ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ದೇಶದಲ್ಲಿ ಜಾರಿಗೆ ಬಂದು ಇಂದಿಗೆ ಎರಡು ವರ್ಷಗಳಾಗಿವೆ. 2017ರ ಜೂನ್ 30 ಮತ್ತು ಜುಲೈ 1ರ ಮಧ್ಯರಾತ್ರಿ ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಜಿಎಸ್ಟಿಯನ್ನು ಅನಾವರಣಗೊಳಿಸಲಾಗಿತ್ತು. ಈ ಹಿನ್ನಲೆಯಲ್ಲಿ ಇಂದು ಕೇಂದ್ರ ಸರ್ಕಾರವು ಪ್ರಾಯೋಗಿಕವಾಗಿ ಜಿಎಸ್ಟಿಗಾಗಿ ಹೊಸ ರಿಟರ್ನ್ ಸ್ಟಿಸಮ್ ಅನ್ನು ಪರಿಚಯಿಸಲಿದೆ.
ಜಿಎಸ್ಟಿಯ ಎರಡನೇ ವರ್ಷಾಚರಣೆಯು ಇಂದು ದೆಹಲಿಯಲ್ಲಿ ಜರುಗಲಿದ್ದು, ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಠಾಕೂರ್ ಇದರ ನೇತೃತ್ವವನ್ನು ವಹಿಸಲಿದ್ದಾರೆ.
ಈ ಸಂದರ್ಭದ ಸ್ಮರಣಾರ್ಥ ಜಿಎಸ್ಟಿ ಮತ್ತು ಎಂಎಸ್ಎಂಇ ಕುರಿತ ಪುಸ್ತಕವನ್ನೂ ಬಿಡುಗಡೆ ಮಾಡಲಾಗುವುದು ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೇ, ಜಿಎಸ್ಟಿ ಅನುಷ್ಠಾನಕ್ಕೆ ಶ್ರಮಿಸಿದ ವಿಶೇಷ ಅಧಿಕಾರಿಗಳಿಗೆ ಜಿಎಸ್ಟಿ ಮೆಚ್ಚುಗೆ ಪ್ರಮಾಣಪತ್ರವನ್ನೂ ಈ ಸಂದರ್ಭದಲ್ಲಿ ಪ್ರದಾನಿಸಲಾಗುತ್ತಿದೆ.
ಜಿಎಸ್ಟಿಯ ಪರಿಚಯವು ಭಾರತೀಯ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ, ಇದು ಬಹು ಆಯಾಮದ, ಸಂಕೀರ್ಣ ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ಹೋಗಲಾಡಿಸಿ ಸರಳ, ಪಾರದರ್ಶಕ ಮತ್ತು ತಂತ್ರಜ್ಞಾನ-ಚಾಲಿತ ತೆರಿಗೆ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತಂದಿದೆ.
ಇದು ಅಂತರರಾಜ್ಯ ವ್ಯಾಪಾರ ಮತ್ತು ವಾಣಿಜ್ಯಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಿ ಭಾರತವನ್ನು ಏಕ ಮಾರುಕಟ್ಟೆಯನ್ನಾಗಿಸಿದೆ. ತೆರಿಗೆಗಳ ಸಂಕೀರ್ಣತೆ ಅನ್ನು ತೆಗೆದುಹಾಕುವ ಮೂಲಕ ಮತ್ತು ವಹಿವಾಟು ವೆಚ್ಚವನ್ನು ಕಡಿಮೆ ಮಾಡುವ ಮೂಲಕ, ಇದು ವ್ಯಾಪಾರವನ್ನು ಸುಲಲಿತಗೊಳಿಸಿದೆ ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಉತ್ತೇಜನವನ್ನೂ ನೀಡಿದೆ.
ಇದು ಜಿಎಸ್ಟಿಯ ಎರಡನೇ ವಾರ್ಷಿಕೋತ್ಸವವಾಗಿದ್ದು, ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಪ್ರಾಯೋಗಿಕವಾಗಿ ಜಿಎಸ್ಟಿಗಾಗಿ ಹೊಸ ರಿಟರ್ನ್ ಸ್ಟಿಸಮ್ ಅನ್ನು ಪರಿಚಯಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.