ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಾರ್ವಜನಿಕರಿಗಾಗಿ ತನ್ನ ವೀಕ್ಷಣಾ ಗ್ಯಾಲರಿಯನ್ನು ತೆರೆದಿದ್ದು, ಇದರಿಂದಾಗಿ ಜುಲೈ 15 ರಂದು ನಡೆಯಲಿರುವ ಚಂದ್ರಯಾನ-2 ಉಡಾವಣೆಯನ್ನು ಸಾರ್ವಜನಿಕರು ನೇರವಾಗಿ ವೀಕ್ಷಣೆ ಮಾಡಬಹುದಾಗಿದೆ ಎಂದು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
5,000 ಮಂದಿಯ ಸಾಮರ್ಥ್ಯವನ್ನು ಹೊಂದಿರುವ ವೀಕ್ಷಣಾ ಗ್ಯಾಲರಿಯನ್ನು ಉಡಾವಣಾ ಸ್ಥಳದಿಂದ ಸುಮಾರು 5 ಕಿ.ಮೀ ದೂರದಲ್ಲಿ ಸ್ಥಾಪಿಸಲಾಗಿದೆ, ಇದರಿಂದಾಗಿ ವೀಕ್ಷಕರಿಗೆ ರಾಕೆಟ್ ಉಡಾವಣೆಯ ಸಂಪೂರ್ಣ ದೃಶ್ಯವನ್ನು ನೋಡುವ ಅವಕಾಶ ಸಿಗಲಿದೆ.
ತಾನು ಕೈಗೊಳ್ಳುತ್ತಿರುವ ಉಡಾವಣೆ ಮತ್ತು ಉಡಾವಣಾ ಪೂರ್ವ ಸಿದ್ಧತೆ, ಕಾರ್ಯಗಳ ಬಗ್ಗೆ ವೀಕ್ಷಕರಿಗೆ ಮಾಹಿತಿಯನ್ನು ನೀಡುವ ಸಲುವಾಗಿ ಇಸ್ರೋವು ಗ್ಯಾಲರಿಯಲ್ಲಿ ದೊಡ್ಡ ಸ್ಕ್ರೀನ್ ಅನ್ನು ಅಳವಡಿಸಲು ನಿರ್ಧರಿಸಿದೆ.
ವೀಕ್ಷಣಾ ಗ್ಯಾಲರಿಯಲ್ಲಿ ಸೀಟು ಕಾಯ್ದಿರಿಸಲು ಆನ್ ಲೈನ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬೇಕಾಗಿದೆ, ಮೊದಲು ಬಂದವರಿಗೆ ಮೊದಲ ಆದ್ಯತೆಯ ಮೇರೆಗೆ ಸೀಟುಗಳನ್ನು ನೀಡಲಾಗುತ್ತದೆ.
ಜುಲೈ 15 ರಂದು ಶ್ರೀಹರಿಕೋಟದಲ್ಲಿರುವ ಇಸ್ರೋದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಬೆಳಿಗ್ಗೆ 2.51 ಕ್ಕೆ ಉಡಾವಣೆ ನಿಗದಿಪಡಿಸಲಾಗಿದೆ. ಸೆಪ್ಟೆಂಬರ್ 6 ರಂದು ಚಂದ್ರನ ಮೇಲ್ಮೈಯಲ್ಲಿ ಇದು ಇಳಿಯುತ್ತದೆ ಎಂದು ನಿರೀಕ್ಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.