ಲಕ್ನೋ: ಹಣ್ಣುಗಳ ರಾಜ ಮಾವಿನ ಹಣ್ಣಿನ ಮೇಳವು ಉತ್ತರಪ್ರದೇಶದ ಲಕ್ನೋದಲ್ಲಿ ಜರುಗಿದ್ದು, ಈ ವೇಳೆ 450 ಗ್ರಾಂ ತೂಕದ ‘ಮೋದಿ ಮ್ಯಾಂಗೋ’ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.
ಪ್ರಸಿದ್ಧ ದಶಾರಿ, ಚೌಸಾ, ಹೊಸ್ನಹರಾ, ಮಲ್ಲಿಕಾ, ಟಾಮಿ ಅಟ್ಕಿನ್ಸ್, ಕೇಸರ್ ಮತ್ತು ಲ್ಯಾಂಗ್ಡಾ ಸೇರಿದಂತೆ ಸುಮಾರು 700 ಬಗೆಯ ಮಾವಿನಹಣ್ಣಿನೊಂದಿಗೆ, ಸುಮಾರು 450 ಗ್ರಾಂ ತೂಕದ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಹೊಂದಿರುವ ‘ಮೋದಿ ಮ್ಯಾಂಗೋ’ ಎಲ್ಲರ ಗಮನವನ್ನು ಸೆಳೆಯಿತು.
“ಮೋದಿಜೀ ಅವರಂತೆಯೇ ‘ಮೋದಿ ಮ್ಯಾಂಗೋ’ ಕೂಡ ಸಾಕಷ್ಟು ಜನಪ್ರಿಯವಾಗಿದೆ. ಪ್ರಧಾನಿಯವರ 56 ಇಂಚುಗಳ ಎದೆಯಂತೆ, ಈ ಮಾವಿನ ಹಣ್ಣಿನ ಗಾತ್ರ ಕೂಡ ತುಂಬಾನೇ ಸ್ಪೆಷಲ್. ಇದಕ್ಕಾಗಿಯೇ ನಾವು ಈ ಮಾವಿಗೆ ‘ಮೋದಿ ಮ್ಯಾಂಗೋ’ ಎಂದು ಹೆಸರಿಟ್ಟಿದ್ದೇವೆ” ಎಂಬುದಾಗಿ ಮಾವು ಸಮಿತಿಯ ಪ್ರಧಾನ ಕಾರ್ಯದರ್ಶಿ ಉಪೇಂದ್ರ ಕುಮಾರ್ ಸಿಂಗ್ ಹೇಳಿದ್ದಾರೆ.
ಈ ಮಾವಿನ ಹಣ್ಣಿನ ಹೆಸರನ್ನು ದಾಖಲೆಗೊಳಪಡಿಸಿ, ಪೇಟೆಂಟ್ ಪಡೆಯುತ್ತೇವೆ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಪ್ರಧಾನಿ ಮೋದಿಯವರು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾವಿನ ಬಗೆಗಿನ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದರು. ಅನೇಕ ಮಾವು ಬೆಳೆಗಾರರು ತಮ್ಮ ಮಾವಿಗೆ ಅವರ ಹೆಸರನ್ನು ಇಟ್ಟಿದ್ದಾರೆ.
ಮಾವು ಮೇಳವನ್ನು ಉತ್ತರಪ್ರದೇಶ ಸರ್ಕಾರವು ತೋಟಗಾರಿಕೆ ಮತ್ತು ಆಹಾರ ಸಂಸ್ಕರಣೆ ಮತ್ತು ಉತ್ತರ ಪ್ರದೇಶ ಪ್ರವಾಸೋದ್ಯಮದೊಂದಿಗೆ ಸೇರಿ ಆಯೋಜನೆಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.