ಲಾಹೋರ್: ತೀವ್ರ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಿರುವ ಪಾಕಿಸ್ಥಾನ ಕೊನೆಗೂ ಉಗ್ರ ಹಫೀಜ್ ಸೈಯದ್ ವಿರುದ್ಧ ಕ್ರಮ ಜರುಗಿಸಲು ಮುಂದಾಗಿದೆ. ಆತ ಮತ್ತು ಆತನ 12 ಸಹಚರರ ವಿರುದ್ಧ ಬುಧವಾರ ಪಾಕಿಸ್ಥಾನ ಆಡಳಿತ ‘ಭಯೋತ್ಪಾದನೆಗೆ ಹಣಕಾಸು ನೆರವು’ ನೀಡಿದ ಪ್ರಕರಣವನ್ನು ದಾಖಲು ಮಾಡಿದೆ.
ಪಾಕಿಸ್ಥಾನದ ಭಯೋತ್ಪಾದನಾ ನಿಗ್ರಹ ಇಲಾಖೆಯ ಪ್ರಕಾರ, ಜಮಾತ್ ಉದ್ ದಾವಾ ಮುಖ್ಯಸ್ಥನಾಗಿರುವ ಹಫೀಜ್ ಸೈಯದ್ ಮತ್ತು ಆತನ ಸಹಚರರು ಭಯೋತ್ಪಾದನೆಗೆ ಹಣಕಾಸು ನೆರವನ್ನು ನೀಡುವ ಸಲುವಾಗಿ 5 ಟ್ರಸ್ಟ್ಗಳನ್ನು ದುರ್ಬಳಕೆ ಮಾಡಿಕೊಂಡಿದ್ದರು.
“ಹಫೀಜ್ ಸೈಯದ್ ಮತ್ತು ಇತರ ಜಮಾದ್ ಉದ್ ದಾವಾ ನಾಯಕರ ವಿರುದ್ಧ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣವನ್ನು ದಾಖಲು ಮಾಡಲಾಗಿದೆ” ಎಂದು ಪಾಕಿಸ್ಥಾನದ ಭಯೋತ್ಪಾದನಾ ನಿಗ್ರಹ ಇಲಾಖೆ ಹೇಳಿದೆ.
ಗುರ್ಜನ್ವಾಲಾ, ಮುಲ್ತಾನ್ ಮತ್ತು ಲಾಹೋರಿನಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ. ಅಲ್ ಅನ್ಫಾಲ್, ದಾವತ್ ಉಲ್ ಇರ್ಷಾದ್ ಮತ್ತು ಮೌಝ ಬಿನ್ ಜಬಲ್ ಎಂಬ ಹೆಸರಿನ ಟ್ರಸ್ಟ್ಗಳ ಮೂಲಕ ಇವರುಗಳು ಭಯೋತ್ಪಾದಕರಿಗೆ ಹಣಕಾಸು ನೆರವನ್ನು ನೀಡುತ್ತಿದ್ದರು ಎಂದಿದೆ.
ಭಯೋತ್ಪಾದನೆಗಾಗಿ ಹಣವನ್ನು ಸಂಗ್ರಹಿಸಲು ಟ್ರಸ್ಟ್ಗಳನ್ನು ಬಳಸಿಕೊಳ್ಳುತ್ತಿರುವ ಮತ್ತು ನಿಯಂತ್ರಿಸುತ್ತಿರುವ ಬಗ್ಗೆ ಜಮಾತ್ ಉದ್ ದಾವಾ, ಲಷ್ಕರ್ ಇ ತೊಯ್ಬಾ ಮತ್ತು ಎಫ್ಐಎಫ್ ಸಂಘಟನೆಗಳ ಬಗ್ಗೆಯೂ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಹೇಳಿದೆ.
ಆರೋಪಿಗಳನ್ನು ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲಾಗುವುದು ಎಂದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.