ನವದೆಹಲಿ: ತನ್ನ ಮಹತ್ವಾಕಾಂಕ್ಷೆಯ ಯೋಜನೆ ‘ಡಿಜಿಟಲ್ ಇಂಡಿಯಾ’ಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ದೆಹಲಿಯ ಇಂದಿರಾ ಗಾಂಧಿ ಇಂಡೋರ್ ಸ್ಟೇಡಿಯಂನಲ್ಲಿ ಚಾಲನೆ ನೀಡಿದರು. ಸುಮಾರು 2.5 ಲಕ್ಷ ಗ್ರಾಮೀಣ ಜನರನ್ನು ಈ ಯೋಜನೆಯಡಿ ತರುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಈ ಯೋಜನೆಯಡಿ ಭಾರತವನ್ನು ಡಿಜಿಟಲೀಕರಣಗೊಳಿಸುವುದಕ್ಕಾಗಿ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ಬಜೆಟ್ನ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಅಲ್ಲದೇ ಭಾರತ್ ನೆಟ್, ಡಿಜಿಟಲ್ ಲಾಕರ್, ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ಗಳನ್ನೂ ಉದ್ಘಾಟಿಸಲಾಗಿದೆ.
ಈ ಸಮಾರಂಭದಲ್ಲಿ ಮುಖೇಶ್ ಅಂಬಾನಿ, ಅಜೀಂ ಪ್ರೇಮ್ ಜೀ, ಸೈರಸ್ ಮಿಸ್ತ್ರಿ ಮುಂತಾದ ಉನ್ನತ ಉದ್ಯಮಿಗಳು ಭಾಗವಹಿಸಿದ್ದು, ಡಿಜಿಟಲ್ ಇಂಡಿಯಾದ ಬಗೆಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಡಿಜಿಟಲ್ ಇಂಡಿಯಾ ಇಡೀ ದೇಶವನ್ನು ಬದಲಾಯಿಸಲಿದೆ, ಕೋಟ್ಯಾಂತರ ಭಾರತೀಯರ ಕನಸನ್ನು ಸಾಕಾರಗೊಳಿಸಲಿದೆ. ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳೂ ಡಿಜಿಟಲ್ ಬಗ್ಗೆ ತಿಳಿದುಕೊಂಡಿದ್ದಾರೆ. ಈ ಬದಲಾವಣೆಯನ್ನು ಅರ್ಥ ಮಾಡಿಕೊಳ್ಳಲು ಇದು ಸಕಾಲ’ ಎಂದರು.
ಈ ಯೋಜನೆ 18 ಲಕ್ಷ ಯುವಕರಿಗೆ ಉದ್ಯೋಗವನ್ನು ನೀಡಲಿದೆ. ಶೀಘ್ರದಲ್ಲೇ ಇ-ಗರ್ವನೆನ್ಸ್ ಮೊಬೈಲ್ ಗರ್ವನೆನ್ಸ್ ಆಗಿ ಬದಲಾವಣೆಗೊಳ್ಳಲಿದೆ. ಅತಿ ಬಡವರು ಕೂಡ ಡಿಜಿಟಲ್ನಿಂದ ಹೊರಗುಳಿಯಲು ಸಾಧ್ಯವಿಲ್ಲ. ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಕೂಡ ತಂತ್ರಜ್ಞಾನದಿಂದ ಸಾಕಾರಗೊಳ್ಳಲಿದೆ. ಬ್ಯಾಂಕುಗಳು ಕೂಡ ಶೀಘ್ರದಲ್ಲಿ ಪೆಪರ್ ರಹಿತವಾಗಲಿದೆ ಎಂದರು.
ಅಲ್ಲದೇ ಈ ಯೋಜನೆಯ ಅಂಗವಾಗಿ ೧೨ ಲಕ್ಷ ಸೈನಿಕರ ಕಾರ್ಯಾಚರಣೆಯಲ್ಲಿ ವ್ಯವಹರಿಸುವುದಕ್ಕಾಗಿ ನಮ್ಮ ಸೇನೆ ಹೊಸ ಅಟೋಮೇಶನ್ ಸಾಫ್ಟ್ವೇರ್ ಕಛೇರಿಯನ್ನು ಆರಂಭಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.