲಾಗುತ್ತದೆ ಮತ್ತು ನೀರು ಮತ್ತು ಇತರ ರಾಸಾಯನಿಕಗಳನ್ನು ಪತ್ತೆಹಚ್ಚುವ ಸಲುವಾಗಿ ಚಂದ್ರನ ಮೇಲ್ಮೈಯನ್ನು ಡ್ರಿಲ್ ಮಾಡಲು ರೋವರ್ಗೆ ಸಹಾಯ ಮಾಡಲಿದೆ. ರಾಸಾಯನಿಕ ಮತ್ತು ನೀರನ್ನು ಪತ್ತೆಹಚ್ಚಲು ಹದಿನೈದು ಪ್ರಯೋಗಗಳನ್ನು ಈ ಸಾಫ್ಟ್ವೇರ್ ಸಹಾಯದಿಂದ ಮಾಡಬಹುದಾಗಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.