ನವದೆಹಲಿ: 2022 ರ ವೇಳೆಗೆ 175 ಗಿಗಾವ್ಯಾಟ್ ನವೀಕರಿಸಬಹುದಾದ ವಿದ್ಯುತ್ ಸ್ಥಾಪಿಸುವ ಗುರಿಯನ್ನು ಸರ್ಕಾರ ಸಾಧಿಸಲಿದೆ, ಈ ಮೂಲಕ ಹೊಸ ಮೈಲಿಗಲ್ಲು ದಾಟಲಿದೆ ಎಂದು ಹೊಸ ಮತ್ತು ನವೀಕರಿಸಬಹುದಾದ ಇಂಧನದ ಕೇಂದ್ರ ಸಚಿವ ಆರ್ ಕೆ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಮತ್ತು ಪ್ರಸಕ್ತ ವರ್ಷದಲ್ಲಿ ಮೇ 31 ರವರೆಗೆ ದೇಶದಲ್ಲಿ ಒಟ್ಟು 33.47 ಗಿಗಾವ್ಯಾಟ್ ನವೀಕರಿಸಬಹುದಾದ ವಿದ್ಯುತ್ ಸಾಮರ್ಥ್ಯವನ್ನು ಸ್ಥಾಪಿಸಲಾಗಿದೆ ಎಂದು ಅವರು ಲೋಕಸಭೆಯಲ್ಲಿ ಹೇಳಿದರು.
2022 ರ ವೇಳೆಗೆ ವಿವಿಧ ನವೀಕರಿಸಬಹುದಾದ ಇಂಧನ ಮೂಲಗಳಿಂದ 175 ಗಿಗಾವ್ಯಾಟ್ ಗ್ರಿಡ್ ಸಂಪರ್ಕಿತ ನವೀಕರಿಸಬಹುದಾದ ವಿದ್ಯುತ್ ಸಾಮರ್ಥ್ಯವನ್ನು ಸ್ಥಾಪಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದು ಸೌರ ಫಲಕಗಳಿಂದ 100 GW, ಗಾಳಿಯಿಂದ 60 GW, ಜೈವಿಕ ಶಕ್ತಿಯಿಂದ 10 GW ಮತ್ತು ಸಣ್ಣ ಜಲಶಕ್ತಿಯಿಂದ 5 GW ಅನ್ನು ಒಳಗೊಂಡಿದೆ ಎಂದಿದ್ದಾರೆ.
2022 ರ ಹೊತ್ತಿಗೆ ನಾವು ಈ ಗುರಿಯನ್ನು ಸಾಧಿಸುವುದಲ್ಲದೆ ಅದನ್ನು ದಾಟಿ ಬೆಳೆಯುತ್ತೇವೆ ಎಂದು ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದು, ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಭಾರತ ಅತ್ಯಂತ ವೇಗವಾಗಿ ಸಾಗುತ್ತಿದೆ ಎಂದಿದ್ದಾರೆ.
ಮುಂದಿನ 15-20 ದಿನಗಳಲ್ಲಿ ರೈತರಿಗಾಗಿ 2 ಮೆಗಾವ್ಯಾಟ್ ಸೌರ ಫಲಕವನ್ನು ಸ್ಥಾಪಿಸುವ ಯೋಜನೆಯನ್ನು ಪ್ರಾರಂಭಿಸಲಾಗುವುದು, ಇದರಿಂದ ರೈತರು ವರ್ಷಕ್ಕೆ ಒಂದು ಲಕ್ಷ ರೂ. ಗಳಿಸಬಹುದು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.