ನವದೆಹಲಿ: ಭಾರತೀಯ ಯುವ ತಾಂತ್ರಿಕರನ್ನು ಮೂರರಿಂದ ಐದು ವರ್ಷಗಳ ಕಾಲ ವೃತ್ತಿ ತರಬೇತಿಗಾಗಿ ಜಪಾನಿಗೆ ಕಳುಹಿಸಿಕೊಡುವ ಬಗೆಗಿನ ಒಪ್ಪಂದಕ್ಕೆ ಜಪಾನ್ ಮತ್ತು ಭಾರತ ಪರಸ್ಪರ ಸಹಿ ಹಾಕಿವೆ.
ಹೆಚ್ಚುತ್ತಿರುವ ದ್ವಿಪಕ್ಷೀಯ ತಾಂತ್ರಿಕ ವಿನಿಮಯಗಳ ಜೊತೆಗೆ ಕೌಶಲ್ಯ ಅಭಿವೃದ್ಧಿ ಕ್ಷೇತ್ರದಲ್ಲೂ ಸಹಯೋಗವನ್ನು ಬಲಪಡಿಸಲು ಭಾರತ ಮತ್ತು ಜಪಾನ್ ಮುಂದಾಗಿವೆ. ಭಾರತದಲ್ಲಿನ ಜಪಾನ್ ರಾಯಭಾರಿ ಕೆಂಜಿ ಹಿರಮಟ್ಸು ಭಾನುವಾರ ದೆಹಲಿಯಲ್ಲಿ ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಮಹೇಂದ್ರನಾಥ ಪಾಂಡೆ ಅವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚೆ ನಡೆಸಿದರು.
ತಾಂತ್ರಿಕ ಇಂಟರ್ನ್ಶಿಪ್ ಕಾರ್ಯಕ್ರಮವನ್ನು ಚುರುಕುಗೊಳಿಸುವ ಪ್ರಸ್ತಾಪ ಮತ್ತು ಯುವಜನರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಸಲುವಾಗಿ ತಾಂತ್ರಿಕ ಇಂಟರ್ನೆಶಿಪ್ ಅನ್ನು ದೊಡ್ಡ ಪ್ರಮಾಣದಲ್ಲಿ ಜಾರಿಗೆ ತರುವ ಪ್ರಸ್ತಾಪದ ಬಗ್ಗೆಯೂ ಇವರಿಬ್ಬರು ಚರ್ಚಿಸಿದರು.
“ಪ್ರಸ್ತಾಪದ ಅನುಷ್ಠಾನದಿಂದಾಗಿ, ಮುಂದಿನ ದಿನಗಳಲ್ಲಿ ಭಾರತವು ಜಪಾನ್ನಿಂದ ಹೆಚ್ಚಿನ ಹೂಡಿಕೆಯನ್ನು ಕಾಣುವ ನಿರೀಕ್ಷೆ ಇದೆ. ಈ ಹಿಂದೆ, ಜಪಾನ್ ಭಾರತದಲ್ಲಿ ತನ್ನ ಕಂಪನಿಗಳ ಸಂಖ್ಯೆಯನ್ನು ಹೆಚ್ಚಿಸುವ ಮತ್ತು ಭಾರತೀಯ ಯುವಕರನ್ನು ತಾಂತ್ರಿಕ ಕೌಶಲ್ಯದಲ್ಲಿ ಹೆಚ್ಚು ಸಬಲೀಕರಣಗೊಳಿಸುವ ಮಹತ್ವಾಕಾಂಕ್ಷೆಯನ್ನು ವ್ಯಕ್ತಪಡಿಸಿತ್ತು” ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ತಾಂತ್ರಿಕ ತರಬೇತಿ ಕಾರ್ಯಕ್ರಮದಲ್ಲಿ ಸಹಕಾರವನ್ನು ಸಾಧಿಸುವ ಬಗ್ಗೆ ಎರಡೂ ದೇಶಗಳು ಒಪ್ಪಂದಕ್ಕೆ ಸಹಿ ಹಾಕಿವೆ, ಒಪ್ಪಂದದ ಅನ್ವಯ ಭಾರತೀಯ ತಾಂತ್ರಿಕ ಇಂಟರ್ನ್ಗಳನ್ನು ಮೂರರಿಂದ ಐದು ವರ್ಷಗಳ ಅವಧಿಗೆ ಉದ್ಯೋಗ ತರಬೇತಿಗಾಗಿ ಜಪಾನ್ಗೆ ಕಳುಹಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.