ಅಯೋಧ್ಯಾ: ಉತ್ತರಪ್ರದೇಶದ 13 ವರ್ಷದ ಬಾಲಕನೊಬ್ಬ ತನ್ನ ವಯಸ್ಸಿಗೂ ಮೀರಿದ ಸಾಧನೆಯನ್ನು ಮಾಡಿದ್ದಾನೆ. ಈಗಾಗಲೇ ಆತ 135 ಪುಸ್ತಕಗಳನ್ನು ಬರೆದಿದ್ದಾನೆ. ಧರ್ಮಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ ಸೇರಿದಂತೆ ಅನೇಕ ಸಾಧಕರ ಜೀವನಚರಿತ್ರೆಯ ಬಗ್ಗೆ ಈತ ಪುಸ್ತಕವನ್ನು ಬರೆದಿದ್ದಾನೆ.
ಮೃಗೇಂದ್ರ ರಾಜ್ ತನ್ನ ಆರನೇಯ ವಯಸ್ಸಿನಲ್ಲಿ ಪುಸ್ತಕವನ್ನು ಬರೆಯಲು ಆರಂಭಿಸಿದ್ದಾನೆ. ಆತ ಮೊದಲು ಬರೆದಿದ್ದು ಕವನ ಸಂಕಲನವನ್ನು.
“ರಾಮಾಯಣದ 51 ವ್ಯಕ್ತಿತ್ವಗಳನ್ನು ವಿಶ್ಲೇಷಣೆ ನಡೆಸಿದ ಬಳಿಕ ನಾನು ಪುಸ್ತಕಗಳನ್ನು ಬರೆದಿದ್ದೇನೆ, ನನ್ನ ಪ್ರತಿ ಪುಸ್ತಕಗಳು 25 ರಿಂದ 100 ಪುಟಗಳನ್ನು ಹೊಂದಿದೆ. ಲಂಡನ್ನಿನ ವರ್ಲ್ಡ್ ಯೂನಿವರ್ಸಿಟಿ ಆಫ್ ರಿಕಾರ್ಡ್ಸ್ನಿಂದ ಡಾಕ್ಟೋರೇಟ್ಗೆ ನನಗೆ ಆಫರ್ ಬಂದಿದೆ” ಎಂದು ಈತ ಹೇಳಿದ್ದಾನೆ.
ತನ್ನ ಮಗ ಬರವಣಿಗೆಯಲ್ಲಿ ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾನೆ, ಆತನ ಆಸಕ್ತಿಗೆ ನಾವು ಪ್ರೋತ್ಸಾಹ ನೀಡುತ್ತೇವೆ ಎಂದು ಸುಲ್ತಾನಪುರ ಖಾಸಗಿ ಶಾಲೆಯಲ್ಲಿ ಶಿಕ್ಷಕರಿಯಾಗಿರುವ ಮೃಗೇಂದ್ರ ರಾಜ್ ತಾಯಿ ಹೇಳುತ್ತಾರೆ. ಈತನ ತಂದೆ ಸರ್ಕಾರಿ ಸಕ್ಕರೆ ಕಾರ್ಖಾನೆ ಮತ್ತು ಕಬ್ಬು ಅಭಿವೃದ್ಧಿ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ.
ಭವಿಷ್ಯದಲ್ಲಿ ಅದ್ಭತವಾದ ಬರಹಗಾರನಾಗಿ ಹೊರಹೊಮ್ಮಬೇಕು, ವಿವಿಧ ವಿಷಯಗಳ ಬಗ್ಗೆ ಸಾಕಷ್ಟು ಪುಸ್ತಕಗಳನ್ನು ಬರೆಯಬೇಕು ಎಂಬ ಕನಸುಗಳನ್ನು ಈತ ಇಟ್ಟುಕೊಂಡಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.