ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಇಂದು ಸಂಸತ್ತಿನಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲೆ ವಂದನಾ ನಿರ್ಣಯವನ್ನು ಮಂಡಿಸಿದ್ದು, ಈ ವೇಳೆ ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, ಅದು ಇಷ್ಟು ದೊಡ್ಡ ಎತ್ತರಕ್ಕೆ ಏರಿದೆ ಎಂದರೆ ಅದು ಇನ್ನು ಮುಂದೆ ನೆಲವನ್ನು ಸಹ ನೋಡಲಾಗುವುದಿಲ್ಲ ಎಂದರು. ಈ ಮೂಲಕ ತನ್ನ ಮತ್ತು ಪಕ್ಷದ ಉದ್ದೇಶ ಉತ್ತುಂಗವನ್ನು ಏರುವುದಲ್ಲ, ಬದಲಾಗಿ ತಳಮಟ್ಟದಲ್ಲಿ ಭದ್ರವಾಗಿ ಬೇರೂರುವುದಾಗಿದೆ ಎಂದು ಸ್ಪಷ್ಟಪಡಿಸಿದರು.
17ನೇ ಲೋಕಸಭೆ ಮೊಟ್ಟ ಮೊದಲ ಅಧಿವೇಶನದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಿದರು. ಈ ವೇಳೆ, ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಬೆಂಬಲ ನೀಡಿದ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ, ಸದನದಲ್ಲಿರುವ ಎಲ್ಲ ಸಂಸದರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ರಾಷ್ಟ್ರಪತಿಯವರು ಭಾಷಣದಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಲು ಬದ್ಧರಿದ್ದೇವೆ. ಭಾರತವನ್ನು ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈ ಜೋಡಿಸಿದರೆ ಮಾತ್ರ ದೇಶ ಪ್ರಗತಿಯತ್ತ ಮುನ್ನಡೆಯಲು ಸಾಧ್ಯ ಎಂದರು.
1977 ರ ಜೂನ್ 25ರ ಮಧ್ಯರಾತ್ರಿ ನಮ್ಮ ಸಂವಿಧಾನದ ಆತ್ಮವನ್ನು ಧ್ವಂಸ ಮಾಡಿದರು. ಮಾಧ್ಯಮದ ಕತ್ತು ಹಿಸುಕಿದರು. ಒಬ್ಬ ವ್ಯಕ್ತಿಯ ಅಧಿಕಾರ ದಾಹಕ್ಕೆ ಇಡೀ ದೇಶವನ್ನೇ ಜೈಲಿನಂತಾಗಿಸಲಾಯಿತು. ಅದೊಂದು ಕರಾಳ ಅಧ್ಯಾಯ. ತುರ್ತು ಪರಿಸ್ಥಿತಿ ನಂತರ ಜನರು ಜಾತಿ, ಧರ್ಮವನ್ನು ಮೀರಿ ಪ್ರಜಾಪ್ರಭುತ್ವಕ್ಕಾಗಿ ಮತ ಚಲಾಯಿಸಿದರು ಎಂದರು.
2004 ರಿಂದ 2014 ರವರೆಗೆ ಅಧಿಕಾರದಲ್ಲಿದ್ದವರು ವಾಜಪೇಯಿ ಮತ್ತು ನರಸಿಂಹ ರಾವ್ ಸರ್ಕಾರವು ಮಾಡಿದ ಒಳ್ಳೆಯ ಕಾರ್ಯವನ್ನು ಯಾಕೆ ಶ್ಲಾಘಿಸಲಿಲ್ಲವೇಕೆ ಎಂದು ಅವರು ಪ್ರಶ್ನಿಸಿದರು.
ಕಳೆದ 7 ದಶಕಗಳಲ್ಲಿ ಆಗಿರುವ ಸಮಸ್ಯೆಗಳನ್ನು ಕೇವಲ 5 ವರ್ಷದಲ್ಲಿ ಬಗೆಹರಿಸುವುದು ಕಷ್ಟದಾಯಕ. ಆದರೆ ಈ ನಿಟ್ಟಿನಲ್ಲಿ ನಮ್ಮ ಹೆಜ್ಜೆ ಸರಿಯಾಗಿದೆ, ದಿಟ್ಟ ಹೆಜ್ಜೆಯಿಂದ ಮುನ್ನಡೆಯುತ್ತಿದ್ದೇವೆ. ಇದರಿಂದಾಗಿಯೇ ಜನರು ನಮಗೆ ಬೆಂಬಲ ನೀಡಿದ್ದಾರೆ. 2014 ರಲ್ಲಿ ಸಂಸತ್ ಪ್ರವೇಶಿಸಿದಾಗ ನೀಡಿದ ವಾಗ್ದಾನದಂತೆ ಬಡವರ ಪರವಾಗಿಯೇ ನಾನು ಮತ್ತು ನಮ್ಮ ಸರಕಾರ ಕೆಲಸ ಮಾಡಿದ್ದೇವೆ. ಮುಂದೆಯೂ ನಾವು ಇದೇ ಹಾದಿಯಲ್ಲೇ ನಡೆಯಲಿದ್ದೇವೆ. ಯಂಗ್ ಇಂಡಿಯಾ ನಿರ್ಮಾಣ ನಮ್ಮ ಗುರಿ. ಅಲ್ಲದೆ ಭ್ರಷ್ಟಾಚಾರದ ವಿರುದ್ಧದ ಹೋರಾಟವೂ ಮುಂದುವರಿಯುತ್ತದೆ ಮತ್ತು ಭಾರತವನ್ನು ವಿಶ್ವದ ಅಗ್ರ ಐದು ಆರ್ಥಿಕತೆಗಳಲ್ಲಿ ಒಂದನ್ನಾಗಿ ಮಾಡಲು ಪ್ರಯತ್ನಿಸಲಾಗುವುದು ಎಂದು ಮೋದಿ ಹೇಳಿದರು.
Replying to ‘Motion Of Thanks On the President’s Address’ in Lok Sabha https://t.co/oXpl0TMDOg
— Narendra Modi (@narendramodi) June 25, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.