ನವದೆಹಲಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್ಎಂಇ) ಕೇಂದ್ರ ಸಚಿವರಾಗಿರುವ ನಿತಿನ್ ಗಡ್ಕರಿ ಅವರು ‘ಎಂಎಸ್ಎಂಇ ದಿನ 2019’ ಆಚರಣೆಯನ್ನು ಉದ್ಘಾಟಿಸಿದ್ದು, ಈ ವೇಳೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಗುರಿಯನ್ನು ತಲುಪಲು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಅತ್ಯಂತ ಅವಶ್ಯಕ ಎಂದು ಹೇಳಿದರು.
ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿಯವರು.”ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ನರೇಂದ್ರ ಮೋದಿಯವರ ಕನಸನ್ನು ಎಂಎಸ್ಎಂಇ ಕ್ಷೇತ್ರದ ಬೆಳವಣಿಗೆಯನ್ನು ಖಾತ್ರಿಪಡಿಸಿಕೊಳ್ಳುವುದರ ಮೂಲಕ ಮಾತ್ರ ಈಡೇರಿಸಲು ಸಾಧ್ಯ. ದೇಶದ ಜಿಡಿಪಿಗೆ ಎಂಎಸ್ಎಂಇ ಕ್ಷೇತ್ರದ ಕೊಡುಗೆಯನ್ನು ಶೇ.50 ಕ್ಕೆ ಹೆಚ್ಚಿಸಲು ನಾನು ಪ್ರಯತ್ನವನ್ನು ಆರಂಭಿಸಿದ್ದೇನೆ. ಪ್ರಸ್ತುತ ಶೇ.29 ರಷ್ಟು ಕೊಡುಗೆಯನ್ನು ಜಿಡಿಪಿಗೆ ಈ ಕ್ಷೇತ್ರ ನೀಡುತ್ತಿದೆ. ಪ್ರಸ್ತುತ 11.1 ಕೋಟಿಗಳ ಉದ್ಯೋಗವಕಾಶಗಳನ್ನು ಈ ಕ್ಷೇತ್ರ ನೀಡುತ್ತಿದ್ದು, ಇದನ್ನು 15 ಕೋಟಿಗೆ ಏರಿಸುವುದನ್ನು ಖಾತ್ರಿಪಡಿಸುತ್ತೇಚೆ “ಎಂದರು.
ಎಂಎಸ್ಎಂಇ ವಲಯದಲ್ಲಿ ಸಂಶೋಧನೆ ಮತ್ತು ನಾವೀನ್ಯತೆಯ ಅಗತ್ಯವನ್ನು ಒತ್ತಿ ಹೇಳಿದ ಅವರು, ಇವುಗಳನ್ನು ಜಾಗತಿಕ ಘಟಕಗಳೊಂದಿಗೆ ಸಹಯೋಗಗೊಳಿಸುವುದರಿಂದ ಈ ವಲಯದಲ್ಲಿ ಹೆಚ್ಚಿನ ತಂತ್ರಜ್ಞಾನವನ್ನು ತರಲಾಗುತ್ತದೆ ಎಂದು ಹೇಳಿದರು.
“ಈ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಪ್ರೋತ್ಸಾಹಿಸುವ ತುರ್ತು ಅವಶ್ಯಕತೆಯಿದೆ, ಇತ್ತೀಚಿನ ತಂತ್ರಜ್ಞಾನ ಮತ್ತು ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದಕ್ಕಾಗಿ ಜಾಗತಿಕ ಘಟಕಗಳೊಂದಿಗೆ ಸಹಯೋಗ ಮತ್ತು ಮಾರ್ಕೆಟಿಂಗ್ ಅನ್ನು ಉತ್ತೇಜಿಸುವುದು ಅಗತ್ಯವಾಗಿದೆ. ಜನರು ಹೊಸ ಆಲೋಚನೆಗಳು, ಸಲಹೆಗಳನ್ನು ಪೋಸ್ಟ್ ಮಾಡುವಂತಹ ಹೊಸ ವೆಬ್ಸೈಟ್ ರಚಿಸುವ ಬಗ್ಗೆ ನಾವು ಯೋಚಿಸುತ್ತಿದ್ದೇವೆ. ಇದು ಎಲ್ಲಾ ಪಾಲುದಾರರು ತಮ್ಮ ಸಲಹೆಗಳು, ತಂತ್ರಜ್ಞಾನಗಳನ್ನು ಹಂಚಿಕೊಳ್ಳಬಹುದಾದ ನಾವೀನ್ಯತೆ ಮತ್ತು ಆಲೋಚನೆಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ “ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.