ಲಕ್ನೋ: ರಾಜ್ಯದಾದ್ಯಂತದ ಜನರಿಗೆ ತಮ್ಮ ದೂರು, ಕುಂದುಕೊರತೆಗಳನ್ನು ನೋಂದಾಯಿಸಿಕೊಳ್ಳಲು ಅನುವು ಮಾಡಿಕೊಡುವ ಸಲುವಾಗಿ ಉತ್ತರ ಪ್ರದೇಶ ಸರ್ಕಾರವು ಟೋಲ್ ಫ್ರೀ ಚೀಫ್ ಮಿನಿಸ್ಟರ್ ಹೆಲ್ಪ್ಲೈನ್ 1076 ಅನ್ನು ಗುರುವಾರದಿಂದ ಪ್ರಾರಂಭಿಸಿದೆ. ಇದು ದೂರುಗಳ ಬಗ್ಗೆ ಸರಿಯಾದ ಸಮಯಕ್ಕೆ ಕ್ರಮವನ್ನು ಜರುಗಿಸಲು ಅವಕಾಶ ಕೊಡಲಿದೆ.
ಲಕ್ನೋದ ಲೋಕ ಭವನದಲ್ಲಿ ಸಹಾಯವಾಣಿಯನ್ನು ಆರಂಭಿಸಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ನಾನೇ ಪ್ರತಿ ತಿಂಗಳು ವೈಯಕ್ತಿಕವಾಗಿ ದೂರುಗಳನ್ನು ಪರಿಶೀಲಿಸುತ್ತೇನೆ ಮತ್ತು ಒಂದು ತಿಂಗಳೊಳಗೆ ಒಂದು ಇಲಾಖೆಯ ಬಗ್ಗೆ 100 ಕ್ಕೂ ಹೆಚ್ಚು ದೂರುಗಳು ಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಜನರು ತಮ್ಮ ದೂರುಗಳನ್ನು ಸಲ್ಲಿಸಲು ಲಕ್ನೋಗೆ ಆಗಮಿಸುವ ಅಗತ್ಯವಿಲ್ಲ ಎಂದಿರುವ ಅವರು, ಸುಳ್ಳು ದೂರು ನೀಡುವ ಮತ್ತು ಸಹಾಯವಾಣಿಯೊಂದಿಗೆ ಕಿಡಿಗೇಡಿತನ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಸಿಎಂ ಸಹಾಯವಾಣಿ ಸಂಖ್ಯೆ 1076 ಆಗಿದ್ದು, 24×7 ಕೆಲಸ ಮಾಡುತ್ತದೆ ಮತ್ತು ರಾಜ್ಯದ ಯಾವುದೇ ಭಾಗದ ಯಾರಾದರೂ ಈ ಸಂಖ್ಯೆಗೆ ಯಾವಾಗ ಬೇಕಾದರೂ ಕರೆ ಮಾಡಬಹುದು ಎಂದಿದ್ದಾರೆ.
ಸಹಾಯವಾಣಿಗಾಗಿ 500 ಆಸನಗಳ ಕಾಲ್ ಸೆಂಟರ್ ಅನ್ನು ಸ್ಥಾಪಿಸಲಾಗಿದೆ ಮತ್ತು ಇದು ಪ್ರತಿನಿತ್ಯ 80,000 ಇನ್ ಕಮಿಂಗ್ ಮತ್ತು 55,000 ಔಟ್ ಗೋಯಿಂಗ್ ಕರೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ದೂರುದಾರನು ಸಹಾಯವಾಣಿಗೆ ಕರೆ ಮಾಡಿದಾಗ, ಅವರ ದೂರನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಗುತ್ತದೆ, ಈ ವೇಳೆ ದೂರುದಾರರಿಗೆ SMS ಬರುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.