ನವದೆಹಲಿ: ವಿಚಾರಗಳನ್ನು ಮತ್ತು ಮನವಿಗಳನ್ನು ಭಾರತದ ಸರ್ವೇ ಸಾಮಾನ್ಯ ಪ್ರಜೆಗೂ ಅರ್ಥವಾಗುವಂತೆ ಹಂಚಿಕೊಳ್ಳುವುದು ಪ್ರಧಾನಿ ನರೇಂದ್ರ ಮೋದಿಯವರ ವಿಶೇಷತೆಯಾಗಿದೆ. ಪರಿಸರದ ಸಂರಕ್ಷಣೆ ಒಂದು ನಿರ್ದಿಷ್ಟ ವರ್ಗ ಅಥವಾ ಜನರ ನಿರ್ದಿಷ್ಟ ಗುಂಪಿಗೆ ಸೇರಿದ ಕೆಲಸವಲ್ಲ, ಅದಕ್ಕೆ ಪ್ರತಿಯೊಬ್ಬ ವ್ಯಕ್ತಿಯ ಭಾಗವಹಿಸುವಿಕೆಯ ಅಗತ್ಯವಿದೆ. ಪ್ರಧಾನಿಯವರು 2011ರಲ್ಲಿ ಬರೆದ ತಮ್ಮ ಬ್ಲಾಗ್ ಅನ್ನು ಟ್ವಿಟ್ಟರ್ನಲ್ಲಿ ನಿನ್ನೆ ಹಂಚಿಕೊಂಡಿದ್ದು, ಇದರಲ್ಲಿ ಅವರು ಪ್ರಕೃತಿ ಸಂರಕ್ಷಣೆಗೆ ಕೊಡುಗೆ ನೀಡುವ ಸೃಜನಶೀಲ ಮತ್ತು ಸರಳವಾದ ಆಲೋಚನೆಯನ್ನು ತೆರೆದಿಟ್ಟಿದ್ದಾರೆ.
ಬ್ಲಾಗ್ನ ಹೆಸರು ‘A Daughter, A Tree and A Teacher’. ಒಂದು ಕ್ರಿಯೆಯ ಮೂಲಕ ಎರಡು ಗುರಿಗಳನ್ನು ಸಾಧಿಸುವ ಬಗ್ಗೆ ಬ್ಲಾಗ್ ವಿವರಿಸುತ್ತದೆ. ಪ್ರಕೃತಿ ಸಂರಕ್ಷಣೆ ಮತ್ತು ನೀರಿನ ಸಂರಕ್ಷಣೆ ಮತ್ತು ಸಸ್ಯಕ್ಕೆ ನಿಯಮಿತವಾಗಿ ನೀರು ಸರಬರಾಜು ಮಾಡಲು ಮೆರಗು ಇಲ್ಲದ ಮಣ್ಣಿನ ಮಡಕೆಯನ್ನು ಭೂಮಿಯೊಳಗೆ ಹೂತಿಟ್ಟು ಅದಕ್ಕೆ ನೀರನ್ನು ತುಂಬಿಸಿ ಅದರ ಮೂಲಕ ಗಿಡವನ್ನು ಬೆಳೆಸುವುದು ಆ ಗುರಿಯಾಗಿದೆ.
ಈ ಬ್ಲಾಗ್ನಲ್ಲಿ, ಗುಜರಾತ್ನ ಸೌರಾಷ್ಟ್ರದಲ್ಲಿರುವ ಶಾಲೆಯೊಂದರ ಹೃದಯ ಸ್ಪರ್ಶಿ ಕಥೆಯನ್ನು ಪ್ರಧಾನಿ ಉಲ್ಲೇಖಿಸಿದ್ದಾರೆ, ಆ ಶಾಲೆಯಲ್ಲಿ ಶಿಕ್ಷಕರು ವಿಶಿಷ್ಟ ಪ್ರಯೋಗವನ್ನು ಮಾಡಿದ್ದಾರೆ. ನೀರಿನ ಕೊರತೆಯಿದ್ದಾಗಲೂ ಕೆಸರು ನೀರಿನ ಸಹಾಯದಿಂದ ಶಾಲೆಯು ಹೇಗೆ ಸೊಂಪಾದ ಹಸಿರು ಉದ್ಯಾನವನ್ನು ನಿರ್ಮಾಣ ಮಾಡಿತು ಎಂಬುದನ್ನು ಓದುವುದು ನಿಜಕ್ಕೂ ಅದ್ಭುತ ಎನಿಸಿದೆ.
Planted a tree by placing a Matka underground and filling it with water.
This is an easy and effective way to create a greener tomorrow.
I had also written about this method on my blog back in 2011. Sharing it once again. https://t.co/UTwjWqBSsf pic.twitter.com/h93fiW6TvP
— Narendra Modi (@narendramodi) July 6, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.