ನವದೆಹಲಿ: ಸಂಸತ್ತಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದು, 5 ಟ್ರಿಲಿಯನ್ ಟಾಲರ್ ಆರ್ಥಿಕತೆಯನ್ನು ಸಾಧಿಸುವ ನಿಟ್ಟಿನಲ್ಲಿ ದೃಷ್ಟಿಕೋನವನ್ನು ನೀಡಿದೆ. ಶ್ರೀಮಂತರಿಂದ ಹಿಡಿದು ಬಡವರವರೆಗೂ ಇದು ಅತ್ಯಂತ ಪೂರಕವಾದ ಬಜೆಟ್ ಎಂದು ಬಣ್ಣಿಸಿದ್ದಾರೆ.
ಬಜೆಟ್ ಬಗೆಗಿನ ತಮ್ಮ ಅನಿಸಿಕೆಯನ್ನು ವೀಡಿಯೋ ಮೂಲಕ ಟ್ವಿಟರಿನಲ್ಲಿ ಹಂಚಿಕೊಂಡಿರುವ ಮೋದಿ, ಈ ಬಜೆಟ್ ದೇಶದ ಜನರ ವಿಶ್ವಾಸ ಗಳಿಸಲಿದೆ. ದೇಶದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲಿದೆ. ಇದು ಮಹತ್ವಾಕಾಂಕ್ಷೆಯ ಬಜೆಟ್ ಆಗಿದೆ. ಈ ಬಜೆಟ್ ನಿರ್ದಿಷ್ಟ ಗುರಿಯನ್ನು ತಲುಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಮಂಡನೆಗೊಂಡಿರುವ ಬಜೆಟ್ 2022ರ ನವ ಭಾರತ ನಿರ್ಮಾಣ ಕನಸು ಈಡೇರಿಸಲು ಪೂರಕವಾಗಲಿದೆ. ದಲಿತ, ಶೋಷಿತ, ಬಡ, ವಂಚಿತ ಜನರನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಳೆದ 5 ವರ್ಷಗಳಿಂದ ಕೆಲಸ ಮಾಡುತ್ತಿದೆ. ಈ ಬಜೆಟ್ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಪೂರಕವಾಗಿದೆ ಎಂದಿದ್ದಾರೆ.
ದೇಶದಲ್ಲಿ ಉಂಟಾಗುತ್ತಿರುವ ಜಲ ಸಮಸ್ಯೆಯನ್ನು ನಿವಾರಣೆ ಮಾಡಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಸ್ವಚ್ಛ ಭಾರತ್ ಅಭಿಯಾನದಂತೆ ಹರ್ ಘರ್ ಜಲ್ ಅಭಿಯಾನ ಪ್ರಾರಂಭಿಸಲಾಗುತ್ತದೆ ಎಂದು ಹೇಳಿದರು.
ಮುಂದಿನ ಕೆಲವು ವರ್ಷಗಳಲ್ಲಿ ಭಾರತವು 5 ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆ ಹೊಂದಲಿದೆ. ಈ ಕನಸನ್ನು ಪೂರ್ಣಗೊಳಿಸಲು ಸರ್ಕಾರ ಶ್ರಮಿಸಲಿದೆ. ದೇಶದ ರೈತರು, ಮೀನುಗಾರರನ್ನು ಪ್ರಬಲಗೊಳಿಸಲು ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಮುಂದಿನ ಮೂರು ವರ್ಷಗಳಲ್ಲಿ ರೈತರ ಆದಾಯವು ದ್ವಿಗುಣಗೊಳ್ಳಲಿದೆ ಎಂದಿದ್ದಾರೆ.
The #EconomicSurvey2019 outlines a vision to achieve a $5 Trillion economy.
It also depicts the gains from advancement in the social sector, adoption of technology and energy security.
Do read!https://t.co/CZHNOcO7GV
— Narendra Modi (@narendramodi) July 4, 2019
My thoughts on the #BudgetForNewIndia. Watch. https://t.co/cJYfirRHfa
— Narendra Modi (@narendramodi) July 5, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.