ನವದೆಹಲಿ: ಸಂಕುಚಿತ ನೈಸರ್ಗಿಕ ಅನಿಲ (Compressed Natural Gas (CNG)) ಮತ್ತು ಪೈಪ್ ಮಾಡಿದ ನೈಸರ್ಗಿಕ ಅನಿಲ (Piped Natural Gas (PNG))ದ ಮೂಲಸೌಕರ್ಯಗಳನ್ನು 406 ಜಿಲ್ಲೆಗಳಿಗೆ ಸರ್ಕಾರ ವಿಸ್ತರಿಸುತ್ತಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
406 ಜಿಲ್ಲೆಗಳಲ್ಲಿ ಸಿಎನ್ಜಿ ಮತ್ತು ಪಿಎನ್ಜಿ ಮೂಲಸೌಕರ್ಯ ಒದಗಿಸಲಾಗುವುದು. ಈ ಸೌಲಭ್ಯಗಳನ್ನು ವಿಸ್ತರಿಸಿದ ನಂತರ, ಶೇಕಡಾ 70 ರಷ್ಟು ಜನರು ಶುದ್ಧ ಶಕ್ತಿಯನ್ನು ಪಡೆಯುತ್ತಾರೆ ”ಎಂದು ಲೋಕಸಭೆಯಲ್ಲಿ ಪ್ರಶ್ನೆಗೆ ಉತ್ತರಿಸುವಾಗ ಸಚಿವರು ಹೇಳಿದರು.
“2014 ರವರೆಗೆ ದೇಶದ 66 ಜಿಲ್ಲೆಗಳನ್ನು ಮಾತ್ರ ಸಿಎನ್ಜಿ ಮತ್ತು ಪಿಎನ್ಜಿ ಮೂಲಸೌಕರ್ಯಗಳ ವ್ಯಾಪ್ತಿಗೆ ಒಳಪಡಿಸಲಾಗಿತ್ತು. ಕಳೆದ ಐದು ವರ್ಷಗಳಲ್ಲಿ ನಾವು ಈ ಮೂಲಸೌಕರ್ಯವನ್ನು ಯೋಜಿತ ರೀತಿಯಲ್ಲಿ ಬಲಪಡಿಸಲು ಕೆಲಸ ಮಾಡಿದ್ದೇವೆ ”ಎಂದು ಸಚಿವರು ಲೋಕಸಭೆಯಲ್ಲಿ ತಮ್ಮ ಇಂಧನ ಕ್ಷೇತ್ರದ ಬಗೆಗಿನ ಯೋಜನೆಗಳನ್ನು ವಿವರಿಸಿದರು. ಮೂಲಸೌಕರ್ಯವನ್ನು ಇತರ ನಗರಗಳಿಗೂ ವಿಸ್ತರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಮುಂದಿನ ಎಂಟು ವರ್ಷಗಳಲ್ಲಿ ಸರ್ಕಾರವು ಇಂಧನ ವಲಯದಲ್ಲಿ 1.20 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.