ಮುಂಬಯಿ: ಕ್ರಿಕೆಟ್ ಲೋಕದ ತಾರೆ, ಭಾರತಕ್ಕೆ ವಿಶ್ವಕಪ್ ತಂದುಕೊಟ್ಟಿರುವಂತಹ ನಾಯಕ ಮಹೇಂದ್ರ ಸಿಂಗ್ ಧೋನಿ ಇತ್ತೀಚಿನ ದಿನಗಳಲ್ಲಿ ಮಂಕಾದ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಬೇಕು ಎಂಬ ಒತ್ತಾಯವನ್ನು ಹಲವರು ಮಾಡುತ್ತಿದ್ದಾರೆ. ಆದರೆ ಅವರಿಗೆ ಬೆಂಬಲ ನೀಡಿ, ನಿವೃತ್ತಿಯಾಗಬೇಡಿ ಎಂದು ಹೇಳುತ್ತಿರುವವರ ಸಂಖ್ಯೆಯೂ ಅಪಾರ ಪ್ರಮಾಣದಲ್ಲಿದೆ. ಅಂತವರಲ್ಲಿ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ಕೂಡ ಒಬ್ಬರು.
ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಸೋತ ಬಳಿಕ, ಟ್ವಿಟ್ ಮಾಡಿರುವ ಲತಾ ಮಂಗೇಶ್ಕರ್ ಅವರು ದೋನಿಗೆ ಬೆಂಬಲವನ್ನು ನೀಡಿದ್ದಾರೆ. “ದಯವಿಟ್ಟು ನಿವೃತ್ತಿಯಾಗುವ ಬಗ್ಗೆ ಯೋಚನೆ ಮಾಡಬೇಡಿ ಎಂದು ವಿನಂತಿಸಿದ್ದಾರೆ.
“ನಮಸ್ಕಾರ ಎಂಎಸ್ ಧೋನಿಯವರೇ. ನೀವು ನಿವೃತ್ತಿಯನ್ನು ಬಯಸುತ್ತಿದ್ದೀರಿ ಎಂದು ಕೇಳಲ್ಪಡುತ್ತಿದ್ದೇನೆ. ದಯವಿಟ್ಟು ಆ ರೀತಿ ಯೋಚಿಸಬೇಡಿ. ದೇಶಕ್ಕೆ ನಿಮ್ಮ ಆಟದ ಅಗತ್ಯವಿದೆ ಮತ್ತು ನಿವೃತ್ತಿಯ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ ಎಂಬುದು ನನ್ನ ವಿನಂತಿಯಾಗಿದೆ” ಎಂದಿದ್ದಾರೆ.
Namaskar M S Dhoni ji.Aaj kal main sun rahi hun ke Aap retire hona chahte hain.Kripaya aap aisa mat sochiye.Desh ko aap ke khel ki zaroorat hai aur ye meri bhi request hai ki Retirement ka vichar bhi aap mann mein mat laayiye.@msdhoni
— Lata Mangeshkar (@mangeshkarlata) July 11, 2019
ಸೋಲಿನ ಬಳಿಕ ಟೀಮ್ ಇಂಡಿಯಾವನ್ನು ಪ್ರೋತ್ಸಾಹಿಸಲು ಅವರು, ಗಾಯಕ ಗುಲ್ಜಾರ್ ಅವರ ಆಕಾಶ್ ಕೆ ಉಸ್ ಪಾರ್ ಭಿ ಹಾಡನ್ನು ಆಟಗಾರರಿಗೆ ಅರ್ಪಿಸಿದರು. “ಕಲ್ ಭಲೇಹಿ ಹಮ್ ಜೀತ್ ನಾ ಪಾಯೆ ಹೋ ಲೆಕಿನ್ ಹಮ್ ಹಾರೆ ನಹಿ ಹೆ. ಗುಲ್ಜಾರ್ ಸಹಾಬ್ ಅವರ ಈ ಹಾಡನ್ನು ನಮ್ಮ ತಂಡಕ್ಕೆ ಅರ್ಪಿಸುತ್ತೇನೆ” ಎಂದಿದ್ದಾರೆ. ಈ ಮೂಲಕ ಸೋಲಿನಿಂದ ದುಃಖದಲ್ಲಿರುವ ಭಾರತೀಯ ತಂಡಕ್ಕೆ ಸ್ಪೂರ್ತಿ ತುಂಬುವ ಕಾರ್ಯ ಮಾಡಿದ್ದಾರೆ.
Kal bhalehi hum jeet na paaye ho lekin hum haare nahi hain.Gulzar sahab ka cricket ke liye likha hua ye geet main hamari team ko dedicate karti hun. https://t.co/pCOy7M1d1Y
— Lata Mangeshkar (@mangeshkarlata) July 11, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.